Site icon Vistara News

Bigg Boss Kannada | ಈ ವಾರ ಅರುಣ್‌ ಸಾಗರ್‌ಗೆ ಕಿಚ್ಚನ ಚಪ್ಪಾಳೆ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌9ರ (Bigg Boss Kannada) ಆವೃತ್ತಿಯಲ್ಲಿ ಅರುಣ್‌ ಸಾಗರ್‌ ಅವರದ್ದು ಮನೆಯಲ್ಲಿ ಮನೋರಂಜನೆ ನೀಡಲು ಎತ್ತಿದ ಕೈ. ಆದರೆ ಮೊದಲನೇ ವಾರ ಅರುಣ್‌ ಸಾಗರ್‌ ವರ್ತನೆ ಮನೆಯಲ್ಲಿ ಮಿತಿ ಮೀರಿದಂತಿದೆ ಎಂದು ಸ್ಪರ್ಧಿಗಳು ಆರೋಪಿಸಿದ್ದರು. ವಿದೂಷಕನೆಂಬ ಬ್ಯಾಂಡ್‌ ಅನ್ನು ಸಹ ಸ್ಪರ್ಧಿಗಳಿಂದ ಪಡೆದುಕೊಂಡಿದ್ದ ಅರುಣ್‌ ಸಾಗರ್‌, ಹುಚ್ಚನೆಂಬ ಬಿರುದನ್ನು ಸದಸ್ಯರು ನೀಡಿದ್ದರು. ಆದರೆ ಮೂರನೇ ವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚನ ಚಪ್ಪಾಳೆ ಅರುಣ್‌ ಸಾಗರ್‌ ಅವರಿಗೆ ಸಿಕ್ಕಿದೆ.

ಜೋಕರ್‌ ಎಂಬಂತೆ ಪಾತ್ರವನ್ನು ಸೃಷ್ಟಿಸಿಕೊಂಡು ಮನೆಯಲ್ಲಿ ಡೀಲಿಂಗ್‌
ಗೋಲ್ಡ್‌ ಮೈನ್‌ ಕ್ಯಾಪ್ಟನ್‌ ಟಾಸ್ಕ್‌ನಲ್ಲಿ ಅರುಣ್‌ ಸಾಗರ್‌ ಜೋಕರ್‌ ಎಂಬಂತೆ ಪಾತ್ರವನ್ನು ಸೃಷ್ಟಿಸಿಕೊಂಡು ಮನೆಯಲ್ಲಿ ಆಟವನ್ನು ಚೆನ್ನಾಗಿ ನಿಭಾಯಿಸಿದ್ದರು. ಹಾಗೇ ಕಳ್ಳನಾಗಿ ಚಿನ್ನವನ್ನು ಕದ್ದು, ಮತ್ತೊಂದು ರೀತಿಯಲ್ಲಿ ಆಟ ಪ್ರದರ್ಶಿಸಿದ್ದರು. ಜೋಕರ್ ರೀತಿ ಮೇಕಪ್ ಮಾಡಿಕೊಂಡು ಆಗಾಗ ವಿಸರ್ಜಕರನ್ನು ಯಾಮಾರಿಸಿ, ತಿಜೋರಿಯಿಂದ ಚಿನ್ನವನ್ನು ಅರುಣ್ ಸಾಗರ್ ಕಳ್ಳತನ ಮಾಡುತ್ತಿದ್ದರು. ಅದೇ ಚಿನ್ನವನ್ನ ಇಟ್ಟುಕೊಂಡು ತಮ್ಮ ವಿರುದ್ಧ ಒಪ್ಪಂದ ಮಾಡಿಕೊಳ್ಳುವಂತಿಲ್ಲ ಅಂತಲೂ ವಿಭಿನ್ನವಾಗಿ ಡೀಲಿಂಗ್ ಮಾಡಿದ್ದರು.

ಆದರೆ ಸ್ಪರ್ಧಿಗಳು ಈ ಆಟ ಬಿಗ್‌ ಬಾಸ್‌ ನಿಯಮದಲ್ಲೇ ಇಲ್ಲ ಎಂದು ಗರಂ ಆಗಿದ್ದರು. ಇದೇ ಕಾರಣವನ್ನು ಇಟ್ಟುಕೊಂಡು ಕಳಪೆಯನ್ನೂ ಅರುಣ್‌ ಸಾಗರ್‌ ಅವರಿಗೆ ನೀಡಿದ್ದರು. ಅರುಣ್‌ ಸಾಗರ್‌ ಮನೆಯಲ್ಲಿ ಈ ಬಗ್ಗೆ ಸ್ಪರ್ಧಿಗಳಿಗೆ ಖಡಕ್‌ ಆಗಿ ಉತ್ತರವನ್ನೂ ನೀಡಿದ್ದರು.

ಕಿಚ್ಚ ಸುದೀಪ್‌ ಹೇಳಿದಾಗಲೇ ಅರ್ಥ ಆಗೋದು ನಿಮಗೆ!
ಅರುಣ್‌ ಸಾಗರ್‌ ಮಾತನಾಡಿ ʻʻನನಗೆ ಈ ಮೊದಲು ಎದೆ ನೋವು ಇತ್ತು. ಆದರೂ ಟಾಸ್ಕ್‌ ಆಡಿದ್ದೇನೆ. ಪಾರ್ಟಿಸಿಪೇಟ್‌ ಮಾಡಬೇಕಿತ್ತು, ಪರ್‌ಫಾರ್ಮರ್‌ ತರ ಇದ್ದಿದ್ದು ಅಷ್ಟೇ. ಆದರೆ ನೀವೆಲ್ಲರೂ ಹೇಗೆ ಯೋಚಿಸುತ್ತಿದ್ದೀರಾ ಅಂದರೆ ನೀವು ಮಾನವೀಯತೆ ಬಗ್ಗೆ ಮಾತನಾಡಲು ಬರುತ್ತೀರಿ ಆದರೆ ಮಾನವೀಯತೆ ಎನ್ನುವುದು ನಿಮ್ಮೊಳಗೆ ತುಂಬಾ ಜನಕ್ಕೆ ಇಲ್ಲ. ನನಗೆ ಕಳಪೆ ಕೊಟ್ಟಿದ್ದಕ್ಕೆ ಬೇಸರ ಇಲ್ಲ. ನೀವು ಯಾರೂ ಕೂಡ ಗೇಮ್‌ ಅನ್ನು ಬೇರೆ ತರಹ ಯೋಚನೆ ಮಾಡುವುದಿಲ್ಲ. ಸುದೀಪ್‌ ಅವರು ಹೇಳಿದಾಗಲೇ ನಿಮಗೆ ಅರಿವಾಗುತ್ತದೆ. ಗೇಮ್‌ನಲ್ಲಿ ಕಳ್ಳ ಯಾಕೆ ಆಗಬಾರದು? ಸುಳ್ಳ ಯಾಕೆ ಆಗಬಾರದು? ಹೇಳಿದಾರಾ ಬಿಗ್‌ ಬಾಸ್‌? ನಾನೇ ಹೋಗ್ತೀನಿ ಅಂದರೂ ನಿಮ್ಮ ಕನಿಕರ ನನಗೆ ಬೇಡ. ಯಾವ ಸಂದರ್ಭಕ್ಕೆ ಯಾವ ಕ್ಷಣಕ್ಕೆ ಹ್ಯೂಮಾನಿಟಿ ತೋರಸಿಬೇಕು ಅದು ಹ್ಯೂಮನ್‌” ಎಂದು ಹೇಳಿದ್ದರು.

ನಾಯಕ ಜೋಕರ್‌ ಆಗಬಾರದು ಎಂದಿದ್ದ ಕಿಚ್ಚ!
ಮೊದಲನೇ ವಾರ ಕಿಚ್ಚ ಅರುಣ್‌ ಸಾಗರ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡು ʻʻಅರುಣ್ ಸಾಗರ್ ಅವರು ಅದ್ಭುತವಾದ ಎಂಟರ್ಟೇನರ್. ಆದರೆ ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನು ಈಸಿಯಾಗಿ ತೆಗೆದುಕೊಳ್ಳೋಕೆ ಹೋಗಬೇಡಿ. ಎಲ್ಲಿ ಟಾಸ್ಕ್‌ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೋ ಅಲ್ಲಿ ನೀವು ಕಪಿಚೇಷ್ಟೆ ಮಾಡಿದ್ರಿ” ಎಂದು ಕಿಚ್ಚ ಸುದೀಪ್ ಹೇಳಿದ್ದರು. “ನವಾಜ್‌ಗೆ ಬರುತ್ತಿದ್ದ ಕೋಪ ತಡೆಯಲು ನಾನೇನೋ ಮಾಡಿದೆ ಎಂದರೆ ತಪ್ಪಾಗಿ ಕಾಣೋರು ಯಾರು? ನಾಯಕರಾಗಬೇಕಿರೋ ಜಾಗದಲ್ಲಿ ಜೋಕರ್ ಆಗೋಕೆ ಹೋಗಬೇಡಿ, ಜೋಕರ್ ಆಗೋ ಜಾಗದಲ್ಲಿ ನಾಯಕರಾಗೋಕೆ ಹೋಗಬೇಡಿ” ಎಂದು ಕಿಚ್ಚ ಸುದೀಪ್ ವಾರ್ನಿಂಗ್‌ ನೀಡಿದ್ದರು.ಆದರೆ ಇದೀಗ ಕ್ರಿಯೇಟಿವ್‌ ಜೋಕರ್‌ಗೆ ಕಿಚ್ಚ ಚಪ್ಪಾಳೆಯನ್ನು ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ವಯಸ್ಸಿಗೆ ಮರ್ಯಾದೆ ಕೊಡುತ್ತಿದ್ದೇನೆ , ಮಾತಲ್ಲಿ ನಿಗಾ ಇರಲಿ: ಗುರೂಜಿಗೆ ಕಿಚ್ಚ ಎಚ್ಚರಿಕೆ!

Exit mobile version