Site icon Vistara News

Bigg Boss Kannada | ಸೋಷಿಯಲ್‌ ಮೀಡಿಯಾದಲ್ಲಿ ರಾಕೇಶ್‌-ಸ್ಫೂರ್ತಿ ಮಾತು: ಲವ್‌ ಕಹಾನಿ ಶುರು?

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಒಟಿಟಿ (Bigg Boss Kannada) ದಿನೇದಿನೆ ರಂಗು ಪಡೆಯುತ್ತಾ ಸಾಗಿದೆ. ಪ್ರತಿ ಬಿಗ್‌ಬಾಸ್‌ ಸಂಚಿಕೆಯಲ್ಲಿಯೂ ಪ್ರೇಮ ಕಥೆಗಳು ಇದ್ದೇ ಇರುತ್ತವೆ. ಇದೀಗ ಈ ಬಿಗ್‌ಬಾಸ್‌ನಲ್ಲಿಯೂ ಪ್ರೀತಿ ಚಿಗುರೊಡೆಯುತ್ತಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಬಿಗ್‌ಬಾಸ್‌ನಲ್ಲಿ ಮೊದಲ ದಿನದಿಂದಲೂ ಸ್ಫೂರ್ತಿ ಗೌಡ ಹಾಗೂ ರಾಕೇಶ್‌ ಅಡಿಗ ಹೆಚ್ಚು ಅನ್ಯೋನ್ಯವಾಗಿ ಕಾಣುತ್ತಿದ್ದಾರೆ. ಹಿಂದೊಮ್ಮೆ ಸೋನು ಗೌಡ ವಿಚಾರವಾಗಿ ರಾಕೇಶ್‌ ಅವರು ಸ್ಪೂರ್ತಿ ಗೌಡ ಅವರದ್ದೇ ತಪ್ಪು ಎಂಬ ಅರ್ಥದಲ್ಲಿ ಹೇಳಿದ್ದರೂ ಸ್ಫೂರ್ತಿ ಗೌಡ ಮಾತ್ರ ಅದಕ್ಕೆ ರಿಯಾಕ್ಟ್‌ ಮಾಡಿರಲಿಲ್ಲ. ʻನನ್ನ ಯೋಚನೆ ಮತ್ತು ನಿಮ್ಮ ಆಲೋಚನೆಗಳು ಒಂದೇ ಇದೆʼ ಎಂದು ಸ್ಫೂರ್ತಿ ಹೇಳಿದ್ದರು. ಇದೀಗ ಹಲವಾರು ಸನ್ನಿವೇಶಗಳು ಸ್ಫೂರ್ತಿ ಗೌಡ ಹಾಗೂ ರಾಕೇಶ್‌ ನಡುವೆ ಆಪ್ತತೆ ಬೆಳೆದಿರುವಂತೆ ತೋರಿಸುತ್ತಿವೆ.

ಇದನ್ನೂ ಓದಿ | Bigg Boss Kannada | ವೇಕ್‌ ಅಪ್‌ ಸಾಂಗ್‌ಗೆ ಸಖತ್‌ ಸ್ಟೆಪ್‌ ಹಾಕಿದ ಸ್ಪರ್ಧಿಗಳು: ಧ್ಯಾನಸ್ಥನಾದ ರಾಕೇಶ್‌!

ಬಿಗ್‌ಬಾಸ್‌ ಮನೆಯಲ್ಲಿ ಸ್ಫೂರ್ತಿ ಗೌಡ ಹಾಗೂ ರಾಕೇಶ್‌ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಒಂದು ಘಟನೆ ನಡೆದಿದೆ. ʻʻನಿಮಗೆ ಯಾರ ಮೇಲಾದರೂ ಲವ್‌ ಆದರೆ ಹೇಳುತ್ತೀರಾ? ಎಂದು ರಾಕೇಶ್‌ ಅವರು ಸ್ಫೂರ್ತಿಗೆ ಪ್ರಶ್ನೆ ಮಾಡಿದ್ದಾರೆ. ʻʻನಾನಾಗಿ ಯಾರನ್ನೂ ಪ್ರೀತಿ ಮಾಡಿಲ್ಲ. ಪ್ರಪೋಸ್‌ ಕೂಡ ಮಾಡಿಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡುತ್ತೇನೆʼʼ ಎಂದು ಸ್ಫೂರ್ತಿ ಉತ್ತರ ನೀಡಿದ್ದಾರೆ.

ಇದಕ್ಕೆ ರಾಕೇಶ್‌ ʻʻನೀನು ಟಿಪಿಕಲ್‌ ಹುಡುಗಿ ತರ ಆಡ್ತೀಯಲ್ಲ. ಲವ್‌ ಆದರೆ ಲವ್‌ ಆಗಿದೆ ಎಂದು ಹೇಳಿಕೊಳ್ಳಬೇಕು. ಇಷ್ಟ ಇದ್ದರೆ ಇಷ್ಟ ಇದೆ ಎಂದು ಹೇಳಿʼʼ ಎಂದು ಹೇಳಿದ್ದಾರೆ. ಅದಕ್ಕೆ ಸ್ಫೂರ್ತಿ ʻʻಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಎಂದು ಹೇಳುತ್ತೇನೆʼʼ ಎಂದರು.

ಬಿಗ್‌ಬಾಸ್‌ ವೇದಿಕೆಯಲ್ಲಿ ಸ್ಫೂರ್ತಿ ಗೌಡ ಮೊದಲ ದಿನವೇ ತಾನು ಏನೇ ಕೆಲಸ ಮಾಡಿದರೂ ಅರ್ಧಕ್ಕೆ ಓಡಿ ಬರುತ್ತೇನೆ ಎಂದು ಹೇಳಿಕೊಂಡಿದ್ದರು. ಸ್ಫೂರ್ತಿ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಇದರಿಂದ ಅರ್ಧಕ್ಕೆ ಓಡಿ ಬಂದಿದ್ದರು. ಇಂಜಿನಿಯರಿಂಗ್‌ ಕೂಡ ಅರ್ಧಕ್ಕೆ ತೊರೆದಿದ್ದಾರೆ. ಆದರೆ, ಇದೀಗ ಬಿಗ್‌ ಬಾಸ್‌ನಲ್ಲಿ ಹಲವು ಟಾಸ್ಕ್‌ಗಳನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ | Bigg Boss Kannada | ಮೊದಲ ಕ್ಯಾಪ್ಟನ್‌ ಆಗಿ ಅರ್ಜುನ್‌ ರಮೇಶ್‌ ಆಯ್ಕೆ

Exit mobile version