Site icon Vistara News

Bigg Boss Kannada | ಬಿಗ್‌ ಬಾಸ್‌ ಸೀಸನ್‌-9 : 18 ಸ್ಪರ್ಧಿಗಳ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ!

Bigg Boss Kannada

ಬೆಂಗಳೂರು : ಕನ್ನಡ ಕಿರುತೆರೆಯಲ್ಲೇ ಖ್ಯಾತ ರಿಯಾಲಿಟಿ ಶೋ ಎಂದೆನಿಸಿಕೊಂಡ ಬಿಗ್ ಬಾಸ್ (Bigg Boss Kannada) ತನ್ನ ಒಂಬತ್ತನೇ ಆವೃತ್ತಿಯಲ್ಲಿ 18 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯನ್ನು ಪ್ರವೇಶಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.

೧. ಅರುಣ್‌ ಸಾಗರ್‌

ಬಿಗ್‌ ಬಾಸ್‌ ಸೀಸನ್‌ 9ಕ್ಕೆ ಸೀಸನ್‌ 1ರ ರನ್ನರ್‌ಅಪ್‌ ಅರುಣ್‌ ಸಾಗರ್‌ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 1ರಲ್ಲಿ ಅರುಣ್‌ ಸಾಗರ್‌ ಪ್ರೇಕ್ಷಕರನ್ನು ಹೆಚ್ಚು ರಂಜಿಸಿದವರು. ಆದರೆ ಸೀಸನ್‌ ಒಂದರಲ್ಲಿ ಗೆದ್ದದ್ದು ವಿಜಯ್‌ ರಾಘವೇಂದ್ರ. ಆ ಸೀಸನ್‌ನಲ್ಲಿ ಅರುಣ್ ಸಾಗರ್ ವಿನ್ನರ್ ಆಗಬೇಕು ಎಂಬುದು ಬಹುತೇಕರ ಇಚ್ಛೆಯಾಗಿತ್ತು. 

2. ನಟಿ ಮಯೂರಿ

ಎರಡನೇ ಸ್ಪರ್ಧಿಯಾಗಿ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಮುಯೂರಿ ಬಿಗ್‌ ಬಾಸ್‌ ಮನೆಗೆ ಹೊಸ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ.

3. ದೀಪಿಕಾ ದಾಸ್‌

ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಹಳೆಯ ಸ್ಪರ್ಧಿ ದೀಪಿಕಾ ದಾಸ್‌ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ ‘ನಾಗಿಣಿ’ ಧಾರಾವಾಹಿ ಮೂಲಕ ಮನೆಮಾತಾಗಿದ್ದರು ದೀಪಿಕಾ ದಾಸ್‌. ಬಿಗ್‌ ಬಾಸ್‌ನಲ್ಲಿ ಶೈನ್‌ ಶೆಟ್ಟಿ ಹಾಗೂ ದೀಪಿಕಾ ದಾಸ್‌ ನಡುವಿನ ಫ್ರೆಂಡ್‌ಶಿಪ್‌ ಹೈಲೈಟ್‌ ಆಗಿತ್ತು. ಕಿರುತೆರೆ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲೂ ದೀಪಿಕಾ ದಾಸ್ ನಟಿಸುತ್ತಿದ್ದಾರೆ.

4. ನವಾಜ್‌

ನಾಲ್ಕನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ವಿಮರ್ಶೆಗೆ ಸಂಬಂಧಪಟ್ಟಂತೆ ರೈಮಿಂಗ್‌ ಸಾಲುಗಳನ್ನು ಹೇಳುವ ಮೂಲಕ ಹಾಗೂ ವಿಶೇಷ ಮ್ಯಾನರಿಸಂ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿದ್ದ ನವಾಜ್‌ ಎಂಟ್ರಿ ಆಗಿದ್ದಾರೆ.

5. ದಿವ್ಯಾ ಉರುಡುಗ

ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಮೇಲೆ ದಿವ್ಯಾ ಉರುಡುಗ ಅವರನ್ನು ಕೆಪಿ ಅರವಿಂದ್‌ ವೇದಿಕೆ ಮೇಲೆ ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು.

6. ದರ್ಶ್ ಚಂದ್ರಪ್ಪ

ಆರನೇ ಸ್ಪರ್ಧಿಯಾಗಿ ದರ್ಶ್ ಚಂದ್ರಪ್ಪ ಪ್ರವೇಶ ಪಡೆದಿದ್ದಾರೆ. ಸೀತಾ ವಲ್ಲಭ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ ದರ್ಶ್ ಚಂದ್ರಪ್ಪ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ. ಗೆಳೆಯರ ಸಲಹೆಯ ಮೇರೆಗೆ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದರ್ಶ್ ಪ್ರತಿಷ್ಠಿತ ಬ್ರ್ಯಾಂಡ್ ಹಣೆಪಟ್ಟಿಯುಳ್ಳ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

7. ಪ್ರಶಾಂತ್‌ ಸಂಬರಗಿ

ಏಳನೇ ಸ್ಪರ್ಧಿಯಾಗಿ ಹಳೆಯ ಬಿಗ್‌ ಬಾಸ್‌ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಕೂಡ ವಿತರಕರಾಗಿ ಗುರುತಿಸಿಕೊಂಡವರು. ಡ್ರಗ್ಸ್‌ ವಿಚಾರದಲ್ಲಿ ಕೆಲವು ಕಲಾವಿದರ ವಿರುದ್ಧ ನೇರ ಆರೋಪ ಮಾಡಿ ಸುದ್ದಿಯಾದವರು

8. ಅಮೂಲ್ಯ ಓಂಕಾರ ಗೌಡ

ಎಂಟನೇ ಸ್ಪರ್ಧಿಯಾಗಿ ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಓಂಕಾರ ಗೌಡ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ. ಕಮಲಿ ಧಾರಾವಾಹಿ ಮುಕ್ತಾಯವಾಗುತ್ತಿದೆ, ಪರಭಾಷೆಯಲ್ಲಿಯೂ ಅಮೂಲ್ಯ ನಟಿಸುತ್ತಿದ್ದಾರೆ. 

9. ಸಾನ್ಯ ಅಯ್ಯರ್‌

ಸಾನ್ಯ ೫ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಒಟಿಟಿ ಮನೆ ಪ್ರವೇಶಿಸಿದ್ದರು. ಸಾನ್ಯ ಅಯ್ಯರ್‌ ಜ್ಯೂನಿಯರ್‌ ಪುಟ್ಟಗೌರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು

10. ರೂಪೇಶ್‌ ಶೆಟ್ಟಿ

ಹತ್ತನೇ ಸ್ಪರ್ಧಿಯಾಗಿ ರೂಪೇಶ್‌ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟ, ನಿರ್ದೇಶಕ ಮತ್ತು ಖಾಸಗಿ ಎಫ್‌ಎಂ ವಾಹಿನಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ರೂಪೇಶ್‌ ಶೆಟ್ಟಿ ಬಿಗ್‌ ಬಾಸ್‌ ಮನೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ.

11. ವಿನೋದ್ ಗೊಬ್ಬರಗಾಲ

ಸನ್‌ 9ಗೆ 11ನೇ ಸ್ಪರ್ಧಿಯಾಗಿ (Bigg Boss Kannada) ವಿನೋದ್ ಗೊಬ್ಬರಗಾಲ ಪ್ರವೇಶ ಪಡೆದಿದ್ದಾರೆ. ಗಿಚ್ಚಿ ಗಿಲಿಗಿಲಿ ಶೋ ರನ್ನರ್ ಅಪ್ ವಿನೋದ್ ಗೊಬ್ಬರಗಾಲ ಹೊರಹೊಮ್ಮಿದ್ದರು. ‘ಮಜಾ ಭಾರತ’ದಲ್ಲಿಯೂ ಖ್ಯಾತಿಯನ್ನು ಹೊಂದಿದ್ದರು ವಿನೋದ್ ಗೊಬ್ಬರಗಾಲ.

12. ನೇಹಾ ಗೌಡ

2ನೇ ಸ್ಪರ್ಧಿಯಾಗಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಗ್ರ್ಯಾಂಡ್‌ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ‘ಸ್ವಾತಿ ಚುನುಕುಲು’ ಇವರ ಧಾರಾವಾಹಿ. ಅಷ್ಟೇ ಅಲ್ಲದೆ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಕಲ್ಯಾಣ ಪರಿಸು’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

13.ರೂಪೇಶ್ ರಾಜಣ್ಣ

13ನೇ ಸ್ಪರ್ಧಿಯಾಗಿ ಕನ್ನಡಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರೂಪೇಶ್ ರಾಜಣ್ಣ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ.

14. ರಾಕೇಶ್‌ ಅಡಿಗ

ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿ ಹೆಚ್ಚಾಗುತ್ತಿರುವಂತೆಯೇ ಗಾಂಜಾ ಲೀಗಲ್ ಮಾಡಿ ಎಂದು ನಟ ರಾಕೇಶ್‌ ಒತ್ತಾಯಿಸಿರುವುದು ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ʻಯಾರೇ ಕೂಗಾಡಲಿʼ, ʻನಂದ ಗೋಕುಲʼ ʻಮಂದಹಾಸʼ, ʻʻಪ್ರೀತಿಯಿಂದ ʼಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

15. ಆರ್ಯವರ್ಧನ್‌ ಗುರೂಜಿ

ಆರ್ಯವರ್ಧನ್‌ ಗುರೂಜಿ ಅವರು ಸಂಖ್ಯಾಶಾಸ್ತ್ರ ತಜ್ಞರಾಗಿದ್ದಾರೆ. ಇವರು ಐಪಿಎಲ್‌ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸಂಖ್ಯಾಬಲದ ಮೂಲಕ ಯಾವ ತಂಡ ಗೆಲ್ಲುತ್ತದೆ? ಸೋಲುತ್ತದೆ ಎಂಬ ಬಗ್ಗೆ ಊಹಿಸುತ್ತಿದ್ದರು.

16.ಐಶ್ವರ್ಯ ಪಿಸೆ

ಬಿಗ್‌ ಬಾಸ್‌ ಸೀಸನ್‌ 9ರ 16ನೇ ಸ್ಪರ್ಧಿಯಾಗಿ (Bigg Boss Kannada) ಐಶ್ವರ್ಯ ಪಿಸೆ ನ್ಯಾಷನಲ್‌ ರೋಡ್‌ರೇಸ್‌ನಲ್ಲಿ ಮಿಂಚಿದ ಬೆಂಗಳೂರಿನ ಬೆಡಗಿ. ಮೋಟಾರ್‌ ಸ್ಪೋರ್ಟ್ಸ್ ಜಗತ್ತಿನಲ್ಲಿ ಉದಯೋನ್ಮುಖ ಮಹಿಳಾ ರೇಸರ್‌ ಆಗಿ ಹೊರಹೊಮ್ಮುತ್ತಿದ್ದಾರೆ.

17. ಕಾವ್ಯಶ್ರೀ ಗೌಡ

ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ 17ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ.

18. ಅನುಪಮಾ ಗೌಡ

ಬಿಗ್‌ ಬಾಸ್‌ ಟಿವಿ ಸೀಸನ್‌ 9ನೇ (Bigg Boss Kannada) ಆವೃತ್ತಿಗೆ ಈಗಾಗಲೇ 17 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದಾರೆ. ಈ ಸೀಸನ್‌ನ ಕೊನೆಯ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಹಳೆಯ ಸ್ಪರ್ಧಿ ಅನುಪಮಾ ಗೌಡ ಮನೆಗೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್‌ ಬಾಸ್‌ ಮನೆಗೆ ಕೊನೆಯ ಸ್ಪರ್ಧಿಯಾಗಿ ಅನುಪಮಾ ಗೌಡ ಪ್ರವೇಶ!

Exit mobile version