ಬೆಂಗಳೂರು : ಬಿಗ್ ಬಾಸ್ ಸೀಸನ್ 9ರ (Bigg Boss Kannada) ಆರನೇ ವಾರ ಪ್ರಶಾಂತ್ ಸಂಬರಗಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವಾರದ ಕಳಪೆಯನ್ನು ಅನುಪಮಾ ಅವರಿಗೆ ಸದಸ್ಯರು ನೀಡಿದ್ದಾರೆ. ರೂಪೇಶ್ ರಾಜಣ್ಣ ಅವರು ಅತ್ಯುತ್ತಮ ಪ್ರದರ್ಶನಕಾರರಾಗಿ ಹೊರಹೊಮ್ಮಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿದೆ. ಈ ಟಾಸ್ಕ್ ಅನುಸಾರ ಪ್ರತಿ ಬಾರಿ ಬಿಗ್ ಬಾಸ್ ಅಲರ್ಟ್ ಸೌಂಡ್ ಕೊಟ್ಟಾಗ, ಸದಸ್ಯರು ಬಝರ್ ಒತ್ತಬೇಕು. ಯಾರು ಮೊದಲು ಬಝರ್ ಒತ್ತುತ್ತಾರೋ ಅವರು ತನ್ನ ಪ್ರತಿ ಸ್ಪರ್ಧಿಗಳನ್ನು ಆರಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ. ಟಾಸ್ಕ್‌ನಲ್ಲಿ ಗೆದ್ದ ಸದಸ್ಯ ವಿಶೇಷ ಪವರ್ ಪಡೆಯುತ್ತಾನೆ. ಅತಿ ಹೆಚ್ಚು ಬಾರಿ ಬಝರ್ ಒತ್ತುವ ಸದಸ್ಯ ಮುಂದಿನ ಬಾರಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ. 41ನೇ ದಿನ ಕ್ಯಾಪ್ಟನ್ಸಿ ಟಾಸ್ಕ್ ಕೊನೆಯ ದಿನವಾಗಿದ್ದು, ಪ್ರಶಾಂತ್ ಸಂಬರಗಿ ಮೊದಲಿಗೆ ಬಝರ್ ಒತ್ತಿದರು. ಪ್ರತಿ ಸ್ಪರ್ಧಿಯಾಗಿ ಅರುಣ್ ಸಾಗರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ʻʻಹೆಚ್ಚು ಕಮ್ಮಿʼʼಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದ್ದು, ಸ್ಪರ್ಧಿಗಳು ಬಿಗ್ ಬಾಸ್ ನೀಡಿರುವ ಸಂಖ್ಯೆಗಳ ಒಟ್ಟು ಮೊತ್ತವನ್ನು ಬಿಳಿ ಬೋರ್ಡ್‌ನಲ್ಲಿ ಬರೆಯಬೇಕು. ಅರುಣ್ ಸಾಗರ್ ಈ ಟಾಸ್ಕ್‌ನಲ್ಲಿ ಗೆದ್ದರು. ಅರುಣ್ ಸಾಗರ್ ಅವರು ಸೂಪರ್ ಪವರ್ ಪಡೆದ ಆಧಾರದ ಮೇರೆಗೆ ಪ್ರಶಾಂತ್ ಸಂಬರಗಿ ಅವರನ್ನು ಕ್ಯಾಪ್ಟನ್ಸಿ ಫೈನಲ್ ರೌಂಡ್ ಟಾಸ್ಕ್‌ಗೆ ಆಯ್ಕೆ ಮಾಡಿದ್ದಾರೆ.
ಬಿಗ್ ಬಾಸ್ ನಿಯಮಾನುಸಾರ ಈ ವಾರ ಅತಿ ಹೆಚ್ಚು ಬಝರ್ ಒತ್ತಿ ಯಶಸ್ವಿ ಆದ ಸ್ಪರ್ಧಿಗಳು ಪ್ರಶಾಂತ್ ಸಂಬರಗಿ , ರೂಪೇಶ್ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ಕೊನೆಯ ಟಾಸ್ಕ್ ನೀಡಿದ್ದು, ಆಡುವ ಪೈಕಿ ತಮ್ಮ ಆಯ್ಕೆಯ ಸ್ಟ್ಯಾಂಡಿನ ಎರಡು ಪೀಸ್‌ಗಳ ಮೇಲೆ ಕಣ್ಣಿನ ಆಕಾರದ 13 ಮರಗಳ ತುಂಡುಗಳನ್ನು ಜೋಡಿಸಿ, 5 ಸೆಕೆಂಡುಗಳ ಕಾಲ ಬೀಳಿಸದ ಹಾಗೆ ನಿಲ್ಲಿಸಬೇಕು.
ಇದನ್ನೂ ಓದಿ | Bigg Boss Kannada | ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೂಪರ್ ಪವರ್ ಆಗಿ ಆಡಿದ ವಿನೋದ ಗೊಬ್ಬರಗಾಲ!
ಮೊದಲ ಸುತ್ತಿನಲ್ಲಿ ಪ್ರಶಾಂತ್ ಮತ್ತು ರೂಪೇಶ್ ರಾಜಣ್ಣ ಆಟದ ಮಧ್ಯೆ ಟೈ ಆಯಿತು. ಈ ಕಾರಣದಿಂದಾಗಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಕುಳಿತಲ್ಲಿಯೇ ವೋಟ್ ಮಾಡಿ ಇಬ್ಬರ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಪ್ರಶಾಂತ್ ಸಂಬರಗಿ ಹೆಚ್ಚು ವೋಟ್ ಪಡೆದ ಕಾರಣ ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಟಾಸ್ಕ್ ಸರಿಯಾಗಿ ನಿಭಾಯಿಸಿಲ್ಲ ಅನುಪಮಾ
ಸದಸ್ಯರು ಅನುಪಮಾ ಅವರಿಗೆ ಕಳಪೆ ನೀಡಿದ್ದು, ಟಾಸ್ಕ್‌ನಲ್ಲಿ ಸರಿಯಾದ ಮುಂದಾಳತ್ವ ವಹಿಸಿಲ್ಲ ಎಂದು ಆರೋಪಿಸಿದ್ದಾರೆ. ರಾಕೇಶ್ ಅಡಿಗ ಅವರು ರೂಪೇಶ್ ರಾಜಣ್ಣ ಅವರಿಗೆ ಕಳಪೆ ನೀಡಿದ್ದು, ಅಮೂಲ್ಯ ಮತ್ತು ಸಾನ್ಯ ಅವರು ಕಳಪೆಯನ್ನು ಕಾವ್ಯಶ್ರೀಗೆ ಕೊಟ್ಟಿದ್ದಾರೆ. ಆದರೆ ಕೊನೆಯಲ್ಲಿ ಹೆಚ್ಚು ಕಳಪೆ ವೋಟ್ ಅನುಪಮಾ ಅವರಿಗೆ ಬಂದಿದ್ದರಿಂದ ಜೈಲು ಸೇರಿದ್ದಾರೆ.
ಇದನ್ನೂ ಓದಿ | Bigg Boss Kannada | ಕನ್ನಡ ಹೋರಾಟಗಾರರ ಕ್ಷಮೆ ಕೇಳಿ, ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ!