Site icon Vistara News

Bigg Boss Kannada | ಸಾನ್ಯ ಪೋಸ್ಟ್‌ಗೆ ಕಿಚ್ಚನ ಖಡಕ್‌ ರಿಯಾಕ್ಷನ್‌: ರೂಪೇಶ್ ಕ್ಷಮೆಯಾಚಿಸಿದ್ದೇಕೆ?

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ (Bigg Boss Kannada) ಒಟಿಟಿ ಯಿಂದ ಟಿವಿ ಸೀಸನ್‌ವರೆಗೂ ರೂಪೇಶ್‌ ಶೆಟ್ಟಿ ಹಾಗೂ ಸಾನ್ಯ ಅಯ್ಯರ್‌ ಪ್ರೇಮ ಪಕ್ಷಿಗಳು ಎಂದೇ ಹೆಸರುವಾಸಿ. ಸಾನ್ಯ ಅಯ್ಯರ್‌ ಎಲಿಮಿನೇಟ್‌ ಆದ ಸುದ್ದಿ ಕೇಳಿ ರೂಪೇಶ್‌ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ವೇಳೆ ತಮಗೆ ಪ್ರತಿ ವಾರ ಬಟ್ಟೆ ಕಳುಹಿಸಬೇಕು ಎಂದು ಸಾನ್ಯ ಬಳಿ ರೂಪೇಶ್ ಮನವಿ ಮಾಡಿದ್ದರು. ಅದರಂತೆ ಎರಡು ವಾರಗಳು ಬಟ್ಟೆಯನ್ನ ಸಾನ್ಯ ಕೂಡ ಕಳುಹಿಸಿದ್ದರು. ಕೆಲ ದಿನಗಳ ಹಿಂದೆ ತಾವು ಕಳುಹಿಸಿರುವ ಬಟ್ಟೆ ಬಿಗ್ ಬಾಸ್, ರೂಪೇಶ್‌ಗೆ ನೀಡಿಲ್ಲ ಎಂದು ಸಾನ್ಯ ಗರಂ ಆಗಿ ಪೋಸ್ಟ್ ಹಾಕಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಕೂಡ ಖಡಕ್ ಉತ್ತರ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್‌ ಈ ಬಗ್ಗೆ ರೂಪೇಶ್‌ ಶೆಟ್ಟಿ ಅವರಿಗೆ ಮಾತನಾಡಿದ್ದು ʻʻನೀವು ಬಿಗ್ ಬಾಸ್ ಮನೆಗೆ ಹೋಗುವಾಗ ಇವರನ್ನೇ ಸಂಪರ್ಕಿಸಬೇಕು ಎಂದು ಹೇಳಿ ಹೋಗುತ್ತೀರಾ. ಏನೇ ವಿಚಾರ ಇದ್ದರೂ ನಿಮ್ಮ ಕುಟುಂಬಕ್ಕೆ ನಾವು ತಿಳಿಸುತ್ತೇವೆ. ಈಗ ಏನಾಗಿದೆ ಅಂದರೆ ನಿಮಗೆ ಎರಡು ಕಡೆಯಿಂದ ಬಟ್ಟೆ ಬರುತ್ತಿದೆ. ಒಂದು ಮನೆಯಿಂದ ಇನ್ನೊಂದು ನಿಮ್ಮ ಆಪ್ತರಾಗಿರುವಂತಹ ಸಾನ್ಯ ಅವರ ಕಡೆಯಿಂದ. ಸಾನ್ಯ ಹೇಳುತ್ತಾರೆ ಈ ಬಟ್ಟೆ ಅವರಿಗೆ ಕಳುಹಿಸಿ ಎಂದು ಅದು ನಿಮಗೆ ಬಂದಿದೆ. ಆದರೆ ಅದು ನಿಮ್ಮ ಮನೆಯವರಿಗೆ ಸಮಸ್ಯೆಯಿದೆ. ನಾನು ಕಳುಹಿಸಿರುವ ಬಟ್ಟೆ ನಿಮಗೆ ಹೋಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಪೋಸ್ಟ್ ಮಾಡುತ್ತಾರೆʼʼಎಂದರು.

ಇದನ್ನೂ ಓದಿ | Bigg Boss Kannada | ಈ ವಾರದ ಕಳಪೆ ಅಮೂಲ್ಯ ಗೌಡ: ರೂಪೇಶ್‌ ಶೆಟ್ಟಿ ಮನೆಯ ಕ್ಯಾಪ್ಟನ್‌!

ಮಾತು ಮುಂದುವರಿಸಿದ ಕಿಚ್ಚ ʻʻಸಾನ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದೀದ್ದೀರಿ. ಅರ್ಥ ಮಾಡಿಕೊಂಡಿದ್ದೀರಾ ಎಂದು ಅಂದುಕೊಂಡಿದ್ದೇವೆ. ಆದರೂ ಕೂಡ ಬಿಗ್ ಬಾಸ್ ನಿಮ್ಮ ಸ್ನೇಹವನ್ನ ಅರ್ಥಮಾಡಿಕೊಂಡು ಎರಡು ವಾರಗಳು ಬಟ್ಟೆಯನ್ನ ಕಳುಹಿಸಿ ಕೊಟ್ಟಿದ್ದಾರೆʼʼ ಎಂದು ಸಾನ್ಯಗೆ ಕಿಚ್ಚ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ʻʻನಿಮ್ಮ ಮನೆಯವರ ಎಮೋಷನ್ಸ್‌ಗೆ ನಾವು ಗೌರವ ಕೊಟ್ಟು ಅವರು ಹೇಳಿದಂತೆ ನಾವು ಫಾಲೋ ಮಾಡೋದು ಕರೆಕ್ಟ್ ಅಥವಾ ತಪ್ಪಾ ರೂಪೇಶ್ ಅವರೇʼʼ ಎಂದು ಕಿಚ್ಚ ಸುದೀಪ್‌ ಅವರು ರೂಪೇಶ್‌ ಶೆಟ್ಟಿಗೆ ಪ್ರಶ್ನೆ ಮಾಡಿದ್ದಾರೆ.

ರೂಪೇಶ್‌ ಶೆಟ್ಟಿ ಪ್ರತಿಕ್ರಿಯೆ ನೀಡಿ ʻʻನಮ್ಮ ಮನೆಯವರು ಏನೋ ಹೇಳುತ್ತಿದ್ದಾರೆ ಅಂದರೆ ಅದರಲ್ಲಿ ಒಂದು ಅರ್ಥವಿರುತ್ತದೆ.  ಸಾನ್ಯ ಕ್ಷಮಿಸು, ಮನೆಯಿಂದ ಹೊರಬಂದ ಮೇಲೆ ನಿನ್ನ ಜತೆ ಮಾತನಾಡುತ್ತೇನೆ. ನಿನ್ನ ಪ್ರೀತಿ ನನಗೆ ಅರ್ಥವಾಗುತ್ತದೆ. ನಾನು ಮನೆಯವರ ಪ್ರೀತಿಯಿಂದ ಇಲ್ಲಿಗೆ ಬಂದಿರುವುದು. ಇಲ್ಲಿಗೆ ಬಂದ ಮೇಲೆ ನನಗೆ ಸಾನ್ಯ ಸ್ನೇಹ ಸಿಕ್ಕಿರೋದು. ಎರಡು ಕೂಡ ನನಗೆ ಮುಖ್ಯನೇ ಆದರೆ ಸದ್ಯಕ್ಕೆ ನನ್ನ ಮನೆಯವರು ಏನು ಹೇಳುತ್ತಾರೆ ಎನ್ನುವುದನ್ನು ಫಾಲೋ ಮಾಡುತ್ತೇನೆʼʼ. ಈ ವೇಳೆ ರೂಪೇಶ್ ಕ್ಷಮೆಯಾಚಿಸಿದ್ದಾರೆ.

ರೂಪೇಶ್‌ ಶೆಟ್ಟಿ ಒಟಿಟಿಯಿಂದ ಟಿವಿ ಸೀಸನ್‌ವರೆಗೂ ತಾವಿಬ್ಬರೂ ಬೆಸ್ಟ್‌ ಫ್ರೆಂಡ್‌ ಎಂತಲೇ ಹೇಳಿಕೊಂಡು ಬಂದಿದ್ದಾರೆ. ರೂಪೇಶ್‌ ಶೆಟ್ಟಿ ಅವರು ಸಾನ್ಯರಿಂದ ಪ್ರಾಮೀಸ್ ಮಾಡಿಕೊಂಡಿದ್ದರು. ʻʻಪ್ರತಿ ವಾರವೂ ನನಗೆ ರೆಡ್ ಶರ್ಟ್ ಅಥವಾ ಟೀ-ಶರ್ಟ್ ಕಳುಹಿಸಬೇಕು. ಅದರಲ್ಲಿ ನಿನ್ನ ಪ್ರೀತಿ ತುಂಬಿರಬೇಕುʼʼ ಎಂದಿದ್ದರು.  ಅದರಂತೆ ಸಾನ್ಯ ಒಂದು ವಾರ ಬಟ್ಟೆ ಕಳುಹಿಸಿದ್ದಾರೆ. ಎರಡನೇ ವಾರದಿಂದ ಯಾವ ಡ್ರೆಸ್ ಕೂಡ ಬರುವುದಿಲ್ಲ. ಇದನ್ನು ರೂಪೇಶ್ ಮಾತ್ರವಲ್ಲ ಪ್ರತಿ ದಿನ ಎಪಿಸೋಡ್ ನೋಡುತ್ತಿರುವವರಿಗೂ ಗಮನಕ್ಕೆ ಬಂದಿದೆ. ಇದೀಗ ಸಾನ್ಯ ಈ ಕುರಿತು ಪೋಸ್ಟ್‌ ಹಾಕಿಕೊಂಡಿದ್ದರು.

ಇದನ್ನೂ ಓದಿ | Bigg Boss Kannada | ಬಾಲ್‌ ಟಾಸ್ಕ್‌ನಲ್ಲಿ ರಾಕೇಶ್‌ ಮಾಸ್ಟರ್‌ ಪ್ಲ್ಯಾನ್‌: ಗೆದ್ದಿದ್ಯಾರು?

Exit mobile version