Site icon Vistara News

Bigg Boss Kannada | ಡವ್‌ ರಾಜ ಅಂದಿದಕ್ಕೆ ಕ್ಲಾಸ್‌: ಸೋನು-ಗುರೂಜಿ ವಾಗ್ವಾದಕ್ಕೆ ಸಾನ್ಯ ಎಂಟ್ರಿ!

Bigg Bigg Kannada

ಬೆಂಗಳೂರು: ಬಿಗ್‌ ಬಾಸ್‌ (Bigg Boss Kannada) ಒಟಿಟಿ ಐದನೇ ವಾರ ಮುಕ್ತಾಯಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಐದನೇ ವಾರ ಎಲಿಮಿನೇಷನ್‌ನಲ್ಲಿ ನಂದಿನಿ ಔಟ್‌ ಆಗಿದ್ದಾರೆ. ಇದೀಗ ಗುರೂಜಿ ಮೇಲೆ ಸೋನು ಗೌಡ ರೇಗಿದ್ದಕ್ಕೆ ಮನೆಯವರು ಸೋನುಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಕುರಿತು ಸಾನ್ಯ ಹಾಗೂ ಸೋನು ನಡುವೆ ವಾರ್‌ ಆಗಿದೆ. ಹಾಗೇ ಆರ್ಯವರ್ಧನ್‌ ಹಾಗೂ ಜಯಶ್ರೀ ಕೂಡ ಈ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ.

ಮನೆಯಲ್ಲಿ ಗುರೂಜಿ ಭವಿಷ್ಯದ ಬಗ್ಗೆ ಆರ್ಯವರ್ಧನ್‌ ಒಳಗೊಂಡಂತೆ ಸೋನು ಗೌಡ ಮತ್ತು ಜಯಶ್ರೀ ನಡುವೆ ಚರ್ಚೆಗಳು ಆಗುತ್ತಿತ್ತು. ಈ ಹಿಂದೆ ಸೋನು ಗೌಡ ʻʻಗುರೂಜಿ ಹೇಳುವುದು ಈ ಮನೆಯಲ್ಲಿ ಯಾವುದೂ ಆಗಲಿಲ್ಲ. ಈ ಹಿಂದೆ ರಾಕೇಶ್‌ ಜತೆ ಯಾರು ಇರುತ್ತಾರೋ ಅವರು ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಎರಡೇ ವಾರದಲ್ಲಿ ನಾನು ಕೂಡ ಮನೆಯಿಂದ ಹೊರಗೆ ಹೋಗುತ್ತೇನೆ ಎಂದಿದ್ದರು. ಆದರೆ, ಇವತ್ತಿಗೂ ನಾನು ಮನೆಯಲ್ಲಿಯೇ ಇದ್ದೇನೆ. ಈ ಬಾರಿಯೂ ಅವರು ಹೇಳಿದ ಹಾಗೇ ಆಗಲಿಲ್ಲ. ಡವ್‌ ರಾಜ್‌ ಇವರುʼʼ ಎಂಬರ್ಥದಲ್ಲಿ ಹೇಳಿದ್ದಾರೆ. ಅದಕ್ಕೆ ಜಯಶ್ರೀ ʻʻಪದೇ ಪದೇ ನೀನು ಒಬ್ಬ ವ್ಯಕ್ತಿಯ ವೃತ್ತಿ ಬಗ್ಗೆ ಈ ರೀತಿ ಹೇಳುವುದು ತಪ್ಪು . ಮತ್ತೆ ಮತ್ತೆ ಮಾಡಿದ್ದ ತಪ್ಪನ್ನೇ ನೀನು ಮಾಡುತ್ತೀದ್ದೀಯಾ. ಗುರೂಜಿ ಬಳಿ ತಪ್ಪಾಯ್ತು ಎಂದು ಕೇಳುʼʼ ಎಂದು ಸೋನುಗೆ ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ನಂದಿನಿ ಗೂಡು ಬಿಟ್ಟು ಹೋದ್ರು, ಜಶ್ವಂತ್‌ ಒಂಟಿಯಾದ್ರು: ಇನ್ಮುಂದೆ ಸ್ಪರ್ಧೆ ಮತ್ತಷ್ಟು ಕಠಿಣ!

ಸೋನು ಗೌಡ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ʻʻಈ ಮನೆಯಲ್ಲಿ ನಾನು ಯಾವುದಾದರೂ ಪದ ಬಳಕೆ ಮಾಡಿದರೆ ಕೂಗಾಡುತ್ತೀರ. ಬೇರೆ ಅವರು ಏನೇ ಅಂದರು ಸುಮ್ಮನೆ ಇರುತ್ತೀರʼʼ ಎಂದು ಕಿಡಿಕಾರಿದ್ದಾರೆ. ಸಾನ್ಯ ಕೂಡ, “ಗುರೂಜಿಗೆ ಸಾರಿ ಕೇಳು” ಎಂದು ಸೋನುಗೆ ಕಿವಿಮಾತು ಹೇಳಿದ್ದಾರೆ.ಅದಕ್ಕೆ ಸೋನು ಗೌಡ ʻʻಉರಿಯೋ ಬೆಂಕಿಗೆ ಯಾಕೆ ತುಪ್ಪ ಸುರಿಯುತ್ತೀಯಾ? ತಪ್ಪಾಯ್ತು ಎಂದು ಹೇಳಿದ್ದಾಯ್ತು. ಆದರೂ ಯಾಕೆ ಇಷ್ಟು ಮಾತನಾಡುತ್ತಿದ್ದೀಯಾ? ಎಂದು ಸಾನ್ಯಾಗೆ ಕಿರುಚಾಡಿದ್ದಾರೆ. ಆಗ ಸಾನ್ಯ ಕೋಪ ನೆತ್ತಿಗೇರಿದ್ದು ʻʻಶು.. ಎಂದು ನಿನ್ನಿಂದ ಅನ್ನಿಸಿಕೊಳ್ಳೋಕೆ ನಾನೇನು ನಾಯಿನಾ? ಹೋಗೆಲೇ?ʼʼ ಎಂದು ಟಾಂಗ್‌ ಕೊಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಯವರ್ಧನ್‌, ʻಕೆಟ್ಟ ಪದಗಳನ್ನು ನನ್ನಷ್ಟು ಯಾರೂ ಮಾತನಾಡುವುದಿಲ್ಲ. ನನ್ನ ವೃತ್ತಿ ಬಗ್ಗೆ ನನಗೆ ನಂಬಿಕೆ ಇದೆ. ನನಗೆ ಈ ಮನೆಯಲ್ಲಿ ಯಾರೆಲ್ಲ ಹೇಗೆ ಎಂದು ಗೊತ್ತು. ಬಿಗ್‌ ಬಾಸ್‌ ಕ್ಯಾಮರಾಕ್ಕಿಂತ ಜಾಸ್ತಿ ನನಗೆ ಗೊತ್ತಿದೆʼʼ ಎಂದು ಹೇಳಿದರು.

ಕಲ್ಪನಾ ಲೋಕದ ಬಲೂನ್‌ ಟಾಸ್ಕ್‌ !
ಬಿಗ್‌ ಬಾಸ್‌ ಈಗಾಗಲೇ ಸ್ಪರ್ಧಿಗಳಿಗೆ ಟಾಸ್ಕ್‌ ನೀಡಲು ಶುರು ಮಾಡಿದೆ. ಪ್ರತಿ ಸ್ಪರ್ಧಿಗಳು ಉಳಿದ ಸ್ಪರ್ಧಿಗಳ ಬಗ್ಗೆ ಹೇಳಿಕೊಳ್ಳುವ ಟಾಸ್ಕ್‌ ನೀಡಿದ್ದರು. ಜಯಶ್ರೀ ಅವರು ಆರ್ಯವರ್ಧನ್‌ ಕುರಿತಾಗಿ ʻಕಾಮಿಡಿ ಮಾಡಿದ ತಕ್ಷಣ ಯಾರು ವೋಟ್‌ ಹಾಕುವುದಿಲ್ಲ, ಟಾಸ್ಕ್‌ನಲ್ಲಿ ಗುರೂಜಿ ಗಮನ ಕೊಡಬೇಕುʼ ಎಂದಿದ್ದಾರೆ. ಸೋನು ವಿಚಾರವಾಗಿ ʻಆಕೆಗೆ ತಾಳ್ಮೆ ಇಲ್ಲʼ ಎಂದಿದ್ದಾರೆ. ಅದೇ ರೀತಿ ಸಾನ್ಯ ಕೂಡ ಸೋನು ಬಗ್ಗೆʻ ತಾಳ್ಮೆ ಕಡಿಮೆ ಇದೆʼ ಎಂದು ಹೇಳಿದ್ದಾರೆ. ಮತ್ತು ಸಾನ್ಯ ಆರ್ಯವರ್ಧನ್‌ ವಿಚಾರವಾಗಿ ʻಆರ್ಯವರ್ಧನ್‌ ಗುರೂಜಿ ಮಾಡಿದ್ದೆಲ್ಲ ಸರಿ ಎನ್ನುವ ಭ್ರಮೇಲಿ ಬದುಕುತ್ತಿದ್ದಾರೆʼ ಎಂದರು.

ಇನ್ನೊಂದೆಡೆ ಜಶ್ವಂತ್‌ ಮಾತನಾಡುತ್ತಾ ʻʻಸೋಮಣ್ಣ ಬಾಯಿಗೆ ಬಂದ ಹಾಗೇ ಮಾತನಾಡುತ್ತಾರೆʼʼ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅದೇ ರೀತಿ ಉಳಿದ ಸ್ಪರ್ಧಿಗಳು ಹಲವು ಕಾರಣಗಳನ್ನು ನೀಡಿದ್ದಾರೆ.

ಫಿನಾಲೆ ವಾರಕ್ಕೆ ರಾಕೇಶ್‌ ಅಡಿಗ, ಸಾನ್ಯ ಹಾಗೂ ರೂಪೇಶ್‌ ಶೆಟ್ಟಿ ಮೊದಲೇ ಹೋಗಿದ್ದರು. ಉಳಿದಂತೆ ಆರ್ಯವರ್ಧನ್‌ ಗುರೂಜಿ, ಜಶ್ವಂತ್‌ ಬೋಪಣ್ಣ, ಸೋನು ಶ್ರೀನಿವಾಸ್‌ ಗೌಡ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಈ ವಾರ ಸೇಫ್‌ ಆಗಿದ್ದಾರೆ.

ಇದನ್ನೂ ಓದಿ | Bigg Boss Kannada | ಮುಗಿಯಿತು 5 ವಾರ; ಎಲಿನಿಮಿನೇಷನ್ನಿಂದ ಯಾರು ಪಾರು, ಯಾರು ಗಡಿಪಾರು?

Exit mobile version