ಬೆಂಗಳೂರು: ಟಿವಿ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ (Bigg Boss Kannada) ಪ್ರಸಾರದ ದಿನಾಂಕ ಪ್ರಕಟಗೊಂಡಿದೆ. ‘ಬಿಗ್ ಬಾಸ್’ಗೆ 10 ದಿನ ಬಾಕಿ ಇರುವಾಗ ಪ್ರಸಾರದ ಸಮಯವನ್ನು ಕಲರ್ಸ್ ಕನ್ನಡ ಮಾಹಿತಿ ಹಂಚಿಕೊಂಡಿದೆ. ಪ್ರತಿ ದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ಆರಂಭ ಆಗಲಿದೆ. ಈ ವಿಚಾರವನ್ನು ಹೊಸ ಪ್ರೋಮೊ ಮೂಲಕ ತಿಳಿಸಲಾಗಿದೆ. ಇನ್ನು, ಸ್ಪರ್ಧಿಗಳನ್ನು ಪರಿಚಯಿಸುವ ದಿನ ಅಂದರೆ ಮೊದಲ ದಿನ (ಅಕ್ಟೋಬರ್ 8) ಬಿಗ್ ಬಾಸ್ ಸಂಜೆ 6 ಗಂಟೆಗೆ ಆರಂಭ ಆಗಲಿದೆ.
ಕನ್ನಡ ಬಿಗ್ಬಾಸ್ 10ನೇ ಸೀಸನ್ ಪ್ರಸಾರ ಅಕ್ಟೋಬರ್ 08 ರಿಂದ ಆರಂಭವಾಗಲಿದೆ. ಪ್ರಸಾರದ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಸ್ಪರ್ಧಿಗಳು ಯಾರೆಲ್ಲ ಇರಬಹುದೆಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿವೆ. ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡುತ್ತಿರುವ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ವಾಹಿನಿ ಹಂಚಿಕೊಂಡಿದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಸೀಸನ್ 10ರ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದೆ ʻಚಾರ್ಲಿʼ!
ಬಿಗ್ ಬಾಸ್ ಹೊಸ ಪ್ರೋಮೊ
ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ. ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ ದೊಡ್ಮನೆಗೆ ಪ್ರವೇಶ ಕೊಡಲಿದ್ದಾರೆ ಎನ್ನುವ ಮಾಹಿತಿ ಇದೆ. ನಾಗಿಣಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಸೀರಿಯಲ್ ನಟಿ ನಮ್ರತಾ ಗೌಡ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತ ಜನಪ್ರಿಯತೆ ಪಡೆದ ಭೂಮಿಕಾ ಬಸವರಾಜ್ ಹೆಸರು ಬಿಗ್ ಬಾಸ್ ಲಿಸ್ಟ್‌ನಲ್ಲಿದೆ.
ಈ ಹಿಂದಿನ ಬಾರಿಯಂತೆ ಈ ಬಾರಿಯೂ ಜನಪ್ರಿಯ ಟಿವಿ, ಸಿನಿಮಾ ತಾರೆಯರ ಜತೆಗೆ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಸಹ ಬಿಗ್ಬಾಸ್ ಮನೆ ಸೇರಲಿದ್ದಾರೆ. ಇದು ಹತ್ತನೇ ಸೀಸನ್ ಆಗಿರುವ ಕಾರಣ ಭಿನ್ನವಾಗಿ, ಅದ್ಧೂರಿಯಾಗಿ ಬಿಗ್ಬಾಸ್ ರಿಯಾಲಿಟಿ ಶೋ ಇರಲಿದೆ ಎನ್ನಲಾಗುತ್ತಿದೆ. ಸಾಮಾನ್ಯರೂ ಈ ಬಾರಿ ಬಿಗ್ಬಾಸ್ ಮನೆ ಸೇರುವ ಸಾಧ್ಯತೆ ಇದೆ. ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೊನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ.
ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೊದಲ್ಲಿ ತೋರಿಸಲಾಗಿದೆ. ಈ ಮೂಲಕ ನೋಡುಗರಿಗೆ ಭಾರಿ ಕುತೂಹಲ ಹುಟ್ಟುಹಾಕಿದೆ. ಇನ್ನು ಈ ಬಾರಿ ಯಾವ ಯಾವ ಸ್ಪರ್ಧಿಗಳು ಬಿಗ್ಬಾಸ್ ಮನೆ ಸೇರಲಿದ್ದಾರೆ ಎಂಬ ಕುತೂಹಲ ನೋಡುಗರಿಗೆ ಹೆಚ್ಚಾಗಿದೆ.