Site icon Vistara News

Bigg Boss Kannada | ಸೂಪರ್‌ ಪವರ್‌ ಗೇಮ್‌ನಲ್ಲಿ ಸ್ಪರ್ಧಿಗಳ ಹಣಾಹಣಿ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) 39ನೇ ದಿನ ಕ್ಯಾಪ್ಟನ್ಸಿ ಟಾಸ್ಕ್‌ಗಳು ಮುಂದುವರಿದಿದ್ದು, ಟಾಸ್ಕ್‌ನಲ್ಲಿ ಸಾನ್ಯ ಮತ್ತು ರೂಪೇಶ್‌ ರಾಜಣ್ಣ ಸೂಪರ್‌ ಪವರ್‌ ಅನ್ನು ಪಡೆದಿದ್ದಾರೆ. ಈ ವಾರ ಸ್ಪರ್ಧಿಗಳ ಆಯ್ಕೆಯಂತೆ ಅವರ ಎದುರಾಳಿ ಜತೆ ಆಡಬೇಕು. ಇದರ ಅನುಸಾರ ಪ್ರತಿ ಬಾರಿ ಬಿಗ್‌ ಬಾಸ್‌ ಅಲರ್ಟ್‌ ಸೌಂಡ್‌ ಕೊಟ್ಟಾಗ, ಸದಸ್ಯರು ಬಜರ್‌ ಒತ್ತಬೇಕು. ಯಾರು ಮೊದಲು ಬಜರ್‌ ಒತ್ತುತ್ತಾರೋ ಅವರು ತನ್ನ ಪ್ರತಿ ಸ್ಪರ್ಧಿಗಳನ್ನು ಆರಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ. ಟಾಸ್ಕ್‌ನಲ್ಲಿ ಗೆದ್ದ ಸದಸ್ಯ ವಿಶೇಷ ಪವರ್‌ ಪಡೆಯುತ್ತಾನೆ. ಅತಿ ಹೆಚ್ಚು ಬಾರಿ ಬಜರ್‌ ಒತ್ತುವ ಸದಸ್ಯ ಮುಂದಿನ ಬಾರಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ.

೩೯ನೇ ದಿನ ಮೊದಲ ಸುತ್ತಿನಲ್ಲಿ ರೂಪೇಶ್‌ ರಾಜಣ್ಣ ಅವರು ಬಜರ್‌ ಒತ್ತಿದ್ದು, ಆಟಕ್ಕೆ ಮೊದಲ ಅವಕಾಶ ಪಡೆದರು. ʻಜಾಲಾ ಮುಖಿʼ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಆಟದ ನಿಯಮದಂತೆ ರಾಕೆಟ್‌ ಅನ್ನು ತಮ್ಮ ಮುಂದೆ ಇರುವ ನೆಟ್‌ಗೆ ಸಿಕ್ಕಿಕೊಳ್ಳುವಂತೆ ಹೊಡೆಯಬೇಕು. ಈ ಟಾಸ್ಕ್‌ನಲ್ಲಿ ರೂಪೇಶ್‌ ರಾಜಣ್ಣ ಅವರು ದಿವ್ಯಾ ಉರುಡುಗ ಪ್ರತಿಸ್ಪರ್ಧಿಯಾಗಿ ಸ್ವೀಕರಿಸಿದರು. ಈ ಟಾಸ್ಕ್‌ನಲ್ಲಿ ರೂಪೇಶ್‌ ರಾಜಣ್ಣ ವಿಜೇತರಾದರು. ಬಳಿಕ ಸ್ಪರ್ಧಿಗಳೊಂದಿಗೆ ತಮ್ಮ ಬಗ್ಗೆ ಏನಾದರೂ ಪ್ರಶ್ನೆ ಕೇಳಬಹುದೆಂಬ ಸೂಪರ್‌ ಪವರ್‌ ಪಡೆದರು. ಮನೆಯವರಲ್ಲಿ ತಮ್ಮ ಆಟದ ಬಗ್ಗೆ ಅಭಿಪ್ರಾಯ ಕೇಳಿಕೊಂಡರು.

ಇದನ್ನೂ ಓದಿ | Bigg Boss Kannada | ದಿವ್ಯಾ-ಅರವಿಂದ್‌ ಮದುವೆ ಆದ್ರೆ ಡಿವೋರ್ಸ್‌ ಗ್ಯಾರಂಟಿ : ಭವಿಷ್ಯ ನುಡಿದ ಗುರೂಜಿ

ಎರಡನೇ ಸುತ್ತಿನಲ್ಲಿ ರೂಪೇಶ್‌ ಶೆಟ್ಟಿ ಅವರು ಬಜರ್‌ ಮೊದಲು ಒತ್ತಿದ್ದು ಸಾನ್ಯ ಜತೆ ಆಡಿದರು. ರೂಪೇಶ್‌ ಶೆಟ್ಟಿ ಮತ್ತು ಸಾನ್ಯ ಅವರಿಗೆ ʻಲಾಸ್ಟಿಕ್‌ ಮುಖʼ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದು, ಆಡುವ ಸದಸ್ಯ ತಮ್ಮ ಕಣ್ಣು, ಮೂಗಿನ ಮೇಲೆ ರಬ್ಬರ್‌ ಬ್ಯಾಂಡ್‌ ಹಾಕಿಕೊಳ್ಳಬೇಕು. ಮುಖವನ್ನು ಕಿವುಚುತ್ತ ರಬ್ಬರ್‌ ಬ್ಯಾಂಡ್‌ ಕತ್ತಿನ ತನಕ ತರಬೇಕು. ಈ ಟಾಸ್ಕ್‌ ಸಾನ್ಯ ಗೆದ್ದರು. ಬಿಗ್‌ ಬಾಸ್‌ ನೀಡಿದ ಸೂಪರ್‌ ಪವರ್‌ನಲ್ಲಿ ಮನೆಯ ಸದಸ್ಯರ ಪೈಕಿ ಒಬ್ಬರನ್ನು ಎರಡನೇ ವಾರಕ್ಕೆ ನೇರವಾಗಿ ನಾಮಿನೇಟ್‌ ಮಾಡಬೇಕಿತ್ತು. ಪ್ರಶಾಂತ್‌ ಸಂಬರಗಿ ಅವರನ್ನು ಸಾನ್ಯ ನೇರವಾಗಿ ನಾಮಿನೇಟ್‌ ಮಾಡಿದರು.

ಇದನ್ನೂ ಓದಿ |Bigg Boss Kannada | ಆಟದಲ್ಲಿ ಫೇವರ್ ಗಲಾಟೆ: ಮನೆ ಬಿಟ್ಟು ಹೊರಟ ರೂಪೇಶ್ ರಾಜಣ್ಣ?

Exit mobile version