Site icon Vistara News

Bigg Boss Kannada | ಲಕ್ಷುರಿ ಬಜೆಟ್‍ನಲ್ಲಿ ಲಕ್ಷುರಿ ಜಗಳ: ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಇವರೇ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ(Bigg Boss Kannada ) ಐದನೇ ವಾರ 30ನೇ ದಿನ ಒಂಬತ್ತು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಲಕ್ಷುರಿ ಬಜೆಟ್‌ ಟಾಸ್ಕ್‌ ವೇಳೆ ಸ್ಪರ್ಧಿಗಳ ನಡುವೆ ಜಗಳ ಆಗಿದೆ. ಸಾನ್ಯ ಈ ವಾರ ಕ್ಯಾಪ್ಟನ್‌ ಆದ ಕಾರಣ ಲಕ್ಷುರಿ ಬಜೆಟ್‍ ಟಾಸ್ಕ್‌ ಮುಂದಾಳತ್ವ ವಹಿಸಿದ್ದರು.

ಈ ವಾರ ರೂಪೇಶ್‌ ಶೆಟ್ಟಿ, ದೀಪಿಕಾ ದಾಸ್‌, ನೇಹಾ ಗೌಡ, ರೂಪೇಶ್‌ ರಾಜಣ್ಣ, ಪ್ರಶಾಂತ್‌ ಸಂಬರಗಿ, ಅಮೂಲ್ಯ ಗೌಡ, ರಾಕೇಶ್‌ ಅಡಿಗ ಮತ್ತು ಕಾವ್ಯಶ್ರೀ ನಾಮಿನೇಟ್‌ ಆಗಿದ್ದಾರೆ. ಕ್ಯಾಪ್ಟನ್‌ ಸಾನ್ಯ ಅವರು ಆರ್ಯವರ್ಧನ್‌ ಗರೂಜಿ ಅವರನ್ನು ನೇರವಾಗಿ ನಾಮಿನೇಟ್‌ ಆಗಿದ್ದಾರೆ.

ಗಾರ್ಡ್‌ನ್‌ ಏರಿಯಾದಲ್ಲಿ ಬೋರ್ಡ್‌ ಮೇಲೆ ಲಕ್ಷುರಿ ಬಜೆಟ್‌ ಹೆಸರಿನ ಹಾಳೆಯನ್ನು ಅಂಟಿಸಲಾಗಿತ್ತು. ಸ್ಪರ್ಧಿಗಳು ಬಂದು ಬಂದು ತಮಗೆ ಬೇಕಾಗಿರುವ ವಸ್ತುಗಳಿಗೆ ಚೆಂಡಿನಿಂದ ಗುರಿಯಿಟ್ಟು ಹೊಡೆಯಬೇಕು. ಎಸೆದ ಚೆಂಡಿನಿಂದ ಹಾಳೆ ಹರಿದರೆ ಸೂಚಿಸಿದ ಹೆಸರಿನ ವಸ್ತು ದೊರೆಯುತ್ತದೆ. ಸಾನ್ಯ ಮೊದಲಿಗೆ ಆರು ಸ್ಪರ್ಧಿಗಳನ್ನು ಸ್ವತಃ ಅವರೇ ಆಯ್ಕೆ ಮಾಡಿದರು. ʻʻಇದೇ ತರಹ ಮನೆಯಲ್ಲಿ ಈ ಮುಂಚೆ ಟಾಸ್ಕ್‌ ನೋಡಿದ್ದರಿಂದ ಯಾರು ಚೆನ್ನಾಗಿ ನಿಭಾಯಿಸುತ್ತಾರೆ ಅವರನ್ನು ನಾನು ಆಯ್ಕೆʼʼ ಮಾಡುತ್ತೇನೆ ಎಂದು ಹೇಳಿಕೆ ನೀಡಿದರು.

ಇದನ್ನೂ ಓದಿ | Bigg Boss Kannada | ಜೋಕರ್‌ ವೇಷ ಧರಿಸಿ ಅರುಣ್‌ ಸಾಗರ್‌ ಜನುಮದಿನ ಆಚರಿಸಿದ ಮನೆಮಂದಿ!

ಅದರಲ್ಲಿ ಅನುಪಮಾ, ವಿನೋದ್‌, ಅಮೂಲ್ಯ, ಸಾನ್ಯ, ರೂಪೇಶ್‌ ರಾಜಣ್ಣ, ದೀಪಿಕಾ ದಾಸ್‌, ರಾಕೇಶ್‌, ನೇಹಾ, ಗುರೂಜಿ, ಅರುಣ್‌ ಸಾಗರ್‌, ಕಾವ್ಯ, ಪ್ರಶಾಂತ್‌ ಅವರನ್ನು ಆಯ್ಕೆ ಮಾಡಿದರು. ಟಾಸ್ಕ್‌ ನಡೆಯುವ ವೇಳೆ ಅರುಣ್‌ ಸಾಗರ್‌, ಆರ್ಯವರ್ಧನ್‌ ಹೊರತು ಪಡಿಸಿ ಯಾರೂ ಟಾರ್ಗೆಟ್‌ ರೀಚ್‌ ಮಾಡಿಲ್ಲ.

ಸಾನ್ಯರ ನಿರ್ಧಾರದ ಮೇರೆಗೆ ಮನೆಯಲ್ಲಿ ಕಾವ್ಯ, ನೇಹಾ ಹಾಗೂ ಅರುಣ್‌ ಸಾಗರ್‌ ಅಸಮಾಧಾನ ಹೊರಹಾಕಿದರು. ಟಾಸ್ಕ್‌ ನಡೆಯುವ ವೇಳೆ ಅರುಣ್‌ ಸಾಗರ್‌ ʻʻ1 ಕೆ.ಜಿ ಮಟನ್‌ ಮೂಸಬಹುದು, ಅಷ್ಟು ಎಲ್ಲರಿಗೂ ಸಾಕಾಗಲಿಕ್ಕಿಲ್ಲʼʼ ಎಂದು ಹೇಳಿದರು. ಅಮೂಲ್ಯ ಇದನ್ನು ನಮ್ಮ ಆರು ಜನಕ್ಕೆ ಬೇಕಂತಲೆ ಅರುಣ್‌ ಸಾಗರ್‌ ಅವರು ಟಾಂಟ್‌ ಹೊಡೆದಿದ್ದಾರೆಂದು ಅನುಪಮಾ ಮುಂದೆ ಹೇಳಿಕೊಂಡರು. ಕಿಚನ್‌ ರೂಮಿನಲ್ಲಿ ಮತ್ತೆ ಈ ಬಗ್ಗೆ ಅರುಣ್‌ ಸಾಗರ್‌ ಮುಂದೆಯೂ ಅಮೂಲ್ಯ ಪ್ರಸ್ತಾಪಿಸಿದ್ದಾರೆ.

ಅರುಣ್‌ ಸಾಗರ್‌ ಪ್ರತಿಕ್ರಿಯೆ ನೀಡಿ ʻʻನಾನು ಆ ಅರ್ಥದಲ್ಲಿ ಹೇಳಿಲ್ಲ, ಬೇಕಾದರೆ ಪ್ರಶಾಂತ್‌ ಸಂಬರಗಿ ಅಲ್ಲೇ ಇದ್ದ ಕೇಳಿʼʼ ಎಂದಿದ್ದಾರೆ. ಆದರೆ ಸಾನ್ಯ ಅವರು ʻʻಅರುಣ್ ಸಾಗರ್‌ ಅವರು ಟಾಂಟ್‌ ಮಾಡಿಯೇ ಹೇಳಿದ್ದಾರೆ. ನಾನು ಕೂಡ ಅಲ್ಲಿ ಇದ್ದೆʼʼ ಎಂದರು. ಕೊನೆಯಲ್ಲಿ ಕಾವ್ಯ ಮತ್ತು ನೇಹಾ ಅವರು ಸಾನ್ಯ ಮುಂದೆ, ʻʻನೀವು ಆಯ್ಕೆ ಮಾಡುವಾಗ ಕೆಲವರು ಚೆನ್ನಾಗಿ ಆಡುತ್ತಾರೆ, ಇನ್ನೂ ಕೆಲವರು ಚೆನ್ನಾಗಿ ಆಡುವುದಿಲ್ಲ, ಸ್ವಲ್ಪ ವೀಕ್‌ ಇದ್ದವರು ಕೊನೆಯಲ್ಲಿ ಆಡಲಿ ಎಂಬರ್ಥದಲ್ಲಿ ಹೇಳಿದ್ದು ಬೇಸರ ತಂದಿತುʼʼ ಎಂದರು.

ಸಾನ್ಯರ ಈ ನಿರ್ಧಾರದ ಬಗ್ಗೆ ಗಾರ್ಡನ್‌ ಏರಿಯಾದಲ್ಲಿ ಅರುಣ್‌ ಸಾಗರ್‌, ದೀಪಿಕಾ, ಪ್ರಶಾಂತ್‌ ಮತ್ತು ವಿನೋದ್‌ ಚರ್ಚಿಸಿದ್ದಾರೆ. ಅರುಣ್‌ ಸಾಗರ್‌ ಮಾತನಾಡಿ ʻʻಕ್ಯಾಪ್ಟನ್‌ ಆದವರಿಗೆ ವೀಕ್‌ ಎನ್ನುವ ಅಧಿಕಾರ ಇಲ್ಲ. ಅದು ಸರಿಯಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ | Bigg Boss Kannada | ಏಳು ಹಂತದಲ್ಲಿ ಆಟ ಆಡಿಸಿ, ಎಲಿಮಿನೇಷನ್‌ ಪ್ರಕ್ರಿಯೆ ಮಾಡಿದ ಬಿಗ್‌ ಬಾಸ್‌: ಇಲ್ಲಿವೆ ಫೋಟೊಗಳು!

Exit mobile version