ಬೆಂಗಳೂರು : ಬಿಗ್ ಬಾಸ್ ಸಿಸನ್ 9 (Bigg Boss Kannada) ವಾರದ ಕತೆ ಕಿಚ್ಚನ ಜತೆ ವೀಕೆಂಡ್ ಪಂಚಾಯಿತಿಯಲ್ಲಿ ಮೂರು ಸ್ಪರ್ಧಿಗಳು ಸೇಫ್ ಆಗಿರುವುದು ರಿವೀಲ್ ಆಗಿದೆ. ಈ ವಾರ 18 ಸ್ಪರ್ಧಿಗಳಲ್ಲಿ 12 ಸ್ಪರ್ಧಿಗಳು ನಾಮಿನೇಟ್ ಅಗಿದ್ದರು. ಅದರಲ್ಲಿ ದಿವ್ಯಾ ಉರುಡುಗ, ವಿನೋದ್ ಗೊಬ್ಬರಗಾಲ ಹಾಗೂ ಅರುಣ್ ಸಾಗರ್ ಸೇಫ್ ಆಗಿದ್ದಾರೆ. ಉಳಿದ ಸ್ಪರ್ಧಿಗಳ ಬಗ್ಗೆ ಭಾನುವಾರದ ವೀಕೆಂಡ್ ಪಂಚಾಯಿತಿಯಲ್ಲಿ ತಿಳಿಯಲಿದೆ.
ಪಂಚಾಯಿತಿಯಲ್ಲಿ ಸ್ಪರ್ಧಿಗಳ ಟಾಸ್ಕ್ ವಿಚಾರಕ್ಕೆ ಕಿಚ್ಚ್ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅರುಣ್ ಸಾಗರ್ ಮನೆಯಲ್ಲಿ ಟಾಸ್ಕ್‌ಗಳನ್ನು ನಿಭಾಯಿಸದೇ, ವಿಧೂಷಕನೆಂಬ ಪಟ್ಟವನ್ನು ಪಡೆದಿದ್ದರು. ಅ ವಿಚಾರಕ್ಕೆ ಅರುಣ್ ಸಾಗರ್‌ಗೆ ಸುದೀಪ್ ಮನವರಿಕೆ ಮಾಡಿದ್ದಾರೆ. ಅರುಣ್ ಸಾಗರ್‌ಗೆ ಕಿಚ್ಚ ಸುದೀಪ್ ಮಾತನಾಡಿ ʻʻಪ್ರತಿ ವಿಚಾರವನ್ನು ಸುಲಭವಾಗಿ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಎಂಟರ್‌ಟೇನರ್ ಮಾತ್ರ ಮುಖ್ಯ ಅಲ್ಲ. . ನಾಯಕ ಆದವನು ಜೋಕರ್ ಆಗಬಾರದು. ಟಾಸ್ಕ್ ಬಂದರೆ ಪ್ರಯತ್ನ ಪಟ್ಟು ಆಡಬೇಕು. ಅವಕಾಶವನ್ನು ಎಲ್ಲರೂ ಕಾಯುತ್ತಿರುತ್ತಾರೆ. ನೀವು ನವಾಜ್‌ಗೆ ತಿದ್ದಲು ಇಲ್ಲಿ ಬಂದಿಲ್ಲ. ನೀವು ಸೀನಿಯರ್ ಕೂಡ ಆಗಿದ್ದೀರಿʼ.ಎಂದು ಹೇಳಿದ್ದಾರೆ.
ಇದನ್ನೂ ಓದಿ | Bigg Boss Kannada | ಮನೆ ಸದಸ್ಯರಿಗೆ ಆರ್ಯವರ್ಧನ್ ಟಿಪ್ಸ್ ಕೊಡ್ತಾರಂತೆ; ಈ ವಾರ ಕಿಚ್ಚನ ಲುಕ್ ಹೀಗಿದೆ!
ಇದಕ್ಕೆ ಅರುಣ್ ಸಾಗರ್ ಕಾರಣವನ್ನು ತಿಳಿಸಿದ್ದಾರೆ. ʻʻನಾನು ಟಾಸ್ಕ್ ಆಡುವಾಗ ಗುರೂಜಿ ನವಾಜ್‌ಗೆ ಕೋಪ ಬರಿಸುವಂತೆ ಮಾಡಿದರು. ಆಗ ನವಾಜ್ ಎಲ್ಲಿ ಅನಾಹುತ ಮಾಡುತ್ತಾನೋ ಎಂದು ತಿಳಿದು ಜೋಕರ್ ಆದೆʼʼ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ʻʻಹೊರಗಡೆ ಕೂತವರಿಗೆ ಇದು ಅರ್ಥವಾಗಲ್ಲ. ಅವನನ್ನು ನೀವು ಸರಿ ಮಾಡಿರುವುದು ಸಂತಸವೇ. ಆದರೆ ಅದು ಮುಖ್ಯವಲ್ಲ. ಮುಂದೆ ಇದನ್ನು ಅರ್ಥೈಸಿಕೊಳ್ಳಿʼʼ ಎಂದಿದ್ದಾರೆ.
ಅದೇ ರೀತಿ ಕಿಚ್ಚ ಸುದೀಪ್ ನವಾಜ್‌ಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ನವಾಜ್‌ಗೆ ʻʻಇಲ್ಲಿ ನೀನು ಯಾರಿಗೂ ಹೊಡೆಯಲು ಬಂದಿಲ್ಲ. ನೀವು ಯಾರಿಗಾದರೂ ಹೊಡೆದದ್ದೆ ಆದರೆ ಪರಿಣಾಮ ಏನಾಗುತ್ತದೆ? ಮನೆ ಒಳಗಡೆ ಮಾತ್ರವಲ್ಲ , ಹೊರಗಡೆ ಬಗ್ಗೆ ಅರಿವಿರಲಿ. ನಿಮ್ಮ ಕೋಪ ಯಾರಿಗೂ ತೊಂದರೆ ಕೊಡಬಾರದುʼʼ ಎಂದು ಹೇಳಿದರು. ಅದಕ್ಕೆ ನವಾಜ್ ಪ್ರತಿಕ್ರಿಯೆ ನೀಡಿ ʻʻನನ್ನ ತಪ್ಪು ಅರಿವಾಗಿದೆ. ತಿದ್ದಿಕೊಳ್ಳಲು ಪ್ರಯತ್ನಿಸುತ್ತಿರುವೆʼ ಎಂದಿದ್ದಾರೆ.
ಇದನ್ನೂ ಓದಿ | Bigg Boss Kannada | ವಾರದ ಕತೆ ಕಿಚ್ಚನ ಜತೆ; ಮೊದಲನೇ ವಾರ ಮನೆಯಿಂದ ಯಾರು ಔಟ್?