Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಸೋನು ಗೌಡರ ಟೊಮ್ಯಾಟೋ ಗೊಜ್ಜು!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಒಟಿಟಿ ಕನ್ನಡದ (Bigg Boss Kannada) ಮೊದಲ ಸೀಸನ್‌ನ ಅರ್ಧದಷ್ಟು ಅವಧಿ ಮುಕ್ತಾಯವಾಗಿದ್ದು, ಕೇವಲ 11 ಸ್ಪರ್ಧಿಗಳು ಉಳಿದಿದ್ದಾರೆ. ಮೂರನೇ ವಾರ ಉದಯ್‌ ಸೂರ್ಯ ಅವರು ಎಲಿಮಿನೇಟ್‌ ಆಗಿ ಮನೆಯಿಂದ ಹೊರಗೆ ಹೋಗಿದ್ದಾರೆ. ಲೋಕೇಶ್ ಕುಮಾರ್ ಮತ್ತು ಅರ್ಜುನ್ ರಮೇಶ್ ವೈದ್ಯಕೀಯ ಕಾರಣಗಳಿಂದ ನಿರ್ಗಮಿಸಬೇಕಾಯಿತು. ಕಿರಣ್ ಮತ್ತು ಸ್ಫೂರ್ತಿ ಗೌಡ ಈ ಮೊದಲು ಎಲಿಮಿನೇಟ್ ಆಗಿದ್ದರು.

ಮನೆಯಲ್ಲಿ ಆರ್ಯವರ್ಧನ್‌ ಗುರೂಜಿ, ಸೋನು ಗೌಡ, ಚೈತ್ರಾ, ನಂದಿನಿ, ಜಶ್ವಂತ್‌ , ರೂಪೇಶ್‌ ಶೆಟ್ಟಿ, ಸಾನು, ಸೋಮಣ್ಣ ಮಾಚಿಮಾಡ ಸೇಫ್‌ ಆಗಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಸೋನು ಗೌಡರ ನಳಪಾಕ
ಸೋನು ಗೌಡ ಮೊದಲ ಬಾರಿಗೆ ಬಿಗ್‌ಬಾಸ್‌ ಮನೆಯಲ್ಲಿ ಅಡುಗೆ ಮಾಡಿದ್ದಾರೆ. ಕ್ಯಾಮೆರಾ ಮುಂದೆ ಸೋನು ಗೌಡ ಮಾತನಾಡಿ ʻʻಇಷ್ಟು ದಿನ ನಾನು ಬೇಕು ಅಂತಲೇ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ನಮ್ಮ ಅಡುಗೆ ಚೆನ್ನಾಗಿ ಇಲ್ಲದೇ ಹೋದರೆ ಸುಮ್ಮನೆ ಸ್ಪರ್ಧಿಗಳು ನೆಗೆಟಿವ್‌ ಆಗಿ ಮಾತನಾಡಿಕೊಳ್ಳುತ್ತಾರೆ. ಅಡುಗೆ ಮಾಡಲು ಅವಕಾಶ ಕೊಟ್ಟ ಬಿಗ್‌ ಬಾಸ್‌ಗೆ ಧನ್ಯವಾದಗಳು. ಜನರು ನನ್ನನ್ನು ವೋಟ್‌ ಮಾಡಿದಕ್ಕೆ ಥ್ಯಾಂಕ್ಸ್‌ʼʼ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಲೂಸ್‌ ಟಾಕ್‌, ಅಪ್ಪುಗೆ; ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಹೊರಗೆ?

ಗುರೂಜಿ ಆರ್ಯವರ್ಧನ್‌ ಅವರು ಸೋನು ಗೌಡ ಅಡುಗೆ ಮಾಡುವಾಗ ಸಾಥ್‌ ನೀಡಿದರು. ʻʻನಿಮ್ಮ ಟೊಮ್ಯಾಟೋ ಗೊಜ್ಜನ್ನು ಇಡೀ ಕರ್ನಾಟಕವೇ ನೋಡುತ್ತಿದೆʼʼ ಎಂದವರು ಸೋನುಗೆ ಹೇಳಿದರು. ಗುರೂಜಿ ಅವರು ಸೋನು ಗೌಡಗೆ ʻʻನೀವು ಯಾವಾಗ ಮದುವೆ ಆಗುತ್ತೀರಾ? ʼʼಎಂದು ಪ್ರಶ್ನೆ ಹಾಕಿದರು. ಆ ವಿಚಾರವಾಗಿ ಸೋನು ಗೌಡ ʻʻಇನ್ನೂ ಎಂಟರಿಂದ ಹತ್ತು ವರ್ಷ ಲೇಟುʼʼಎಂದು ಪ್ರತಿಕ್ರಿಯಿಸಿದರು. ಜಯಶ್ರೀ ಕೂಡ ಕಿಚನ್‌ಗೆ ಎಂಟ್ರಿ ಕೊಟ್ಟಿದ್ದು ಸೋನು ಗೌಡ ಅವರು ಮಾಡಿದ ಟೊಮ್ಯಾಟೋ ಗೊಜ್ಜನ್ನು ಇಷ್ಟಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಸೋನು ಗೌಡ ಅವರೇ ಊಟವನ್ನು ಎಲ್ಲಾ ಸ್ಪರ್ಧಿಗಳಿಗೆ ಬಡಿಸಿದರು. ಇವರ ನಳಪಾಕಕ್ಕೆ ಮನೆಯ ಸ್ಪರ್ಧಿಗಳು ಖುಷಿ ಹಂಚಿಕೊಂಡರು.

ಇದನ್ನೂ ಓದಿ | Bigg Boss Kannada | ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ: ಇಲ್ಲಿ ಕಿಚ್ಚನ ಲುಕ್ಕೂ ಡಿಫರೆಂಟು!

Exit mobile version