Site icon Vistara News

Bigg Boss Kannada | ಮನೆಯಿಂದ ಹೊರ ನಡೆದ ಸಾನ್ಯ ಅಯ್ಯರ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಆರನೇ ವಾರ ಸಾನ್ಯ ಅಯ್ಯರ್‌ ಮನೆಯಿಂದ ಹೊರ ನಡೆದಿದ್ದಾರೆ. ಒಟಿಟಿಯಿಂದ ಒಟಿಟಿ ಸೀಸನ್‌ ಟಿವಿ ಬಿಗ್ ಬಾಸ್‌ನಲ್ಲಿ ಸಖತ್ ಹೈಲೈಟ್ ಆಗಿದ್ದರು. ಟಾಸ್ಕ್, ಮನರಂಜನೆ, ಹೀಗೆ ಎಲ್ಲಾ ವಿಚಾರದಲ್ಲೂ ಸ್ಪರ್ಧಿಯಾಗಿ ಸಾನ್ಯ ಸೈ ಎನಿಸಿಕೊಂಡಿದ್ದರು.‌ ಸಾನ್ಯ ಮನೆಯಿಂದ ಹೊರ ನಡೆದ ಮೇಲೆ ರೂಪೇಶ್‌ ಶೆಟ್ಟಿ ಕಣ್ಣೀರು ಹಾಕಿದ್ದಾರೆ.

ಟಿವಿ ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಸಾನ್ಯ ಅಯ್ಯರ್ ಗುರುತಿಸಿಕೊಂಡಿದ್ದರು. ಜತೆಗೆ ರೂಪೇಶ್ ಶೆಟ್ಟಿ ಜತೆಗಿನ ಫ್ರೆಂಡ್‌ಶಿಪ್ ವಿಷ್ಯವಾಗಿ ಸಾನ್ಯ ಹೈಲೈಟ್ ಆಗಿದ್ದರು. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಇವರಿಬ್ಬರ ನಡುವಿನ ಗೆಳೆತನ ಗಟ್ಟಿಯಾಗುತ್ತಲೇ ಬಂದಿತ್ತು. ಹಿಂದಿನ ವಾರ ಮನೆಯ ಕ್ಯಾಪ್ಟನ್ಸಿ ನಿಭಾಯಿಸಿದ್ದರು. ಹಾಗೇ ಕಳಪೆ ಪ್ರದರ್ಶನ ನೀಡಿ ಜೈಲು ಸೇರಿದ್ದರು. ಕಿಚ್ಚ ಸುದೀಪ್‌ ಅವರಿಂದ ವೀಕೆಂಡ್‌ ಪಂಚಾಯಿತಿಯಲ್ಲಿ ರೂಪೇಶ್‌ ಶೆಟ್ಟಿ, ಆರ್ಯವರ್ಧನ್‌ ಮತ್ತು ಸಾನ್ಯ ಕ್ಯಾಪ್ಟನ್‌ ರೂಮ್‌ನಲ್ಲಿ ಮಲಗಿದ್ದ ವಿಚಾರಕ್ಕೆ ಪಿಕ್‌ನಿಕ್‌ ಸ್ಪಾಟ್‌ ಅಲ್ಲ ಎಂದು ಕಿಚ್ಚ ಅವರು ಕ್ಲಾಸ್‌ ತೆಗೆದುಕೊಂಡಿದ್ದರು. ಅಲ್ಲಿಂದ ರೂಪೇಶ್‌ ಶೆಟ್ಟಿ ಮತ್ತು ಸಾನ್ಯ ನಡುವೆ ಗ್ಯಾಪ್‌ ಕ್ರಿಯೇಟ್‌ ಆಗಿತ್ತು.

ಇದನ್ನೂ ಓದಿ | Bigg Boss Kannada | ಸಾನ್ಯ ಹಾಡಿನಲ್ಲಿ ಅಪಸ್ವರ: ನಡೆದಿದ್ದೇನು?

ಸಾನ್ಯ ಅಯ್ಯರ್‌ ಜ್ಯೂನಿಯರ್‌ ಪುಟ್ಟಗೌರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎಂಟನೇ ತರಗತಿವರೆಗೆ ಸಾನ್ಯ ಅಯ್ಯರ್‌ ನಟಿಸಿದ್ದರು. ಬಳಿಕ ನಟನೆಯಲ್ಲಿ ಸ್ವಲ್ಪ ಗ್ಯಾಪ್‌ ಪಡೆದುಕೊಂಡಿದ್ದರು. ಆರಾರೋ..ನೀಯಾರೋ ಆಲ್ಬಂ ಸಾಂಗ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಗುಲಾಬ್‌ ಜಾಮೂನ್‌ ಎಂಬ ಮೈಕ್ರೋ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ತಾಯಿ ದೀಪಾ ಅಯ್ಯರ್‌ ಕೂಡ ನಟಿಯಾಗಿದ್ದಾರೆ. ‘ಡ್ಯಾನ್ಸಿಂಗ್ ಸ್ಟಾರ್ಸ್‌’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಆಧ್ಯಾತ್ಮಿಕ ನೆಲೆಯನ್ನು ತುಂಬಾ ಇಷ್ಟ ಪಡುತ್ತಾರಂತೆ ನಟಿ ಸಾನ್ಯ.

ಇದನ್ನೂ ಓದಿ | Bigg Boss Kannada | ಸೇಫ್‌ ಆದ ಸ್ಪರ್ಧಿಗಳು ಯಾರು? ಆಟದ ಕುರಿತು ಕಿಚ್ಚ ನೀಡಿದ ಕ್ಲಾರಿಟಿ ಏನು?

Exit mobile version