Site icon Vistara News

Bigg Boss Kannada | ರಾಕೇಶ್‌ ಗೆಲ್ಲಬೇಕೆಂಬ ಆಸೆ ಇದೆ ಎಂದ ಸ್ಫೂರ್ತಿ ಗೌಡ, ಸೋನು ಗೌಡ ಬಗ್ಗೆ ಹೇಳಿದ್ದೇ ಬೇರೆ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada) ಒಟಿಟಿ ಸ್ಪರ್ಧಿ ಸ್ಫೂರ್ತಿ ಗೌಡ ಅವರು ಬಿಗ್‌ ಬಾಸ್‌ ಮನೆಯ ಅನುಭವವನ್ನು ಹಂಚಿಕೊಂಡಿದ್ದಾರೆ. 15 ದಿನಗಳ ಕಾಲ ಆಡಿದ ಸ್ಫೂರ್ತಿ ಅವರು ತುಂಬಾ ಚುರುಕಾಗಿ ಟಾಸ್ಕ್‌ಗಳನ್ನು ನಿಭಾಯಿಸಿದ್ದರು. ಬಿಗ್‌ ಬಾಸ್‌ ಮನೆಯ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ.

ʻʻಬಿಗ್‌ ಬಾಸ್‌ ಮನೆಯಲ್ಲಿ ಕಲಿತದ್ದು ತುಂಬಾ ಇದೆ. ಲೈಫ್‌ನಲ್ಲಿ ತುಂಬಾ ಕಡಿಮೆ ಜನ ಈ ಜರ್ನಿಯನ್ನು ಆನಂದಿಸುತ್ತಾರೆ. ಅದರಲ್ಲಿ ಬಿಗ್‌ ಬಾಸ್‌ ನನಗೆ ಈ ಅವಕಾಶ ನೀಡಿದೆ. ಅದೇ ರೀತಿ ಟ್ರೋಲ್‌ ವಿಚಾರಕ್ಕೆ ಬಂದರೆ ಟ್ರೋಲ್‌ ಮಾಡುವರ ಬಗ್ಗೆ ಕಮೆಂಟ್‌ ನಾನು ಮಾಡುವುದಿಲ್ಲ. ನಾನು ಪಾಸಿಟಿವ್‌ ಮತ್ತ ನೆಗೆಟಿವ್‌ ಟ್ರೋಲ್‌ ನೋಡಿದ್ದೇನೆ. ಎಂಜಾಯ್‌ ಮಾಡುತ್ತಿದ್ದೇನೆ. ಅದರ ಬಗ್ಗೆ ಕೋಪ ಮತ್ತು ಬೇಜಾರು ಆಗುತ್ತಿಲ್ಲʼʼ ಎಂದಿದ್ದಾರೆ.

ರಾಕೇಶ್‌ ಕುರಿತಾದ ಗಾಸಿಪ್‌ಗೆ ಸ್ಪಷ್ಟನೆ ನೀಡಿದ ಸ್ಫೂರ್ತಿ

ನನ್ನ ಮತ್ತು ರಾಕೇಶ್‌ ಅವರ ಮಧ್ಯೆ ಏನೂ ಇಲ್ಲ. ಆದರೆ ನಾನು ಸೋಷಿಯಲ್‌ ಮೀಡಿಯಾದಲ್ಲಿ ನಮ್ಮಿಬ್ಬರ ಮಧ್ಯೆ ಮಾತನಾಡುವಾಗ ಬೇಸರವಿದೆ. ನನಗೆ ಅವರು ಒಳ್ಳೆಯ ಗೆಳೆಯ. ರಾಕೇಶ ಅವರು ಮನೆಯವರೆಲ್ಲರ ಜತೆ ಒಡನಾಟ ಚೆನ್ನಾಗಿದೆ. ಸೋನು ಗೌಡ ಕೂಡ ತುಂಬಾ ನ್ಯೂಟ್ರಲ್‌ ಆಗಿದ್ದಾರೆ. ಅವರು ಇಮ್ಯೆಚುರ್‌ ಹುಡುಗಿ. ಯಾವುದನ್ನು ಹೇಗೆ ರಿಯಾಕ್ಟ್‌ ಮಾಡಬೇಕು ಎನ್ನುವುದು ಗೊತ್ತಿಲ್ಲ ಆದರೆ ಅವರು ನೇರವಾಗಿ ಮಾತನಾಡುತ್ತಾರೆ ಎಂದರು. ನನ್ನ ವಿಚಾರಕ್ಕೆ ಬಂದರೆ ಎಲ್ಲವನ್ನೂ ಗೇಮ್‌ ತರಹ ನೋಡುತ್ತಾರೆ. ಗುರೂಜಿ ಅವರಿಗೆ ಮಕ್ಕಳ ಸ್ವಭಾವವಿದೆ. ಅಲ್ಲಿರುವವರು ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ರಾಕೇಶ್‌ ಗೆಲ್ಲಬೇಕೆಂಬ ಆಸೆ ಇದೆʼʼ ಎಂದು ಹೇಳಿದರು.

ಬಿಗ್‌ ಬಾಸ್‌ ವೇದಿಕೆಯಲ್ಲಿ ಸ್ಫೂರ್ತಿ ಗೌಡ ಮೊದಲ ದಿನವೇ ತಾನು ಏನೇ ಕೆಲಸ ಮಾಡಿದರೂ ಅರ್ಧಕ್ಕೆ ಓಡಿ ಬರುತ್ತೇನೆ ಎಂದು ಹೇಳಿಕೊಂಡಿದ್ದರು. ಸ್ಫೂರ್ತಿ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಅದರಿಂದ ಅರ್ಧಕ್ಕೆ ಓಡಿ ಬಂದಿದ್ದರು. ಎಂಜಿನಿಯರಿಂಗ್‌ ಕೂಡ ಅರ್ಧಕ್ಕೆ ತೊರೆದಿದ್ದಾರೆ. ಆದರೆ, ಇದೀಗ ಬಿಗ್‌ ಬಾಸ್‌ನಿಂದಲೂ ಅರ್ಧಕ್ಕೆ ಹೊರಕ್ಕೆ ಬಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಸೋಮಣ್ಣ ಫುಲ್‌ ಗರಂ: ನಂದಿನಿ-ಸೋಮಣ್ಣ ಮಾತಿನ ಸಮರ!

Exit mobile version