Site icon Vistara News

Bigg Boss Kannada | ಸ್ಪರ್ಧಿಗಳು ಹದಿನೆಂಟು, ಯಾರದ್ದೆಲ್ಲ ಹೆಸರುಂಟು?

Bigg Boss Kannada

ಬೆಂಗಳೂರು : ಕನ್ನಡ ಕಿರುತೆರೆಯಲ್ಲೇ ಖ್ಯಾತ ರಿಯಾಲಿಟಿ ಶೋ ಎಂದೆನಿಸಿಕೊಂಡ ಬಿಗ್ ಬಾಸ್ (Bigg Boss Kannada) ತನ್ನ ಒಂಬತ್ತನೇ ಆವೃತ್ತಿ ಆರಂಭ ಮಾಡುತ್ತಿದೆ. ಇತ್ತೀಚೆಗಷ್ಟೆ ಬಿಗ್‌ ಬಾಸ್‌ ಒಟಿಟಿ ಮುಕ್ತಾಯಗೊಂಡಿದ್ದು, ಟಿವಿ ಶೋನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗಲಿದೆ.

ಈ ಬಾರಿ ಒಟ್ಟು 18 ಸ್ಪರ್ಧಿಗಳು ಇರಲಿದ್ದು ಒಟಿಟಿಯಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಸ್ಪರ್ಧಿಗಳು, ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದ್ದ ಐದು ಜನ ಇವರ ಜತೆಗೆ ಇನ್ನುಳಿದ 9 ಜನ ಹೊಸಬರು ಈ ಶೋನಲ್ಲಿ ಇರಲಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಸಂಜೆ 6ಕ್ಕೆ ಗ್ರ್ಯಾಂಡ್ ಓಪನ್ ಆಗಲಿದ್ದು ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಆರಂಭ ಆಗಲಿದೆ.

ಇದನ್ನೂ ಓದಿ | Bigg Boss kannada | ನಾಳೆಯಿಂದ ಶುರುವಾಗ್ತಿದೆ ಬಿಗ್ ಬಾಸ್ ಸೀಸನ್ 9: ಏನೆಲ್ಲ ವಿಶೇಷತೆ ಇದೆ?

ಕಲರ್ಸ್‌ ಕನ್ನಡ ಈಗಾಗಲೇ ಪ್ರೊಮೊ ಹಂಚಿಕೊಂಡಿದ್ದು ಕಿಚ್ಚನ ಲುಕ್‌ ಕೂಡ ಬಿಡುಗಡೆಗೊಳಿಸಿದೆ. ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿಗಳಾದ ಆರ್ಯವರ್ಧನ್‌ ಗುರೂಜಿ ಹಾಗೂ ಸಾನ್ಯ ಅಯ್ಯರ್‌, ರಾಕೇಶ್‌ ಅಡಿಗ, ರೂಪೇಶ್‌ ಶೆಟ್ಟಿ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ. ಹಳೆಯ ಸ್ಪರ್ಧಿಗಳಾದ ಅನುಪಮಾ ಗೌಡ, ದೀಪಿಕಾ ದಾಸ್‌, ದಿವ್ಯಾ ಉರುಡುಗ, ಪ್ರಶಾಂತ್‌ ಸಂಬರಗಿ, ಅರುಣ್‌ ಸಾಗರ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಹೊಸ ಸ್ಪರ್ಧಿಗಳು ಯಾರೆಂಬುದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ಹಾಗೂ ಸಾಕಷ್ಟು ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಅದರಲ್ಲಿ ಆಫ್​ರೋಡ್ ಬೈಕ್ ರೇಸರ್ ಐಶ್ವರ್ಯಾ, ಮಂಗಳ ಗೌರಿ ಮದುವೆ ಖ್ಯಾತಿಯ ಕಾವ್ಯಶ್ರೀ ಗೌಡ, ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ, ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ವಿಮರ್ಶೆ ಸೆನ್ಸೇಷನ್ ಸೃಷ್ಟಿ ಮಾಡಿದ್ದ ನವಾಜ್‌, ಲಕ್ಷೀ ಬಾರಮ್ಮ ಖ್ಯಾತಿಯ ನೇಹಾ ಗೌಡ, ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ, ಮಾಡೆಲ್‌ ದರ್ಶ್‌ ಚಂದ್ರಪ್ಪ, ನಟಿ ರಮೋಲ ಮತ್ತು ಬೈಕ್ ರೇಸರ್‌ ಸಂದೇಶ್​ ಪ್ರಸನ್ನ ಕುಮಾರ್. ಇನ್ನುಳಿದಂತೆ ಕ್ರಿಕೆಟಿಗ ವಿನಯ್ ಕುಮಾರ್ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಹೋಗಲಿದ್ದಾರೆ ಎಂಬ ವದಂತಿಗಳು ಇವೆ. ಆದರೆ ವಿನಯ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದಿನ ಸೀಸನ್‌ಗಳಲ್ಲಿ ಕ್ರಿಕೆಟ್ ಕ್ಷೇತ್ರದಿಂದ ದೊಡ್ಡ ಗಣೇಶ್, ಎನ್ ಸಿ ಅಯ್ಯಪ್ಪ ಭಾಗವಹಿಸಿದ್ದರು.

ಇದನ್ನೂa ಓದಿ| Bigg Boss Kannada | ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್‌: ಈ 4 ಸ್ಪರ್ಧಿಗಳು ಸೀಸನ್‌ 9ಕ್ಕೆ ಎಂಟ್ರಿ, ಟಾಪರ್ ಆದ ರೂಪೇಶ್! 

Exit mobile version