ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada) ಐದನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಮನೆಯಲ್ಲಿ ಸೋನು ಗೌಡ ಹಾಗೂ ರಾಕೇಶ್ ಹವಾನೇ ಜಾಸ್ತಿಯಾದಂತಿದೆ. ರಾಕೇಶ್‌ಗಾಗಿ ಮನೆಯವರ ವಿರುದ್ಧ ಸೋನು ಗೌಡ ಮಾತನಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮನೆಯವರಿಗಾಗಿ ಗುರೂಜಿ ಪಪ್ಪಾಯಿ ಕಟ್ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಸೋನುಗೌಡ ʻಮೂರು ಪಪ್ಪಾಯಿ ರಾಕೇಶ್‌ಗೆʼ ಎಂದಿದ್ದಾರೆ. ಇದಕ್ಕೆ ರಿಯಾಕ್ಟ್ ಮಾಡಿದ ಸೋಮಣ್ಣ ʻನಿನಗೆ ಮನೆಯಲ್ಲಿ ರಾಕೇಶ್ ಮಾತ್ರ ಕಾಣುತ್ತಾರಾʼ ಎಂದಿದ್ದಾರೆ. ಬಳಿಕ ʻರಾಕೇಶ್‌ಗಾಗಿ ಬಿಗ್ ಬಾಸ್ ಮನೆಯಲ್ಲಿ ಎರಡು ಮನೆ ಮಾಡಬೇಕಾ?ʼ ಎಂದು ಗುರೂಜಿ ಕೂಡ ಸೋನು ಗೌಡ ವಿರುದ್ಧ ಗರಂ ಆಗಿದ್ದಾರೆ. ಇದಕ್ಕೆ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದು, ʻʻಮಾತನಾಡಬೇಕಾದರೆ ಸರಿಯಾಗಿ ಮಾತನಾಡು ಅಂತಾ ನನಗೆ ಹೇಳುತ್ತೀರಾ. ನೀವು ಕೂಡ ಮಾತನಾಡಬೇಕಾದರೆ ನಿಗಾ ಇಟ್ಟುಕ್ಕೊಂಡು ಮಾತನಾಡಿʼʼ ಎಂದು ಗುರೂಜಿ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಗುರೂಜಿ ಪ್ರತಿಕ್ರಿಯೆ ನೀಡಿ ʻʻಸುಮ್ಮನೆ ಕೂತ್ಕೋ ನೀನು, ಗಂಟಲು ಹರ್ಕೋ ಬೇಡʼʼ ಎಂದು ಸೋನು ಗೌಡಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ | Bigg Boss Kannada | ಸಾನ್ಯ–ರೂಪೇಶ್ ಇಗೋ ಕ್ಲಾಶ್; ಹ್ಯಾಶ್‍ಟ್ಯಾಗ್ ಆಟ, ಯಾರ ಕೊರಳಿಗೆ ಯಾವ ಪಟ್ಟ?
ಸೋನು-ರಾಕೇಶ್ ಪ್ರೇಮಾಂಕುರ!
ಸೋನು ಗೌಡಗೆ ಈಗಾಗಲೇ ರಾಕೇಶ್ ಮೇಲೆ ಪ್ರೀತಿ ಆಗಿರುವುದು ಬಿಗ್ ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ರಾಕೇಶ್ ಜತೆ ಮನೆಯ ಸದಸ್ಯರಲ್ಲಿ ಯಾರಾದರೂ ಕ್ಲೋಸ್ ಆದರೆ ಸೋನು ಗೌಡ ಅಸೂಯೆ ಪಟ್ಟುಕೊಳ್ಳುತ್ತಾರೆ. ಇದನ್ನು ಪರೀಕ್ಷಿಸಲೆಂದೇ ರಾಕೇಶ್ ಮತ್ತು ಜಯಶ್ರೀ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಜಯಶ್ರೀ ಮತ್ತು ರಾಕೇಶ್ ಇಬ್ಬರೂ ಕುಳಿತು ಚರ್ಚಿಸಿ ಸೋನು ನೋಡುವುದಕ್ಕಾಗಿ ಒಂದು ಪ್ಲ್ಯಾನ್ ಮಾಡಿದ್ದರು. ಜಯಶ್ರೀಗೆ ರಾಕೇಶ್ ಮುತ್ತನ್ನು ನೀಡಿದ್ದರು. ಅದನ್ನು ಗಮನಿಸಿದ್ದ ಸೋನು ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಹಿಂದೆ ರಾಕೇಶ್ ಮತ್ತು ಸೋನು ಗೌಡ ಇಬ್ಬರೂ ಸ್ಮೋಕಿಂಗ್ ಕೋಣೆಯಲ್ಲೂ ಒಟ್ಟಾಗಿಯೇ ಕಾಣಿಸಿಕೊಂಡಿದ್ದರು.
ಯಾವ ಸ್ವರ್ಧಿಗೆ ನಿದ್ರಾದೇವಿಯ ಕೃಪೆ?
ಬಿಗ್ ಬಾಸ್ ಒಟಿಟಿ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಈ ವೇಳೆ ಹಲವಾರು ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಕಷ್ಟಪಡುತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಹಜವಾಗಿ ಹಗಲು ಹೊತ್ತಿನಲ್ಲಿ ಮಲಗಲು ನಿರ್ಬಂಧ ಒಡ್ದಲಾಗಿದೆ. ಇದೀಗ ಸ್ವತಃ ಬಿಗ್ ಬಾಸ್ ಮನೆ ಮಂದಿಗೆ ಈ ಅವಕಾಶ ನೀಡಿದ್ದು, ಪ್ರೇಕ್ಷಕರ ವೋಟಿಂಗ್ ಲೈನ್ ಮೇಲೆ ಯಾವ ಸ್ಪರ್ಧಿ 30 ನಿಮಿಷ ಮಲಗಬೇಕು ಎಂಬ ಪ್ರಶ್ನೆ ಮಾಡಲಾಗಿದೆ. ಹೆಚ್ಚು ವೋಟ್ ಯಾವ ಸ್ಪರ್ಧಿಗೆ ಬೀಳುತ್ತದೆಯೋ ಅವರು 30 ನಿಮಿಷಗಳ ಕಾಲ ಮಲಗಬಹುದು ಎಂದು ಬಿಗ್ ಬಾಸ್ ಹೇಳಿದ್ದಾರೆ.
ಇದನ್ನೂ ಓದಿ | Bigg Boss Kannada | ಸೋನು ಗೌಡಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ: ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು ಇವರೇ!