Site icon Vistara News

Bigg Boss Kannada | ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ಫಿನಾಲೆ ಡೇಟ್‌ ಫೀಕ್ಸ್‌: ಈ ವಾರ ಡಬಲ್‌ ಎಲಿಮಿನೇಷನ್‌ ಸಾಧ್ಯತೆ!

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 (Bigg Boss Kannada) ಸೆಪ್ಟೆಂಬರ್‌ 24ರಲ್ಲಿ ಪ್ರಾರಂಭಗೊಂಡಿತ್ತು. ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯಲಿದೆ. 

ಯಾರೆಲ್ಲ ಸ್ಪರ್ಧಿಗಳು ಭಾಗವಹಿಸಿದ್ದರು?
ಒಟ್ಟು 18 ಸ್ಪರ್ಧಿಗಳು ಈ ಬಾರಿ ದೊಡ್ಮನೆಯೊಳಗಡೆ ಎಂಟ್ರಿ ಪಡೆದುಕೊಂಡಿದ್ದರು. ಬಿಗ್ ಬಾಸ್ ಕನ್ನಡ ಒಟಿಟಿ ಶೋ ಟಾಪ್ 4 ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಜತೆ ಹೊಸ 9 ಸ್ಪರ್ಧಿಗಳು, ಕಳೆದ ಸೀಸನ್‌ಗಳಿಂದ 5 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದುಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಹಾವು – ಏಣಿ ಆಟಕ್ಕೆ ಮಂಜು ಪಾವಗಡ ಸ್ಪೆಷಲ್ ಗೆಸ್ಟ್: ರಾಕೇಶ್‌ ಅಡಿಗ ಕಕ್ಕಾ ಬಿಕ್ಕಿ ಆಗಿದ್ದೇಕೆ?

ಇದೀಗ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಅನಿವಾರ್ಯವಾಗಿ ಡಬಲ್ ಎಲಿಮಿನೇಷನ್ ನಡೆಯಬೇಕಾಗುತ್ತದೆ. ಮೊದಲ ದಿನ ಬಿಗ್ ಬಾಸ್ ಮನೆಗೆ ಬಂದವರು 9 ನವೀನರು 9 ಹಳೆಯ ಸ್ಪರ್ಧಿಗಳು. ಉಳಿದಿರುವುದು ಎರಡೇ ವಾರ. ಫಿನಾಲೆಯ ವೇದಿಕೆಯ ಮೇಲೆ ಐವರಿಗೆ ಮಾತ್ರ ಅವಕಾಶ ಇರುವುದರಿಂದ ಈ ವಾರ ಇಬ್ಬರು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವುದು ನೋಡುಗರಿಗೆ ಕುತೂಹಲ ಹೆಚ್ಚಾಗಿದೆ. 

ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಮಂದಿಗೆ ಪತ್ರ ಬರೆದ ಅರುಣ್‌ ಸಾಗರ್‌: ಫುಲ್‌ ಖುಷ್‌ ಆದ್ರು ಸ್ಪರ್ಧಿಗಳು!

Exit mobile version