ಬೆಂಗಳೂರು: ಬಿಗ್ ಬಾಸ್ ಸೀಸನ್ 9ರ (Bigg Boss Kannada) ಐದನೇ ವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‌ಗಳನ್ನು ನೀಡಿದ್ದಾರೆ. ಲಕ್ಷುರಿ ಬಜೆಟ್ ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಮೂಡಿತ್ತು. ಪದ ಜೋಡಿಸಿ ಪದಗಳನ್ನು ಸರಿಯಾಗಿ ಜೋಡಿಸಿದಾಗ ಒಂದು ಸಣ್ಣ ಕಥೆ ರೂಪಗೊಳಿಸುವ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಒಗ್ಗಟ್ಟಾಗಿ ನಿಂತು ನಿಭಾಯಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದರು. ಇದರ ಅನುಸಾರ ಗಾರ್ಡನ್ ಏರಿಯಾದಲ್ಲಿ ಒಂದು ಫೋನ್ ಇಟ್ಟಿದ್ದರು. ಕಾಲ ಕಾಲಕ್ಕೆ ಪೋನ್ ಕರೆಯ ಮೂಲಕ ಬಿಗ್ ಬಾಸ್ ಸದಸ್ಯರಿಗೆ ಕೆಲವೊಂದು ಪದಗಳನ್ನು ಹೇಳುತ್ತಾರೆ. ಸದಸ್ಯರು ಆ ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಎಲ್ಲ ಪದಗಳನ್ನು ಸರಿಯಾಗಿ ಜೋಡಿಸಿದಾಗ ಒಂದು ಸಣ್ಣ ಕಥೆ ರೂಪುಗೊಳ್ಳುತ್ತದೆ. ಸದಸ್ಯರು ಬೋರ್ಡ್‌ನಲ್ಲಿ ಬರೆದು ಜೋಡಿಸಿ ಹೇಳಬೇಕು. ಆದರೆ ಸ್ಪರ್ಧಿಗಳು ಅರ್ಧ ಮಾತ್ರ ಮುಗಿಸಿದ್ದಾರೆ. ಟಾಸ್ಕ್ ಪೂರ್ಣಗೊಳಿಸಲು ಸ್ಪರ್ಧಿಗಳಿಗೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ | Bigg Boss Kannada | ಏಳು ಹಂತದಲ್ಲಿ ಆಟ ಆಡಿಸಿ, ಎಲಿಮಿನೇಷನ್ ಪ್ರಕ್ರಿಯೆ ಮಾಡಿದ ಬಿಗ್ ಬಾಸ್: ಇಲ್ಲಿವೆ ಫೋಟೊಗಳು!
ಟಾಸ್ಕ್ ಮುಗಿದ ನಂತರ ಅರುಣ್ ಸಾಗರ್ ಮಲಗುವ ವೇಳೆ ಪ್ರಶಾಂತ್ ಸಂಬರಗಿ ಹಾಗೂ ಆರ್ಯವರ್ಧನ್ ಮುಂದೆ ಚರ್ಚಿಸಿದ್ದಾರೆ. ಟಾಸ್ಕ್ ಕುರಿತು ಮಾತನಾಡಿ ʻʻಕಥೆ ಟಾಸ್ಕ್‌ನಲ್ಲಿ ನೋಡುವಾಗ ದಿವ್ಯಾ ಉರುಡುಗ ಮತ್ತು ಅನುಪಮಾಗೆ ತುಂಬಾ ತಾಳ್ಮೆ ಇದೆ ಅನ್ನಿಸಿತು. ಅಮೂಲ್ಯ ತುಂಬ ತಲೆಹರಟೆ ಮಾಡಲು ಹೋಗುವುದಿಲ್ಲʼʼಎಂದರು. ಇದಕ್ಕೆ ಆರ್ಯವರ್ಧನ್ ಪ್ರತಿಕ್ರಿಯೆ ನೀಡಿ ʻʻಈ ಮನೆಯಲ್ಲಿ ನಿಜವಾಗಿಯೂ ಪ್ರಬುದ್ಧಳಾಗಿ ಯೋಚನೆ ಮಾಡುವುದು ಅಮೂಲ್ಯ ಒಬ್ಬಳೆ. ದಿವ್ಯಾ ಎಲ್ಲದಕ್ಕೂ ಮೊದಲು ಬಂದು ನಿಲ್ಲುತ್ತಾಳೆ, ಆ ಕೆಲಸ ಮಾಡುತ್ತಾಳೋ , ಬಿಡುತ್ತಾಳೋ, ಆದರೆ ಅದು ಓವರ್ ಎಂದು ಅನ್ನಿಸುತ್ತೆ. ಗೊತ್ತಿದ್ದರೆ ಬರೆಯಬೇಕು, ಇಲ್ಲ ಸುಮ್ಮನಿದ್ದು ಬಿಡಬೇಕುʼʼಎಂದರು.
ಇದನ್ನೂ ಓದಿ | Bigg Boss Kannada | ಜೋಕರ್ ವೇಷ ಧರಿಸಿ ಅರುಣ್ ಸಾಗರ್ ಜನುಮದಿನ ಆಚರಿಸಿದ ಮನೆಮಂದಿ!