Site icon Vistara News

Bigg Boss Kannada | ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮುಳುಗಿಸುತ್ತೇನೆ ಎಂದ ಸೋಮಣ್ಣ: ಬೆಸ್ಟ್-ವರ್ಸ್ಟ್ ಯಾರು?

Bigg Boss kannada

ಬೆಂಗಳೂರು: ಬಿಗ್‌ ಬಾಸ್‌ ಒಟಿಟಿ ಕನ್ನಡದಲ್ಲಿ (Bigg Boss Kannada) ಈಗಾಗಲೇ ನಾಲ್ಕು ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಜಶ್ವಂತ್‌ ಇಷ್ಟು ದಿನ ಕ್ಯಾಪ್ಟನ್‌ಶಿಪ್‌ನಲ್ಲಿ ಮನೆಯನ್ನು ನಿಭಾಯಿಸಿದ್ದಾರೆ. ಈ ವಾರ ಸೋಮಣ್ಣ ಮಾಚಿಮಾಡ ಕ್ಯಾಪ್ಟನ್‌ಶಿಪ್‌ ಹೊಣೆಯನ್ನು ಹೊತ್ತಿದ್ದಾರೆ.

ಸೋಮಣ್ಣ ಮಾಚಿಮಾಡ ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ಮುಖವಾಡವನ್ನು ಕಳಚಿರುವಂತೆ ಕಾಣುತ್ತಿದೆ. ಈ ನಡುವೆ ಸ್ಪರ್ಧಿಗಳ ಜತೆ ಸಖತ್‌ ವಾರ್‌ಗೆ ಇಳಿದಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾ ಮೂಲಕ ಕಮೆಂಟ್‌ ಮಾಡುತ್ತಿದ್ದಾರೆ.

ತಿರುಗುವ ಯಂತ್ರದ ಟಾಸ್ಕ್‌ನಲ್ಲಿ ತಾಳ್ಮೆ ಕಳೆದುಕೊಂಡ ಸೋಮಣ್ಣ

ತಿರುಗುವ ಯಂತ್ರದ ಮೇಲೆ ಕುಳಿತುಕೊಂಡು ಸ್ಫರ್ಧಿ 15 ನಿಮಿಷಗಳನ್ನು ಎಣಿಸಬೇಕು. ಈ ಟಾಸ್ಕ್‌ನಲ್ಲಿ ಸ್ಪರ್ಧಿ ಆಡುವಾಗ ಇನ್ನೊಬ್ಬ ಸ್ಪರ್ಧಿಯು ಡಿಸ್ಟ್ರ್ಯಾಕ್ಟ್‌ ಮಾಡಬೇಕಾಗುತ್ತದೆ. ಆಟದಲ್ಲಿ ಸೋಮಣ್ಣ ಮತ್ತು ಜಯಶ್ರೀ ನಡುವೆ ವಾರ್‌ ಆಗಿದೆ. ಜಯಶ್ರೀ ಅವರು ಸೋಮಣ್ಣ ಅವರ ಕಣ್ಣಿಗೆ ನೀರು ಸೋಕಿದ್ದಾರೆ. ಇದಕ್ಕೆ ಸೋಮಣ್ಣ ಅವರು ಜಯಶ್ರೀ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಸೋಮಣ್ಣ ಫುಲ್‌ ಗರಂ: ನಂದಿನಿ-ಸೋಮಣ್ಣ ಮಾತಿನ ಸಮರ!

ʻʻಟಾಸ್ಕ್‌ ಸರಿಯಾಗಿ ನಿಭಾಯಿಸಿ. ನಿಯತ್ತಾಗಿ ಆಡಿ. ಮನಸ್ಸಿನಲ್ಲಿ ಒಂದು, ಮೈಂಡ್‌ನಲ್ಲಿ ಇನ್ನೊಂದು ಇಟ್ಟುಕೊಂಡು ಆಡಬೇಡಿ. ನಿಮಗೆ ಬರುವ ಎಲ್ಲ ಐಡಿಯಾಗಳು ಮನೆ ಹಾಳು ಐಡಿಯಾ ಆಗಿರುತ್ತದೆ. ನೀವು ಮಾಡಿದ್ದೇ ಸರಿ ಅನ್ನಿಸಿದರೆ ಕಾಲಿಗೆ ಬಿದ್ದು ಬಿಡುತ್ತೇನೆ. ಇಲ್ಲ ಅಂದರೆ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಮುಳುಗಿಸುತ್ತೇನೆʼʼ ಎಂದು ಜಯಶ್ರೀಗೆ ಗರಂ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದಕ್ಕೆ ಜಯಶ್ರೀ ʻʻನೀವು ಗೇಮ್‌ ಅನ್ನು ಗೇಮ್‌ ತರ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ಲಿಮಿಟೇಷನ್ಸ್‌ ಇರಲಿದೆʼʼ ಎಂದು ಕಿರುಚಾಡಿದ್ದಾರೆ.

ಬಿಗ್‌ ಬಾಸ್‌ ಈ ವಾರದ ಬೆಸ್ಟ್‌ ಮತ್ತು ವರ್ಸ್ಟ್‌ ಪರ್‌ಫಾರ್ಮರ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಜಯಶ್ರೀ ವರ್ಸ್ಟ್‌ ಪರ್‌ಫಾರ್ಮರ್‌ ಆಗಿದ್ದರೆ, ಆರ್ಯವರ್ಧನ್‌ ಗುರೂಜಿ ಬೆಸ್ಟ್‌ ಪರ್‌ಫಾರ್ಮರ್‌ ಆಗಿ ಹೊರಹೊಮ್ಮಿದ್ದಾರೆ.

ಆರ್ಯವರ್ಧನ್‌ ಅವರು ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ಗಳನ್ನು ನಿಭಾಯಿಸುತ್ತಿದ್ದಾರೆ. ಬಣ್ಣ ಬಣ್ಣದ ಪುಟ್ಟ ಬಾಲ್‌ಗಳನ್ನು ತುಂಬಿದ ಕ್ಯಾನ್ ಒಂದೇ ಕೈಯಲ್ಲಿ ಹಿಡಿದು ಜೋರಾಗಿ ಶೇಕ್ ಮಾಡಿ ಬಾಲ್​ಗಳು ಇನ್ನೊಂದು ಕ್ಯಾನ್ ಒಳಗೆ ಸೇರುವಂತೆ ಮಾಡಬೇಕಾಗಿರುತ್ತದೆ. ಗುರೂಜಿ ಸೊಂಟದ ಮೇಲೆ ಕೈ ಇಟ್ಟು ಉತ್ಸಾಹದಲ್ಲಿ ಗೇಮ್ ಆಡಿದ್ದು ದೂರದಲ್ಲಿ ನಿಂತಿದ್ದ ಇತರ ಸ್ಪರ್ಧಿಗಳು ಪ್ರೋತ್ಸಾಹ ಕೊಟ್ಟಿದ್ದಾರೆ. ಅಂತೂ ಗುರೂಜಿ ಸಕ್ಸಸ್​ಫುಲ್ ಆಗಿ ಬಾಲ್ಸ್ ಕ್ಯಾನ್‌ಗೆ ಹಾಕಿದ್ದರು.

ಇದನ್ನೂ ಓದಿ | Bigg Boss Kannada | ನಾಮಿನೇಶನ್‌ ಟಾಸ್ಕ್‌ನಲ್ಲಿ ಗೆದ್ದು ದಡ ಸೇರಿದ್ದು ಯಾರು? ಚೈತ್ರಾ-ಉದಯ್‌ ವಾರ್‌!

Exit mobile version