ಬೆಂಗಳೂರು: ಎರಡನೇ ವಾರ ಸ್ಪರ್ಧಿ ಸೋಮಣ್ಣ ಮಾಚಿಮಾಡ ಅವರು ಬೆಸ್ಟ್ ಪರ್‌ರ್ಫಾಮರ್ ಆಗಿ ಹೊರಹೊಮ್ಮಿದ್ದಾರೆ. ಮೊದ ಮೊದಲು ಸೈಲೆಂಟ್ ಆಗಿದ್ದ ಸೋಮಣ್ಣ ಅವರು ಈ ನಡುವೆ ವೈಲೆಂಟ್ ಆಗಿದ್ದಾರೆ. ಬಿಗ್‌ಬಾಸ್ ಕನ್ನಡ ಒಟಿಟಿಯಲ್ಲಿ (Bigg Boss Kannada) ಪ್ರತಿಸ್ಪರ್ಧಿಗಳ ಮುಖವಾಡಗಳು ಕಳಚಿ ಬಿದ್ದಿವೆ. ಸೋಮಣ್ಣ ಮಾಚಿಮಾಡ ಅವರು ಬಿಗ್‌ಬಾಸ್ ಮನೆಯಲ್ಲಿ ಗರಂ ಆಗಿದ್ದಾರೆ.
ʻʻಬಿಗ್‌ಬಾಸ್ ಮನೆಯಲ್ಲಿ ಯಾರೂ ಸಾಚಾ ಅಲ್ಲ. ನಾನೂ ಸಾಚಾ ಅಲ್ಲ. ಎಷ್ಟೋ ಜನರನ್ನು ನೋಡಿದ್ದೇನೆ. ಇಲ್ಲಿ ಗುಡ್ ಮಾರ್ನಿಂಗ್ ಎಂದ ಹೇಳುವುದು ಸ್ಟ್ರಾಟರ್ಜೀನೆ. ಇದರಲ್ಲಿ ಫೇರ್ ಗೇಮ್ ಇರಬೇಕು. ಫೇಕ್ ಗೇಮ್ ಇರಬಾರದುʼʼ ಎಂದು ಸ್ಪರ್ಧಿಗಳ ಮುಂದೆ ಸೋಮಣ್ಣ ಗರಂ ಆಗಿದ್ದಾರೆ.
ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಜತೆ ಕಿರಿಕ್
ಸಾನ್ಯ ಹಗೂ ರೂಪೇಶ್ ಶೆಟ್ಟಿ ಸದಾ ಅಂಟಿಕೊಂಡೇ ಇರುತ್ತಾರೆ ಎಂದು ಸೋಮಣ್ಣ ಅವರು ಆಪಾದಿಸಿದ್ದಾರೆ. ಈ ಕುರಿತು ರೂಪೇಶ್ ಪ್ರತಿಕ್ರಿಯೆ ನೀಡಿದ್ದು, ʻʻನಮಗೆ ಇದರ ಬಗ್ಗೆ ಗೊತ್ತು, ನಾವು ಬೆಸ್ಟ್ ಫ್ರೆಂಡ್ಸ್ ಎಂದಿದ್ದಾರೆʼʼ. ಇದಕ್ಕೆ ಉತ್ತರವಾಗಿ ಸೋಮಣ್ಣ ʻʻನೀವಿಬ್ಬರೂ ಜಾಸ್ತಿ ಟೈಂ ಸ್ಪೆಂಡ್ ಮಾಡಿದ್ದೂ ಸತ್ಯ. ನಾನು ಕಣ್ಣಾರೆ ನೋಡಿದ್ದೂ ಸತ್ಯʼʼ ಎಂದಿದ್ದಾರೆ. ಇದಕ್ಕೆ ಸಾನ್ಯಾ ಮಾತನಾಡಿ ʻʻನಿಮ್ಮ ಪ್ರಕಾರ ಒಬ್ಬರ ಜತೆ ಜಾಸ್ತಿ ಕಾಣಿಸಿಕೊಂಡರೆ ಅವರಿಬ್ಬರ ಮಧ್ಯೆ ಫ್ರೆಂಡ್‌ಶಿಪ್ ಇರಲ್ಲ ಎಂದರ್ಥವಾ? ಎಂದು ಕೇಳಿದಾಗ ಸೋಮಣ್ಣ ಅವರು ʻʻನಾನು ಇಲ್ಲಿ ಯಾರನ್ನೂ ಡ್ಯಾಮೇಜ್ ಮಾಡಲು ಬಂದಿಲ್ಲ. ಆ ರೀತಿಯ ಆಸಕ್ತಿಯೂ ನನಗೆ ಇಲ್ಲʼʼ ಎಂದಿದ್ದಾರೆ.
ಇದನ್ನೂ ಓದಿ | Bigg Boss Kannada | ನಾಮಿನೇಶನ್ ಟಾಸ್ಕ್‌ನಲ್ಲಿ ಗೆದ್ದು ದಡ ಸೇರಿದ್ದು ಯಾರು? ಚೈತ್ರಾ-ಉದಯ್ ವಾರ್!
ನಾಲ್ಕು ಒಂದ ನಾಲ್ಕು ಟಾಸ್ಕ್‌ನಲ್ಲೂ ಕಿರಿಕ್
ಬಿಗ್‌ಬಾಸ್ ನೀಡಿದ ನಾಲ್ಕು ಒಂದ ನಾಲ್ಕು ಟಾಸ್ಕ್‌ನಲ್ಲೂ ಸೋಮಣ್ಣ ಮಾಚಿಮಾಡ ಕಿರಿಕ್ ಮಾಡಿದ್ದು, ನಂದಿನಿ ಮತ್ತು ಜಶ್ವಂತ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋಮಣ್ಣ ಅವರು ನಂದಿನಿ ಅವರ ಜತೆ ʻʻನಿಮ್ಮ ಕಾಲು ಸನ್ನೆ , ಕೈ ಸನ್ನೆ ನನಗೆ ತಿಳಿದಿದೆ. ಮನೆಯಲ್ಲಿ ಏನೇನು ಸ್ಟ್ರಾಟೆಜಿ ಮಾಡುತ್ತಿದ್ದೀರಿ ಅದನ್ನು ಇಡೀ ಮನೆ ಮಾತನಾಡುತ್ತಿದೆ. ಯಾವುದೋ ರಿಯಾಲಿಟಿ ಶೋ ಅಲ್ಲಿ ಗೆದ್ದ ಆಟಕ್ಕೂ ರಿಯಲ್ ಲೈಫ್‌ನಲ್ಲಿ ಗೆದ್ದ ಆಟಕ್ಕೂ ವ್ಯತ್ಯಾಸವಿದೆ” ಎಂದು ನಂದಿನಿ ಅವರನ್ನು ಕುರಿತು ಗರಂ ಆಗಿ ಮಾತನಾಡಿದ್ದಾರೆ. ನಂದಿನಿ ಇದಕ್ಕೆ ರೆಸ್ಪಾನ್ಸ್ ಮಾಡಿದ್ದು ʻʻನಿಮ್ಮಷ್ಟು ನಾನು ಅಚೀವ್ ಮಾಡಿಲ್ಲ. ಆದರೆ ಅದರ ಅರ್ಥ ನಾನು ಕಡಿಮೆ ಸಾಧನೆ ಮಾಡಿದ್ದೇನೆ ಎಂದರ್ಥವಲ್ಲʼʼ ಎಂದು ಸ್ಟ್ರಾಂಗ್ ಆಗೇ ಉತ್ತರ ನೀಡಿದ್ದಾರೆ.
ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್ ಮನೆಯಿಂದ ಹೊರಗೆ ಬರಲಿದ್ದಾರಾ ಸ್ಫೂರ್ತಿ ಗೌಡ?