Site icon Vistara News

Bigg Boss Kannada | ಸೋನುಗೆ ಎಷ್ಟೇ ಬುದ್ಧಿವಾದ ಹೇಳಿದರೂ ಅಷ್ಟೇ: ಸೋನು ವಿಷ್ಯ ಬೇಡವೋ ಶಿಷ್ಯ!

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಒಟಿಟಿ (Bigg Boss Kannada) ರಿಯಾಲಿಟಿ ಶೋವಿನ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಸ್ಪರ್ಧಿಗಳೊಂದಿಗೆ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ. ಸೋನು ಗೌಡಗೂ ಕೂಡ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ನಡುವೆ ಬಿಗ್‌ಬಾಸ್‌ ಮನೆಯಲ್ಲಿ ಸೋನು ಕಂಡರೆ ಸ್ಪರ್ಧಿಗಳಿಗೆ ಅಷ್ಟಕಷ್ಟೇ ಎಂಬಂತಾಗಿದೆ. ಸಾಕಷ್ಟು ಅವಾಚ್ಯ ಶಬ್ದಗಳನ್ನು ಸೋನು ಗೌಡ ಮಾತನಾಡುತ್ತಾರೆ ಎಂಬುದು ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಈ ವಿಚಾರವಾಗಿ ಜಯಶ್ರೀ ಅವರು ಸೋನುಗೆ ʻಕೆಟ್ಟ ಶಬ್ದ ಬಳಸಬೇಡ. ಏನೇನೋ ಮಾತನಾಡಬೇಡʼ ಎಂದಿದ್ದಾರೆ. ಚೈತ್ರಾ ಹಳ್ಳಿಕೇರಿ ಕೂಡ ಸೋನುಗೆ ʻʻನೀನು ಮಾತನಾಡುವ ಭರದಲ್ಲಿ ಏನೇನೋ ಮಾತನಾಡುತ್ತೀಯಾ, ಹಾಗೆ ಇರಬೇಡ, ನೀನು ರಿಯಾಲಿಟಿ ಶೋನಲ್ಲಿ ಇದ್ದೀಯಾ. ಹೊರಗಡೆ ಯಾವ ರೀತಿ ಸಂದೇಶ ಹೋಗುತ್ತದೆ ಎಂಬುದು ನಿನಗೆ ಗೊತ್ತಿರಲಿ, ಸ್ವಲ್ಪ ಅರ್ಥ ಮಾಡಿಕೋʼʼ ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಸೋನುಗೆ ಕಿರಿಕಿರಿ ಅನಿಸಿದೆ. ಅದಕ್ಕೆ ಉತ್ತರ ನೀಡಿದ್ದ ಸೋನು ʻʻಎಲ್ಲರೂ ಒಂದು ಬಾರಿ ಹೇಳಿದರೆ ಅರ್ಥೈಸಿಕೊಳ್ಳುತ್ತೇನೆ. ಪದೇಪದೆ ಹೇಳಿದರೆ ಮರೆತು ಹೋಗುತ್ತದೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | Bigg Boss Kannada | ವಿಸ್ತಾರ ನ್ಯೂಸ್‌ ಜತೆ ಕಿರಣ್‌ ಯೋಗೇಶ್ವರ್‌ ಎಕ್ಸ್‌ಕ್ಲೂಸಿವ್‌ ಮಾತು!

ರಾಕೇಶ್‌ ಗೌಡ ಕೂಡ ಸೋನು ಜತೆ ಆಪ್ತತೆಯನ್ನು ಬೆಳೆಸುತ್ತಿದ್ದು, ಕಿವಿಮಾತು ಹೇಳಿದ್ದಾರೆ. ʻʻಚೈತ್ರಾ ಅವರಿಗೆ ಗೌರವ ಕೊಟ್ಟು ಮಾತನಾಡಿಸುʼʼ ಎಂದು ಬದ್ಧಿವಾದ ಹೇಳಿದ್ದಾರೆ. ಆದರೆ, ಸೋನುಗೌಡ ರಾಕೇಶ್‌ ಮಾತು ಕೂಡ ಕೇಳಲು ತಯಾರಿಲ್ಲ. ಸೋನು ಸುದ್ದಿಗೆ ಹೋಗುವುದೇ ಬೇಡ ಎನ್ನುವ ರೀತಿಯಲ್ಲಿ ರಾಕೇಶ್‌ ಹಾಗೂ ಪ್ರತಿಸ್ಪರ್ಧಿ ಅಕ್ಷತಾ ಅವರು ಸೋನು ಮುಂದೆ ಹಾಡು ಹಾಡಿದ್ದಾರೆ. ʻʻಸೋನು ಸೂಪರು, ಆದರೆ ಬಾಯಿ ಡೇಂಜರು ಸೋನು ವಿಷ್ಯ, ಬೇಡವೋ ಶಿಷ್ಯʼʼ ಎಂದು ಕಾಲೆಳೆದಿದ್ದಾರೆ.

ಇದೀಗ ಸೋನು ಗೌಡ ಮಾತಿನ ವಿಚಾರವಾಗಿ ಸ್ಪರ್ಧಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಮನೆಯಲ್ಲಿ ಎಷ್ಟು ದಿನ ಸೋನು ಈ ರೀತಿ ಇರುತ್ತಾರೆ ಎಂಬುದನ್ನು ನೋಡಬೇಕಿದೆ. ವೀಕೆಂಡ್‌ ಪಂಚಾಯಿತಿಯಲ್ಲಿಯೂ ಕಿಚ್ಚ ಸುದೀಪ್‌ ಅವರು ಸೋನು ಗೌಡಗೆ ಕ್ಲಾಸ್‌ ತೆಗೆದುಕೊಂಡಿದ್ದು, ʻʻಆರ್ಯವರ್ಧನ್‌ ಗುರೂಜಿ ಅವರನ್ನು ನೋಡಿ ಕಲಿಯಬೇಕು. ಅದು ಕ್ರೀಡಾತ್ಮಕ ಭಾವನೆ. ನೀವು ಅವರಿಂದ ಕಲಿಯಬೇಕುʼʼ ಎಂದಿದ್ದರು.

ಇದನ್ನೂ ಓದಿ | Bigg Boss Kannada | ಬರ್ತ್‌ಡೇ ಬಾಯ್‌ ರೂಪೇಶ್‌ಗೆ ಸಾನ್ಯ ಕೊಟ್ರು ಭರ್ಜರಿ ಗಿಫ್ಟ್‌!

Exit mobile version