Site icon Vistara News

Bigg Boss Kannada | ನಾಲ್ಕನೇ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ: ಏನಿದು ಪಟ ಪಟ ಕ್ಯಾಪ್ಟನ್ ಚಿತ್ರಪಟ?

Bigg Boss Kannada

ಬೆಂಗಳೂರು : ಬಿಗ್‌ ಬಾ ಸೀಸನ್‌ 9ರಲ್ಲಿ (Bigg Boss Kannada) ನಾಲ್ಕನೇ ವಾರ ಎಂಟು ಸದಸ್ಯರು ನಾಮಿನೇಟ್‌ ಆಗಿದ್ದಾರೆ. ಈ ವಾರ ದೀಪಿಕಾ ದಾಸ್‌ ಕ್ಯಾಪ್ಟನ್‌ ಆಗಿದ್ದಾರೆ. ಕ್ಯಾಪ್ಟನ್‌ ಆದ ಕಾರಣ ನೇರವಾಗಿ ಸಾನ್ಯರನ್ನು ನಾಮಿನೇಟ್‌ ಮಾಡಿದರೆ, ದರ್ಶ್‌ ಹೋಗುವ ಮುನ್ನ ರೂಪೇಶ್‌ ಶೆಟ್ಟಿ ಅವರನ್ನು ನಾಮಿನೇಟ್‌ ಮಾಡಿದ್ದರು.

ಮೊದಲಿಗೆ ನೇಹಾ ಮಯೂರಿ ಹಾಗೂ ಕಾವ್ಯಶ್ರೀ ಅವರನ್ನು ನಾಮಿನೇಟ್‌ ಮಾಡಿದ್ದಾರೆ. ರೂಪೇಶ್‌ ರಾಜಣ್ಣ ಮಯೂರಿ ಮತ್ತು ಕಾವ್ಯಶ್ರೀ, ಸಾನ್ಯ ಅವರು ಆರ್ಯವರ್ಧನ್‌ ಮತ್ತು ನೇಹಾ, ಅರುಣ್‌ ಸಾಗರ್‌-ಆರ್ಯವರ್ಧನ್‌, ನೇಹಾ, ಮಯೂರಿ-ಆರ್ಯವರ್ಧನ್‌, ರೂಪೇಶ್‌, ಆರ್ಯವರ್ಧನ್‌-ಅರುಣ್‌ ಸಾಗರ್‌, ಸಾನ್ಯ, ಅಮೂಲ್ಯ-ಆರ್ಯವರ್ಧನ್‌, ಕಾವ್ಯ, ರೂಪೇಶ್‌ ಶೆಟ್ಟಿ-ಮಯೂರಿ, ಪ್ರಶಾಂತ್‌, ಪ್ರಶಾಂತ್‌-ದಿವ್ಯಾ, ರಾಕೇಶ್‌, ಕಾವ್ಯಶ್ರೀ-ಆರ್ಯವರ್ಧನ್‌, ಅಮೂಲ್ಯ, ಅನುಪಮಾ-ಆರ್ಯವರ್ಧನ್‌, ಕಾವ್ಯ, ವಿನೋದ್‌-ಆರ್ಯವರ್ಧನ್‌-ದಿವ್ಯಾ, ರಾಕೇಶ್‌-ಆರ್ಯವರ್ಧನ್‌-ಪ್ರಶಾಂತ್‌ ಸಂಬರಗಿ ಅವರನ್ನು ನಾಮಿನೇಟ್‌ ಮಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ವಯಸ್ಸಿಗೆ ಮರ್ಯಾದೆ ಕೊಡುತ್ತಿದ್ದೇನೆ , ಮಾತಲ್ಲಿ ನಿಗಾ ಇರಲಿ: ಗುರೂಜಿಗೆ ಕಿಚ್ಚ ಎಚ್ಚರಿಕೆ!

ಈ ವಾರದ ಟಾಸ್ಕ್‌ಗಳಿಗಾಗಿ ಏಳು ಸದಸ್ಯರಿರುವ ಎರಡು ತಂಡಗಳ ಅಗತ್ಯವಿದ್ದಿದ್ದು, ತಂಡಗಳ ರಚನೆಯ ಚಟುವಟಿಕೆಯನ್ನು ಬಿಗ್‌ ಬಾಸ್‌ ನೀಡಿದ್ದರು. ಅದರ ಅನುಸಾರ ಸದಸ್ಯರು ಯಾವ ನಾಯಕರ ಭಾವಚಿತ್ರವನ್ನು ಪೂರ್ಣಗೊಳಿಸುತ್ತಾರೋ, ಅವರ ತಂಡಕ್ಕೆ ಸೇರ್ಪಡೆಯಾಗುತ್ತಾರೆ. ಇದರಲ್ಲಿ ಎರಡು ತಂಡಗಳು ರಚನೆಯಾಗಿದ್ದು, ಈ ಮೊದಲೇ ಕ್ಯಾಪ್ಟನ್‌ ದೀಪಿಕಾ ಎರಡೂ ತಂಡಗಳ ಕ್ಯಾಪ್ಟನ್‌ ಆಯ್ಕೆ ಮಾಡಿದ್ದರು.

ಇದರ ಅನುಸಾರ ಪ್ರಶಾಂತ್‌ ʻʻಧಮ್‌ ಪವರ್‌ʼʼ ಎಂಬ ಟೀಮ್‌ ಹೆಸರನ್ನು ಹೊಂದಿದ್ದು, ಇದರಲ್ಲಿ ಸಾನ್ಯ, ಮಯೂರಿ, ವಿನೋದ್‌, ಅರುಣ್‌ ಸಾಗರ್‌, ರಾಕೇಶ್‌, ಅನುಪಮಾ ಆಯ್ಕೆ ಆದರು. ಇನ್ನೊಂದು ತಂಡದಲ್ಲಿ ರೂಪೇಶ್‌ ರಾಜಣ್ಣ ನಾಯಕತ್ವದಲ್ಲಿ ʻಕಾಮನಬಿಲ್ಲುʼ ಎಂದು ತಂಡದ ಹೆಸರಾಗಿದ್ದು ʻʻರೂಪೇಶ್‌ ಶೆಟ್ಟಿ, ದಿವ್ಯಾ ಉರುಡುಗ, ಅಮೂಲ್ಯ, ನೇಹಾ, ಆರ್ಯವರ್ಧನ್‌ ಮತ್ತು ಕಾವ್ಯಶ್ರೀ ಆಯ್ಕೆ ಆದರು.

ಪಜಲ್‌ ಗೇಮ್‌ನಲ್ಲಿ ಆರ್ಯವರ್ಧನ್‌ ಮತ್ತು ಕಾವ್ಯಶ್ರೀ ಕಂಪ್ಲೀಟ್‌ ಮಾಡದೇ ಇರುವ ಕಾರಣ ರೂಪೇಶ್‌ ರಾಜಣ್ಣ ಟೀಮ್‌ಗೆ ಹೋಗಬೇಕಾಗಿ ಬಂದಿತ್ತು.

ಇದನ್ನೂ ಓದಿ | Bigg Boss Kannada | ಈ ವಾರ ಅರುಣ್‌ ಸಾಗರ್‌ಗೆ ಕಿಚ್ಚನ ಚಪ್ಪಾಳೆ!

Exit mobile version