Site icon Vistara News

Drone Prathap: ʻಡ್ರೋನ್‌ ಪ್ರತಾಪ್ʼ ವಿನ್ ಆಗದ್ದಕ್ಕೆ ಮೆಣಸಿನಕಾಯಿ ತಿಂದು ಅರ್ಧ ಮೀಸೆ, ಗಡ್ಡ ತೆಗೆದ ಅಭಿಮಾನಿ!

Bigg Boss Kannada Season 10 Drone Prathap Fan Shaves Half Of His Beard

ಬೆಂಗಳೂರು: `ಬಿಗ್‌ ಬಾಸ್‌ ಸೀಸನ್‌10’ರಲ್ಲಿ ಕಾರ್ತಿಕ್‌ ಮಹೇಶ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ಬಿಗ್‌ ಬಾಸ್‌ ಕನ್ನಡ ಮುಗಿದು ದಿನಗಳೇ ಕಳೆದರೂ ಸಹ, ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಸೀಸನ್‌ 10ರಲ್ಲಿ ಡ್ರೋಣ್‌ ಪ್ರತಾಪ್‌ ಮೊದಲ ರನ್ನರ್‌ ಅಪ್‌ ಆಗಿದ್ದಾರೆ. ಆದರೆ ಡ್ರೋನ್‌ ಪ್ರತಾಪ್‌ ಫ್ಯಾನ್ಸ್‌ಗೆ ನಿರಾಸೆ ಕೂಡ ಆಗಿದೆ. ಆದರೀಗ ʻಬಿಗ್ ಬಾಸ್ ಸೀಸನ್ 10ʼರಲ್ಲಿ ಡ್ರೋನ್ ಪ್ರತಾಪ್ ಸೋತದ್ದೇ ತಡ, ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಯುವಕನೋರ್ವ ಅರ್ಧ ಗಡ್ಡ, ಅರ್ಧ ಮೀಸೆ ತೆಗೆದು ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಅಬಿದ್ ಎಂಬಾತ ಈ ರೀತಿಯಲ್ಲಿ ಬೇಸರ ಹೊರ ಹಾಕಿದ್ದಾರೆ. ಬಿಗ್‌ ಬಾಸ್‌ ಫಿನಾಲೆಗೂ ಮುಂಚೆ ಇವರು ರೀಲ್ಸ್‌ ಹಂಚಿಕೊಂಡಿದ್ದರು. ʻʻಡ್ರೋನ್‌ ಪ್ರತಾಪ್‌ ಗೆದ್ದೇ ಗೆಲ್ಲುತ್ತಾರೆ. ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುತ್ತೇನೆʼʼ ಎಂದು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಚಾಲೆಂಜ್ ಹಾಕಿದ್ದರು. ಅಲ್ಲದೆ, ಹಸಿ ಮೆಣಸಿನಕಾಯಿ ತಿನ್ನುವುದಾಗಿ ಇನ್ನೊಂದು ವಿಡಿಯೊ ಕೂಡ ಹಂಚಿಕೊಂಡಿದ್ದರು. ʻʻಡ್ರೋನ್ ಪ್ರತಾಪ್ ಕರಿ ಸಿಂಹ, ಕರಿ ಚಿರತೆ ಪ್ರತಾಪ್ ವಿನ್ ಆಗೇ ಆಗುತ್ತಾನೆ. ವಿನ್ ಆಗಿಲ್ಲ ಅಂದ್ರೆ ನಾನು ನನ್ನ ಅರ್ಧ ಮೀಸೆ, ಅರ್ಧ ಗಡ್ಡ ತೆಗೆಯುತ್ತೇನೆ. ನಾನು ಕೊಟ್ಟ ಮಾತು ತಪ್ಪುವುದಿಲ್ಲ. ಸಂಗೀತಾ ಗೆದ್ದರೂ ಸಹ ನಾನು ನನ್ನ ಅರ್ಧ ಮೀಸೆ, ಅರ್ಧ ಗಡ್ಡ ತೆಗೆಯುತ್ತೇನೆʼʼ ಎಂದಿದ್ದರು. ಆದರೆ ಕೊನೆಗೆ ಆದದ್ದೇ ಬೇರೆ.

ಇದನ್ನೂ ಓದಿ: Drone Prathap: ಡ್ರೋನ್‌ ಪ್ರತಾಪ್‌ ವಿರುದ್ಧ 2.50 ಕೋಟಿ ರೂ. ಮಾನನಷ್ಟ ಕೇಸ್‌!

ಕಾರ್ತಿಕ್‌ ಮಹೇಶ್‌ ಟ್ರೋಪಿಗೆ ಮುತ್ತಿಟ್ಟರು. ಅಭಿರಾಜ್ ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಅಬಿದ್‌ ವಿಡಿಯೋ ಶೇರ್‌ ಮಾಡಿದ್ದರು. ಇದೀಗ ಈ ವಿಡಿಯೊಗೆ ನೆಟ್ಟಿಗರು ಬಗೆ ಬಗೆಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ʻʻಹೀಗೆ ಆಗಬಾರದಿತ್ತು ಪಾಪʼʼಎಂದು ಒಬ್ಬರು ಕಮೆಂಟ್‌ ಮಾಡಿದರೆ, ಮತ್ತೊಬ್ಬರು ʻʻಕಾರ್ತಿಕ್‌ ಗಾದ್ರೂ ಸಪೋರ್ಟ್‌ ಮಾಡಿದ್ದರೆ ವಿನ್‌ ಆಗುತ್ತಿದ್ರಿʼʼಎಂದು ಕಮೆಂಟ್‌ ಮಾಡಿದ್ದಾರೆ.

Exit mobile version