Site icon Vistara News

Bigg Boss Kannada | ಒಬ್ಬರು ಕೆಲಸ ಅಂತ ಜಾರಿಕೊಳ್ತಾರೆ! ಇನ್ನೊಬ್ಬರು ತೊಂದರೆಗೆ ಸಿಕ್ಕಿಹಾಕಿಕೊಳ್ತಾರೆ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಒಟಿಟಿ (Bigg Boss Kannada) ಸೂಪರ್‌ ಸಂಡೇ ವಿತ್‌ ಸುದೀಪ್‌ ಪ್ರೋಮೊವನ್ನು ಹಂಚಿಕೊಂಡಿದೆ. ಸ್ಪರ್ಧಿಗಳೊಂದಿಗೆ ಕಿಚ್ಚ ಸುದೀಪ್‌ ಖುಷಿಯಲ್ಲಿ ಮಾತನಾಡಿದ್ದಾರೆ. ಶನಿವಾರ ಸ್ವಲ್ಪ ಖಾರವಾಗಿಯೇ ಇದ್ದ ಕಿಚ್ಚ ಇದೀಗ ಸ್ಪರ್ಧಿಗಳ ಜತೆ ಖುಷಿಯಲ್ಲಿ ಇರುವ ಸನ್ನಿವೇಶದ ಕ್ಲಿಪ್‌ ಅನ್ನು ವೂಟ್‌ ಹಂಚಿಕೊಂಡಿದೆ.

ʻಕೆಲಸ ಅಂತ ಬಂದರೆ ಜಾರಿಕೊಳ್ಳೋದು ಯಾರುʼ ಎಂದು ಸುದೀಪ್‌ ಪ್ರಶ್ನಿಸಿದ್ದು, ರಾಕೇಶ್‌ ಉತ್ತರ ನೀಡಿದ್ದಾರೆ. ಸ್ಫೂರ್ತಿಯ ಹೆಸರು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ʻʻಎಲ್ಲರೂ ಪಾತ್ರೆ ತೊಳೆಯುತ್ತಿದ್ದರೆ, ಕೊನೆಯಲ್ಲಿ ಬಂದು, ಏನಾದರು ಸಹಾಯ ಬೇಕಾ ಎಂದು ಕೇಳುತ್ತಾರೆʼʼ ಎಂಬ ವಿವರಣೆ ನೀಡಿದ್ದಾರೆ. ಅದಕ್ಕೆ ಕಿಚ್ಚ ಉತ್ತರ ನೀಡಿ ʻʻಅವರಿಗೆ ನಿಮ್ಮ ಹಿಂದೆ ಇರುವುದು ತುಂಬಾ ಇಷ್ಟʼʼ ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ | Bigg Boss Kannada | ಆಚೆ ಹೋದ ಮೇಲೆ ಏನೋ ಹೇಳ್ತೀನಿ ಎಂದ ರೂಪೇಶ್‌: ರೂಪೇಶ್‌-ಸಾನ್ಯಾ ಗುಸುಗುಸು

ಆರ್ಯವರ್ಧನ್‌ ಗುರೂಜಿಗೂ ಸುದೀಪ್‌ ಕಾಲೆಳೆದಿದ್ದು, ʻʻಗುರೂಜಿ ಅವರು ಏನೋ ಹೇಳುವುದಕ್ಕೆ ಹೋಗಿ ಇನ್ನೇನೋ ಹೇಳಿ ಯಾವಾಗಲೂ ತೊಂದರೆಗೆ ಸಿಕ್ಕಿಹಾಕಿಕೊಳ್ತಾರೆʼʼ ಎಂದಿದ್ದಾರೆ. ಅದಕ್ಕೆ ಮನೆಯ ಸ್ಪರ್ಧಿಗಳು ಬೋರ್ಡ್‌ ಹಿಡಿದು ಒಮ್ಮತ ಸೂಚಿಸಿದ್ದಾರೆ. ಹಾಗೆಯೇ ಜಸ್ವಂತ್‌ ಕೂಡ ಆರ್ಯವರ್ಧನ್‌ ಬಗ್ಗೆ ಹೇಳಿದ್ದು ʻಸ್ಟೋರಿ ಹೇಳುವಾಗ ಬೇರೆ ಕಡೆ ಹೋಗಿ ಬಿಡ್ತಾರೆʼ ಎಂದಿದ್ದಾರೆ. ಇದಕ್ಕೆ ಸುದೀಪ್‌ ನಕ್ಕು ಪ್ರತಿಕ್ರಿಯಿಸಿದ್ದಾರೆ.

ಇವತ್ತಿನ ಬಿಗ್‌ ಬಾಸ್‌ ಸಂಚಿಕೆಯಲ್ಲಿ “ಹರಿಕತೆʼ ಹೇಳಲು ಗೆಸ್ಟ್‌ವೊಬ್ಬರು ಬರಲಿದ್ದಾರೆ. ಈ ಕುರಿತ ಪ್ರೋಮೊದ ಬೆನ್ನಲ್ಲೆ ಇನ್ನೊಂದು ಪ್ರೋಮೊವನ್ನು ಬಿಗ್‌ ಬಾಸ್‌ ಹಂಚಿಕೊಂಡಿದೆ.

ಇದನ್ನೂ ಓದಿ | Bigg Boss Kannada | ಸೂಪರ್‌ ಸಂಡೇ ವಿತ್‌ ಸುದೀಪ್‌ ಜತೆ ಹರಿ ಕತೆ ಹೇಳಲು ಬರುತ್ತಿರೋರು ಯಾರು?

Exit mobile version