ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada) 18 ಸ್ಪರ್ಧಿಗಳು ಈಗಾಗಲೇ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿ ಮೊದಲ ದಿನದ ಟಾಸ್ಕ್ ಅನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮನೆಯಲ್ಲಿ ಮೊದಲ ದಿನದಿಂದಲೇ ಕಿರಿಕ್ ಶುರು ಮಾಡಿಕೊಂಡಿದ್ದರು. ಇದೀಗ ಮತ್ತೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಜತೆ ಜಗಳ ಮಾಡಿಕೊಂಡಿದ್ದಾರೆ. ಇನ್ನೊಂದು ಕಡೆ ಮನೆಯಲ್ಲಿ ಏನೇ ಜಗಳ ಆಗಿದ್ದರೂ ಅರುಣ್ ಸಾಗರ್ ತಮ್ಮ ಹಾಸ್ಯದ ಮಾತುಗಳಿಂದ ಮನೆಯ ವಾತಾವರಣವನ್ನು ಪ್ರಶಾಂತ ಸ್ಥಿತಿಯಲ್ಲಿ ಇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೊ ಹಂಚಿಕೊಂಡಿದ್ದು, ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರಗಿ ಮಧ್ಯೆ ವಾರ್ ಆಗಿದೆ. ಪ್ರಶಾಂತ್ ಸಂಬರಗಿ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕುರಿತು ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರ ಬಗ್ಗೆ ವಾದ ಆಗಿದೆ. ರೂಪೇಶ್ ರಾಜಣ್ಣ ಮಾತನಾಡಿ ʻʻನಿಮ್ಮ ಮನೋಭಾವನೆಗೆ ತಕ್ಕಂತವರು ಮಾತ್ರ ನಿಮ್ಮನ್ನು ಒಪ್ಪುತ್ತಿದ್ದಾರೆʼʼ ಎಂದು ಪ್ರಶಾಂತ್ ಸಂಬರಗಿಗೆ ಟಾಂಗ್ ನೀಡಿದರು. ಅದಕ್ಕೆ ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿ ʻʻನನ್ನ ಒಪ್ಪಿಕೊಂಡಿರುವವರು ಸಮಾಜದಿಂದ ಆಚೆ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅರುಣ್ ಸಾಗರ್ ಈ ಇಬ್ಬರ ವಾಗ್ವಾದದ ನಡುವೆ ಪ್ರವೇಶಿಸಿ ʻʻಇವರಿಬ್ಬರನ್ನೂ ಒಟ್ಟಿಗೆ ಕೂರಿಸಲೇಬಾರದು. ಟೇಬಲ್ ಬಡಿದೂ ಬಿಡದೂ ಮಾತಾಡ್ತಾರೆ. ನಾನು ಚಿತ್ರನ್ನ ಬಾಯಿಗೆ ಹಾಕಬೇಕಿಲ್ಲ. ತಾನಾಗೆ ಅನ್ನ ಬಾಯಿಗೆ ಹೋಗ್ತಾ ಇದೆʼʼ ಎಂದು ಉಳಿದವರನ್ನು ನೆಗೆಗಡಲಲ್ಲಿ ತೇಲಿಸಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಸೀಸನ್-9ರ ಮೊದಲ ವಾರದ ನಾಮಿನೇಟ್ ಆದ ಸ್ಪರ್ಧಿಗಳು ಇವರೇ!
ಅರುಣ್ ಸಾಗರ್ ಈ ಹಿಂದಿನ ಬಿಗ್ ಬಾಸ್ ಟಾಸ್ಕ್‌ನಲ್ಲಿಯೂ ತುಂಬಾ ಕ್ರಿಯೇಟಿವ್ ಆಗಿದ್ದರು. ಉಳಿದ ಸದಸ್ಯರನ್ನು ನೆಗೆಯಲ್ಲಿ ತೇಲಿಸಿದ್ದರು. ಕಾವ್ಯಶ್ರೀ ಗೌಡ ಮೇಕಪ್ ವಿಚಾರಕ್ಕೂ ಅರುಣ್ ಸಾಗರ್ ಕಾಮಿಡಿ ಮಾಡಿದ್ದಾರೆ. ವಾಹಿನಿ ಪ್ರೊಮೊ ಹಂಚಿಕೊಂಡಿದ್ದು ಅರುಣ್ ಸಾಗರ್ ಕುರಿತು ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Bigg Boss Kannada | ಮುಂದೆ ಮನೆಯಲ್ಲಿ ಬೇಜಾನ್ ಹಬ್ಬ ಇದೆ ಎಂದ ನವಾಜ್: ಮೊದಲ ದಿನದ ಟಾಸ್ಕ್ ವಿನ್ನರ್ ಈ ಜೋಡಿ!