Site icon Vistara News

Bigg Boss Kannada | ಮುಂದೆ ಮನೆಯಲ್ಲಿ ಬೇಜಾನ್‌ ಹಬ್ಬ ಇದೆ ಎಂದ ನವಾಜ್‌: ಮೊದಲ ದಿನದ ಟಾಸ್ಕ್‌ ವಿನ್ನರ್‌ ಈ ಜೋಡಿ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9 (Bigg Boss Kannada) ಈಗಾಗಲೇ ಪ್ರಾರಂಭಗೊಂಡಿದೆ. ಬಿಗ್‌ ಬಾಸ್‌ಮನೆಯಲ್ಲಿ ನವೀನರ ಜತೆ ಪ್ರವೀಣರ ಜಟಾಪಟಿ ನಡೆಯುತ್ತಿದೆ. ಮೊದಲ ದಿನದಂದು ನಾಮಿನೇಷನ್‌ ಪ್ರಕ್ರಿಯೆ ಶುರುವಾಗಿದ್ದು, ಟಾಸ್ಕ್‌ನ್ನು ಬಿಗ್‌ ಬಾಸ್‌ ನೀಡಿದ್ದಾರೆ. ಈ ವಾರ ಮೊದಲ ಸೀಸನ್‌ನಲ್ಲಿ ಪ್ರಶಾಂತ್‌ ಸಂಬರಗಿ ಹಾಗೂ ವಿನೋದ್ ಗೊಬ್ಬರಗಾಲ ಜೋಡಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಬಿಗ್‌ ಬಾಸ್‌ ಪ್ರವೀಣರಿಗೆ ಒಬ್ಬರನ್ನು ಆಯ್ಕೆ ಮಾಡುವ ಟಾಸ್ಕ್‌ನ್ನು ಬಿಗ್‌ ಬಾಸ್‌ ನೀಡಿತ್ತು. ಅದರಲ್ಲಿ ನವೀನರು ತಮ್ಮ ವೀಕ್‌ನೆಸ್‌ ಹಾಗೂ ಸ್ಟ್ರಾಂಗ್‌ ಪಾಯಿಂಟ್‌ ಯಾವುದು ಎಂಬುದು ವಿವರಣೆ ಕೊಡಬೇಕಿತ್ತು. ನಂತರ ಪ್ರವೀಣರು ವಿವರಣೆ ಅನುಸಾರ ನವೀನರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ನವೀನರಿಗೂ ಹಾಗೂ ಪ್ರವೀಣರಿಗೂ ರಿಜೆಕ್ಟ್‌ ಮಾಡುವ ಸ್ವಾತಂತ್ರ್ಯ ಬಿಗ್‌ ಬಾಸ್‌ ನೀಡಿದ್ದರು. ಇಬ್ಬರೂ ಒಪ್ಪಿಗೆ ಸೂಚಿಸಿದ್ದಲ್ಲಿ ಆ ಜೋಡಿಗೆ ಬೆಲ್ಟ್‌ ಅನ್ನು ನೀಡಲಾಗಿತ್ತು. ‌

ಇದನ್ನೂ ಓದಿ | Bigg Boss Kannada | ಮೊದಲ ದಿನವೇ ಬಿಸಿಬಿಸಿ ವಾತಾವರಣ: ಹಳೇ ಚಾಳಿ ಮುಂದುವರಿಸಿದ ಪ್ರಶಾಂತ್‌ ಸಂಬರಗಿ!

ಖಡಕ್‌ ಆಗಿ ವಿವರಣೆ ನೀಡಿದ ನವಾಜ್‌
ಈಗಾಗಲೇ ಬಿಗ್‌ ಬಾಸ್‌ ಹಿಂದಿನ ಸ್ಪರ್ಧಿಗಳ ಮುಂದೆ ಹೊಸಬರು ತಮ್ಮ ಬಗ್ಗೆ ವಿವರಣೆ ನೀಡಬೇಕಿತ್ತು. ಈ ಸಂದರ್ಭದಲ್ಲಿ ನವಾಜ್‌ ʻʻನಾನು ತುಂಬಾ ಕೋಪದ ವ್ಯಕ್ತಿ. ಮುಂದೆ ಮನೆಯಲ್ಲಿ ಬೇಜಾನ್‌ ಹಬ್ಬ ಇದೆ. ಸ್ವಲ್ಪ ಮೆಂಟಲ್‌ ನಾನುʼʼ ಎಂದು ಖಡಕ್‌ ಆಗಿ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಕಾವ್ಯಶ್ರೀ ಗೌಡ ʻʻನಾನು ಯಾರ ತಂಟೆಗೂ ಹೋಗುವುದಿಲ್ಲ. ಮಂಗಳ ಗೌರಿಯಲ್ಲಿ ಇದ್ದ ಹಾಗೆ ಇಲ್ಲ. ನಾನು ಆ ಪಾತ್ರದ ವಿರುದ್ಧ ಇದ್ದೇನೆ. ಅಳುವುದೇ ಇಲ್ಲʼʼ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ದರ್ಶ್‌ ಚಂದ್ರಪ್ಪ ʻನಾನು ಯುದ್ಧಕ್ಕೆ ನಿಂತಮೇಲೆ ತಲೆಗಳ ಮೇಲೆ ಲೆಕ್ಕ ಹಾಕಲ್ಲ ಎಂದುʼʼ ಅಬ್ಬರಿಸಿದರು. ಇನ್ನೂ ಮಯೂರಿ, “ಶಿಸ್ತು ಮನುಷ್ಯನಿಗೆ ತುಂಬಾ ಮುಖ್ಯ ಅದು ನನ್ನಲ್ಲಿ ಇದೆ, ಆತ್ಮ ವಿಶ್ವಾಸವೂ ಹೆಚ್ಚಿದೆ” ಎಂಬ ಸಕಾರಾತ್ಮಕ ಮಾತುಗಳನ್ನು ಆಡಿದರು.

ಈ ಟಾಸ್ಕ್‌ನಲ್ಲಿ ಆರ್ಯವರ್ಧನ್‌ ಗುರೂಜಿ ಹೊಸ ಸ್ಪರ್ಧಿ ದರ್ಶ್‌ ಚಂದಪ್ಪನನ್ನು ಆಯ್ಕೆ ಮಾಡಿದ್ದಾರೆ. ದಿವ್ಯಾ ಉರುಡುಗ- ಐಶ್ವರ್ಯ ಪಿಸೆ ಅವರನ್ನು, ದೀಪಿಕಾ ದಾಸ್‌-ಅಮೂಲ್ಯ ಗೌಡ, ಪ್ರಶಾಂತ್‌ ಸಂಬರಗಿ-ವಿನೋದ್ ಗೊಬ್ಬರಗಾಲ, ಅನುಪಮಾ ಗೌಡ-ನೇಹಾ ಗೌಡ ಅವರನ್ನು, ಅರುಣ್‌ ಸಾಗರ್‌-ನವಾಜ್‌, ಸಾನ್ಯ-ಮಯೂರಿ, ರೂಪೇಶ್‌-ಕಾವ್ಯಶ್ರೀ ಗೌಡ, ರಾಕೇಶ್‌-ರೂಪೇಶ್ ರಾಜಣ್ಣ ಅವರನ್ನು ಸೆಲೆಕ್ಟ್‌ ಮಾಡಿದ್ದಾರೆ. ಈ ಜೋಡಿ ಮೊದಲ ದಿನದ ಟಾಸ್ಕ್‌ ಅನ್ನು ಒಟ್ಟಿಗೆ ನಿಭಾಯಿಸಬೇಕಿತ್ತು.

ಹಗ್ಗದ ಟಾಸ್ಕ್‌ನಲ್ಲಿ ವಿಜೇತರಾದ ಸಂಬರಗಿ ಜೋಡಿ!
ಬಿಗ್‌ ಬಾಸ್‌ ಹಗ್ಗ ಮತ್ತು ಗ್ಲಾಸ್‌ನ ಪಿರಾಮಿಡ್‌ ಟಾಸ್ಕ್‌ನಲ್ಲಿ ಮೊದಲ ಹಂತದಲ್ಲಿ ನೇಹಾ ಗೌಡ- ಅನುಪಮಾ ಗೌಡ ಜೋಡಿ, ಪ್ರಶಾಂತ್‌ ಸಂಬರಗಿ -ವಿನೋದ್ ಗೊಬ್ಬರಗಾಲ ಜೋಡಿ, ದಿವ್ಯಾ ಉರುಡುಗ- ಐಶ್ವರ್ಯ ಪಿಸೆ ಗೆದ್ದರು. ನಿರ್ಣಾಯಕ ಹಂತದಲ್ಲಿ ಪ್ರಶಾಂತ್‌ ಸಂಬರಗಿ -ವಿನೋದ್ ಗೊಬ್ಬರಗಾಲ ಜೋಡಿ ವಿಜೇತರಾಗಿ ಹೊರಹೊಮ್ಮಿದರು.

ಇದನ್ನೂ ಓದಿ | Bigg Boss Kannada |ಮನೆ ಒಂದೇ, ಮನೆಯಲ್ಲಿರುವವರ ಭಾವನೆಗಳು ಹಲವು: ಹೇಗಿದೆ ಬಿಗ್‌ ಬಾಸ್‌ ಸೀಸನ್‌ 9ರ ಮನೆ?

Exit mobile version