ಬೆಂಗಳೂರು: ಬಿಗ್ ಬಾಸ್ ಒಟಿಟಿ ಕನ್ನಡ (Bigg Boss Kannada) ನಾಲ್ಕನೇ ವಾರಕ್ಕೆ ಬಂದು ತಲುಪಿದೆ. ಯಾರು ಅಡುಗೆ ಮಾಡಬೇಕು? ಜನ ಏನಂತಾರೆ? ಎನ್ನುವ ಟಾಸ್ಕ್‌ನಲ್ಲಿ ರಾಕೇಶ್ ಅಡಿಗ ಆಯ್ಕೆ ಆಗಿದ್ದಾರೆ. ಶುಕ್ರವಾರ ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಅವರ ಜನುಮದಿನದ ಅಂಗವಾಗಿ ಸ್ಪರ್ಧಿಗಳು ಸಖತ್ ಆ್ಯಕ್ಟೀವ್ ಆಗಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಕಿಚ್ಚನದೇ ಧ್ಯಾನ, ಗಾನಾವಾಗಿದೆ. ಹಾಗೂ ಕಿಚ್ಚ ಸುದೀಪ್ ಅವರ ಡಿಫರೆಂಟ್ ಲುಕ್ ಅನ್ನು ಪ್ರೋಮೊದೊಂದಿಗೆ ಹಂಚಿಕೊಂಡಿರುವ ಬಿಗ್ ಬಾಸ್ ಜನುಮದಿನಕ್ಕೆ ಶುಭ ಹಾರೈಸಿದ್ದಾರೆ.
ಯಾರು ಅಡುಗೆ ಮಾಡಬೇಕು?
ಯಾರು ಅಡುಗೆ ಮಾಡಬೇಕು? ಜನ ಏನಂತಾರೆ? ಎಂಬ ಬಿಗ್ ಬಾಸ್ ಟಾಸ್ಕ್‌ನಲ್ಲಿ ರಾಕೇಶ್ ಅವರು ಆಯ್ಕೆ ಆಗಿದ್ದಾರೆ. ಜನರು ರಾಕೇಶ್ ಅವರೇ ಅಡುಗೆ ಮಾಡಬೇಕೆಂದು ವೋಟ್ ಹಾಕಿದ್ದರು. ಇಂದು ರಾಕೇಶ್ ಅವರು ಬಿಟ್‌ರೂಟ್ ಪಲ್ಯಾ ಮತ್ತು ಎಗ್ ರೈಸ್ ಮಾಡಲು ಮುಂದಾಗಿದ್ದರು. ಅಡುಗೆಗೆ ಆರ್ಯವರ್ಧನ್ ಗುರೂಜಿ ಸಖತ್ ಸಾಥ್ ನೀಡಿದರು.
ಇದನ್ನೂ ಓದಿ | Bigg Boss Kannada | ನನಗೆ ಅಕ್ಷತಾ ಸ್ವಲ್ಪವೂ ಇಷ್ಟವಿಲ್ಲ, ಆದರೆ ಚೈತ್ರಾ ಫೇವರಿಟ್ ಎಂದ ಜಯಶ್ರೀ
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡರ ನಳಪಾಕ
ಸೋನು ಗೌಡ ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಅಡುಗೆ ಮಾಡಿದ್ದರು. ಕ್ಯಾಮೆರಾ ಮುಂದೆ ಸೋನು ಗೌಡ ಮಾತನಾಡಿ ʻʻಇಷ್ಟು ದಿನ ನಾನು ಬೇಕು ಅಂತಲೇ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ನಮ್ಮ ಅಡುಗೆ ಚೆನ್ನಾಗಿ ಇಲ್ಲದೇ ಹೋದರೆ ಸುಮ್ಮನೆ ಸ್ಪರ್ಧಿಗಳು ನೆಗೆಟಿವ್ ಆಗಿ ಮಾತನಾಡಿಕೊಳ್ಳುತ್ತಾರೆ. ಅಡುಗೆ ಮಾಡಲು ಅವಕಾಶ ಕೊಟ್ಟ ಬಿಗ್ ಬಾಸ್‌ಗೆ ಧನ್ಯವಾದಗಳು. ಜನರು ನನ್ನನ್ನು ವೋಟ್ ಮಾಡಿದ್ದಕ್ಕೆ ಥ್ಯಾಂಕ್ಸ್ʼʼ ಎಂದು ಖುಷಿ ವ್ಯಕ್ತಪಡಿಸಿದ್ದರು.
ಈಗಾಗಲೇ ಬಿಗ್ ಬಾಸ್ 25 ದಿನಗಳನ್ನು ಪೂರೈಸಿದೆ. ಎರಡು ವಾರಗಳಲ್ಲಿ ಬಿಗ್ ಬಾಸ್ ಒಟಿಟಿ ಪೂರ್ಣಗೊಳ್ಳುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಕಟ್ಟ ಕಡೆಯ ಕ್ಯಾಪ್ಟನ್‌ಶಿಪ್ ಅನ್ನು ರೂಪೇಶ್ ಶೆಟ್ಟಿ ಪಡೆದುಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಕಾರ್ಯಕ್ರಮದಲ್ಲಿ ಈವರೆಗೂ ಅರ್ಜುನ್ ರಮೇಶ್, ಜಶ್ವಂತ್ ಬೋಪಣ್ಣ, ಸೋಮಣ್ಣ ಮಾಚಿಮಾಡ ಹಾಗೂ ರೂಪೇಶ್ ಶೆಟ್ಟಿ ಕ್ಯಾಪ್ಟನ್ ಪಟ್ಟ ಪಡೆದಿದ್ದಾರೆ.
ಇದನ್ನೂ ಓದಿ | Bigg Boss Kannada | ರೂಪೇಶ್ ನನ್ ಹುಡ್ಗ ಅಂದ್ರು ನಂದಿನಿ; ಸೀರಿಯಸ್ ಆದ್ರು ರಾಕೇಶ್!