Site icon Vistara News

BBK SEASON 10: ʻಬಿಗ್‌ ಬಾಸ್‌ʼ ಫಿನಾಲೆ ಡೇಟ್‌ ಫಿಕ್ಸ್‌!

Bigg Boss Kannada Season 10 Finale On Jan 27th And 28th

ಬೆಂಗಳೂರು: ಕನ್ನಡ ಬಿಗ್‌ ಬಾಸ್‌ ಒಳ್ಳೆಯ (BBK SEASON 10) ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿದ್ದು ಅಕ್ಟೋಬರ್ 8ರಂದು. ಈ ಮೊದಲು ಹಲವು ಸೀಸನ್‌ಗಳು 100 ದಿನಕ್ಕೆ ಮುಂಚಿತವಾಗಿ ಮುಗಿದ್ದೂ ಇದೆ. ಆದರೆ ಈ ಬಾರಿ ಹೆಚ್ಚುವರಿಯಾಗಿ ಎರಡು ವಾರ ಬಿಗ್ ಬಾಸ್ ನಡೆಯಲಿದೆ. ‘ಇನ್ನೊಂದು ತಿಂಗಳಲ್ಲಿ ಬಿಗ್ ಬಾಸ್ ಫಿನಾಲೆ ಎಂದು ಸುದೀಪ್ ಹೇಳಿದ್ದಾರೆ. ಜನವರಿ 27 ಹಾಗೂ 28ರಂದು ಫಿನಾಲೆ ಎಪಿಸೋಡ್ ನಡೆಯಲಿದೆ ಎಂದು ವರದಿಯಾಗಿದೆ.

ಬಿಗ್ ಬಾಸ್​ನಲ್ಲಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ನಮ್ರತಾ ಗೌಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಮೈಕಲ್ ಅಜಯ್, ಸಿರಿ, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ ಇದ್ದಾರೆ. ಈ ವಾರ ಸಿರಿ ಎಲಿಮಿನೇಟ್ ಆಗಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿ ಹ್ಯಾಪಿ ಬಿಗ್‌ ಬಾಸ್‌ ಎಂದು ಶುರುವಾಗಿತ್ತು. ಅನೇಕ ಕ್ಷೇತ್ರದಿಂದ ಸ್ಪರ್ಧಿಗಳನ್ನು ತರಲಾಯಿತು. ವಿನಯ್‌ ಅವರು ಅಗ್ರೆಸಿವ್‌ ಆಗಿ ಆಡಿದರು. ಮಾತ್ರವಲ್ಲ ಗುಂಪುಗಾರಿಕೆ ಮಾಡಿದರು. ಆದರೆ ಅದ್ಯಾವುದು ಹೆಚ್ಚಿನ ದಿನ ಉಳಿಯಲಿಲ್ಲ.

ವಿನಯ್‌ ಅವರು ಸಾಕಷ್ಟು ಕೂಗಾಟ ನಡೆಸಿದ್ದಾಗ ಟಿಆರ್‌ಪಿ ಕೂಡ ಹೆಚ್ಚಾಗಿತ್ತು. ವಿನಯ್‌ ಹಾಗೂ ಸಂಗೀತಾ ಅವರ ಬಳೆ ಜಗಳ, ವರ್ತೂರ್‌ ಸಂತೋಷ್‌ ಅವರ ವಿವಾದ ಸಾಕಷ್ಟು ಸುದ್ದಿಯಾಗಿತ್ತು.ಬಿಗ್‌ ಬಾಸ್‌ನಿಂದಾಗಿ ಹಲವು ಧಾರಾವಾಹಿಗಳ ಟಿಆರ್‌ಪಿ ಕುಸಿದಿತ್ತು. ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ತಗ್ಗುತ್ತಲೇ ಇತ್ತು .‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿಯಲ್ಲಿ ಇಳಿಕೆ ಆಗಿತ್ತು. ಬಿಗ್ ಬಾಸ್ ಹಾಗೂ ಸೀತಾ ರಾಮ ಧಾರಾವಾಹಿಯ ಪ್ರಸಾರದ ಸಮಯ ಒಂದೇ ಆಗಿತ್ತು.

ಇದನ್ನೂ ಓದಿ: BBK SEASON 10: ಬಿಗ್‌ ಬಾಸ್‌ ಮನೆಯಿಂದ ಈ ವಾರ ಸಿರಿ ಔಟ್‌!

ಬಿಗ್‌ ಬಾಸ್‌ ಮನೆಯಿಂದ ಈ ವಾರ ಸಿರಿ ಔಟ್‌!

ಬಿಗ್‌ ಬಾಸ್‌ ಸೀಸನ್‌ 10 (BBK SEASON 10), ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಈ ವಾರ ಒಟ್ಟೂ ಎಂಟು ಮಂದಿ ನಾಮಿನೇಟ್‌ ಆಗಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ಮೈಕಲ್, ಸಂಗೀತಾ, ಕಾರ್ತಿಕ್, ಸಿರಿ ಹಾಗೂ ತನಿಷಾ ನಾಮಿನೇಟ್ ಆಗಿದ್ದಾರೆ. ನಮ್ರತಾ ಹಾಗೂ ಪ್ರತಾಪ್ ನಾಮಿನೇಷ್​ನಿಂದ ಬಚಾವ್ ಆಗಿದ್ದಾರೆ. ಇದೀಗ ಮೂಲಗಳ ಪ್ರಕಾರ ಈ ವಾರ ಸಿರಿ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವಾರವೇ ಸಿರಿ ಹೋಗಬೇಕಿತ್ತು ಎಂದು ವೀಕ್ಷಕರು ಅಭಿಪ್ರಾಯ ಹೊರ ಹಾಕಿದ್ದರು. ಕಳೆದ ವಾರವೇ ಮೈಕಲ್ ಮನೆಯಿಂದ ಆಚೆ ಬರಬೇಕಿತ್ತು. ಕಾರು ಏರಿ ಮನೆಯಿಂದ ಹೊರಟೂ ಬಿಟ್ಟಿದ್ದರು. ಆದರೆ, ಬಿಗ್ ಬಾಸ್ ಅಲ್ಲೊಂದು ಟ್ವಿಸ್ಟ್ ಕೊಟ್ಟಿದ್ದರು. ಪರಿಣಾಮ ಮೈಕಲ್ ಸೇಫ್ ಆದರು. ಆದರೆ, ಈ ಬಾರಿಯಾದರೂ ಮೈಕಲ್ ಮನೆಯಿಂದ ಹೊರ ಬರಲಿದ್ದಾರೆ ಎಂಬ ಲೆಕ್ಕಾಚಾರವಿತ್ತು. ಅದು ಸುಳ್ಳಾದಂತೆ ಕಾಣುತ್ತಿದೆ. ಸಿರಿ ಕೂಡ ಸ್ಟ್ರಾಂಗ್‌ ಸ್ಪರ್ಧಿ ಆಗಿರಲಿಲ್ಲ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version