Site icon Vistara News

Bigg Boss Kannada | ಮನೆಯ ಕ್ಯಾಪ್ಟನ್‌ ರೂಮ್‌ ಪಿಕ್ನಿಕ್‌ ಸ್ಪಾಟ್‌ ಅಲ್ಲ: ರೂಪೇಶ್‌, ಸಾನ್ಯ, ಗುರೂಜಿಗೆ ಕಿಚ್ಚ ಎಚ್ಚರಿಕೆ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಮೂರನೇ ವಾರ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಸ್ಪರ್ಧಿಗಳೊಂದಿಗೆ ಮಾತು ಕತೆ ನಡೆಸಿದ್ದಾರೆ. ಹಾಗೇ ಮೂವರು ಸ್ಪರ್ಧಿಗಳು ಸೇಫ್‌ ಆಗಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅದೇ ರೀತಿ ಬಿಗ್‌ ಬಾಸ್‌ ಕ್ಯಾಪ್ಟನ್‌ ರೂಮ್‌ ಪಿಕ್‌ನಿಕ್‌ ಸ್ಪಾಟ್‌ ಅಲ್ಲ ಎಂದು ರೂಪೇಶ್‌ ಶೆಟ್ಟಿ, ಸಾನ್ಯ ಮತ್ತು ಆರ್ಯವರ್ಧನ್‌ಗೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ.

ಕಿಚ್ಚ ಸುದೀಪ್‌ ಮಾತು ಶುರು ಮಾಡಿ ʻ ರೂಪೇಶ್‌, ಸಾನ್ಯ ಮತ್ತು ಆರ್ಯವರ್ಧನ್‌ ಕ್ಯಾಪ್ಟನ್‌ ಬೆಡ್‌ ಮೇಲೆ ಪಿಕ್ನಿಕ್ ಮಾಡುತ್ತೀರಿ. ನಾನು ಇಷ್ಟುತ್ತೂ ಕ್ಯಾಪ್ಟನ್ಸಿ ಬಗ್ಗೆ ತೂಕವಿರುವುದರ ಬಗ್ಗೆ ಮಾತಾಡಲಾ? ಅಥವಾ ಕ್ಯಾಪ್ಟನ್ಸಿ ರೂಮ್‌ಗೆ ನೀವು ಮೂವರು ಮಾಡಿದ ಬಿಹೇವ್‌ ರೀತಿಗೆ ರೂಮಿಗೆ ತೂಕ ಇಲ್ಲವಾ ಎಂದು ಮಾತಾಡ್ಲಾ ಎಂಬುದು ಅರ್ಥ ಆಗ್ತಿಲ್ಲ ಎಂದರು. ಆರ್ಯವರ್ಧನ್‌ಗೆ ಕಿಚ್ಚ ಮಾತನಾಡಿ ʻʻನೀವು ಒದ್ದಾಡಿ ಕ್ಯಾಪ್ಟನ್‌ಶಿಪ್‌ ತೆಗೆದುಕೊಂಡಿರುವಂತದ್ದು. ಆ ಸ್ಥಾನವನ್ನು ನಂತರದ ದಿನಗಳಲ್ಲಿ ಕಡಿಮೆ ಮಾಡಬೇಡಿ ಎಂದಿದ್ದಾರೆ. ಆರ್ಯವರ್ಧನ್‌ ಪ್ರತಿಕ್ರಿಯೆ ನೀಡಿ ʻʻನಾನು ಚೆನ್ನಾಗಿ ಬಾತ್‌ರೂಮ್‌ ಕ್ಲೀನ್‌ ಮಾಡಿದ್ದೇನೆʼʼಎಂದು ಹೇಳಿದರು. ಸುದೀಪ್‌ ಈ ಬಗ್ಗೆ ಮಾತನಾಡಿ ʻʻಅದರ ಬಗ್ಗೆ ನಾನು ಹೇಳುತ್ತಿಲ್ಲ. ಅದಕ್ಕೆ ಅಭಿನಂದನೆ. ನೀವು ತಿದ್ದಿಕೊಳ್ಳಬೇಡಿ, ತಿದ್ದಿಕೊಂಡಿದ್ದೀರಿʼʼ. ಎಂದರು.

Bigg Boss Kannada

ಇದನ್ನೂ ಓದಿ | Bigg Boss Kannada | ಕನ್ನಡ ಕಲಿಸೋಣ, ಕಲಿಸಿದರೆ ಮಾತ್ರ ಭಾಷೆಯ ಅಸ್ತಿತ್ವ ಎಂದ ಅರುಣ್‌ ಸಾಗರ್‌

ರೂಮ್‌ಗೆ ಗೌರವ ಇದೆ, ಪಿಕ್ನಿಕ್ ಸ್ಪಾಟ್‌ ಅಲ್ಲ!
ರೂಪೇಶ್‌ ಮತ್ತು ಸಾನ್ಯಗೆ ಸುದೀಪ್‌ ಮಾತನಾಡಿ ʻʻಆ ರೂಮ್‌ಗೆ ಒಂದು ಗೌರವವಿದೆ. ಅದು ಪಿಕ್ನಿಕ್ ಸ್ಪಾಟ್‌ ಅಲ್ಲ. ಒಂಬತ್ತನೇ ಸೀಸನ್‌ಗೆ ಬಂದಿದ್ದೇವೆ. ಇಷ್ಟ ಪಟ್ಟಿದ್ದಾರೆ. ಫ್ರೆಂಡ್ಸ್‌ ಆಗಿದ್ದಾರೆ. ಒಳಗಡೆ ಹೇಗೆ ಇದ್ದರೋ ಹಾಗೇ ಹೊರಗಡೆ ಹೋಗಿ ಮೇಂಟೇನ್‌ ಮಾಡಿದ್ದಾರೆ. ಅದೂ ಕೂಡ ದೊಡ್ಡ ಡಿಗ್ನಿಟಿಯೊಂದಿಗೆ ಮನೆಯಿಂದ ಹೊರಗಡೆ ಬಂದ ನಂತರ ಮದುವೆ ಕೂಡ ಆಗಿದ್ದಾರೆ. ಆದರೆ ನಾವು ಎಲ್ಲಿ ಇದ್ದೇವೆ? ಹೇಗೆ ಕಾಣಿಸುತ್ತಿದ್ದೇವೆ? ಹಗ್‌ ಪ್ರೊಬ್ಲಮ್‌ ಅಲ್ಲ ಸರ್‌. ಆದರೆ ಬಿಹೇವಿಯರ್‌ ಅನ್ನೋದು ಪ್ರಾಬ್ಲಮ್‌. ಇದುವರೆಗೂ ಯಾವತ್ತೂ ಎಲ್ಲರೂ ಮಲಗುವ ಹೊತ್ತು, ತಾವೆಲ್ಲರೂ ಮಲಗಿದಾಗ ತಬ್ಬಿಕೊಳ್ಳುವುದಾಗಲಿ, ಏನೇ ಇದ್ದರೂ ನಾವು ಇಷ್ಯೂ ಎಂದು ಹೇಳಿಲ್ಲ. ಆದರೆ ಕ್ಯಾಪ್ಟನ್‌ ರೂಮ್‌ನಲ್ಲಿ ಆದ ಘಟನೆ. ಸ್ವೀಕಾರ ಮಾಡಲು ಸಾಧ್ಯವಿಲ್ಲ. ಒಂದು ಸಲ ಒಕೆ, ಎರಡೂ ಸಲ ಒಕೆ, ಹೋಗ್ತಾ ಹೋಗ್ತಾ ಇದೆಲ್ಲವೂ ಆಗುತ್ತ ಇದ್ದರೆ ಬಿಗ್‌ ಬಾಸ್‌ ಮನೆ ಅದಕ್ಕೆ ಅಲ್ಲ. ಇಷ್ಟು ಸೀಸನ್‌ ಅಲ್ಲಿ ಎಷ್ಟೋ ರಿಲೇಶನ್‌ಶಿಪ್‌ ನೋಡಿದ್ದೇವೆ, ತಮಾಷೆ ಮಾಡಿದ್ದೇವೆ.ಎಲ್ಲವೂ ಒಕೆ, ಬಾಡಿ ಲಾಂಗ್ವೇಜ್‌ ಒಕೆ ಇತ್ತು, ಗೌರವ ಇತ್ತು, ಡಿಗ್‌ನಿಟಿ ಇತ್ತು. ಎಲ್ಲ ಇತ್ತು ನಮಗೂ ಒಕೆ ಇತ್ತುʼʼಎಂದರು .

Bigg Boss Kannada

ತುಂಬ ಕಫರ್ಟ್‌ ಜೋನ್‌ ಹೀಗೆ ಮಾಡಿತು
ಸಾನ್ಯ ಮಾತನಾಡಿ ʻʻತುಂಬ ಕಫರ್ಟ್‌ಜೋನ್‌ ಅಲ್ಲಿ ಇದ್ದಿದ್ದಕ್ಕೆ ಈ ಥರ ಘಟನೆ ಸಂಭವಿಸಿದೆ. ನಾನು ಒಪ್ಪುತ್ತೇನೆ. ಆ ರೂಮ್‌ ಇರುವ ಗೌರವ ನಮ್ಮ ಬಿಹೇವಿಯರ್‌ ಇಂದ ಈ ತರ ಆಗಿದೆ ನಾನು ಸರಿ ಆಗಿರುತ್ತೇನೆ,ʼʼಎಂದಿದ್ದಾರೆ. ರೂಪೇಶ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻನಾನು ಯಾವಾಗ್ಲೂ ಪ್ಯೂರ್‌ ಲವ್‌ ಬಗ್ಗೆ ಮಾತಾಡೋನು, ಇಂಟೆನ್ಶಲಿ ನಾವು ಮಾಡಿಲ್ಲ.ʼʼ ಎಂದರು. ಅದಕ್ಕೆ ಸುದೀಪ್‌ ಮಾತನಾಡಿ ʻʻಇಲ್ಲಿ ನಾವು ಇನ್‌ಟೆನ್ಷಲಿ ಮಾತಾಡ್ತಾ ಇದ್ದೇವಾʼʼ ಎಂದು ಪ್ರಶ್ನಿಸಿದರು. ಇದು ಕೇವಲ ನನ್ನ ಮಾತಲ್ಲಿ ಮಾತ್ರ ಬರುತ್ತಿಲ್ಲ. ಇದು ಇಡೀ ಕನ್ನಡ ಜನತೆ ನೋಡಿ ಹೇಳಿದಕ್ಕೆ ನಿಮ್ಮ ಮುಂದೆ ಇಟ್ಟಿದ್ದೇವೆʼʼಎಂದರು.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌-ರೂಪೇಶ್‌ ಮಾತಿನ ಚಕಮಕಿ: ಅವರವರ ಭಾವಕ್ಕೆ ಅವರವರ ವಾದ, ಯಾವುದು ಸರಿ?

Exit mobile version