Site icon Vistara News

Bigg Boss Kannada | ಜಶ್ವಂತ್‌-ನಂದಿನಿ ಕಣ್ಣ ಕಣ್ಣ ಸಲಿಗೆ ಪುರಾಣ: ವಾರದ ಕತೆ ಕಿಚ್ಚನ ಜತೆ ಮಾತುಕತೆ!

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋ (Bigg Boss Kannada) ಸೋಷಿಯಲ್‌ ಮೀಡಿಯಾದಲ್ಲಿ ಬಹು ಚರ್ಚಿತ ವಿಷಯಗಳಲ್ಲೊಂದು. ಅಲ್ಲಿ ಹಾಗಂತೆ, ಹೀಗಂತೆ, ಎಂಬ ಅಂತೆ ಕಂತೆಗಳು ಚರ್ಚಾ ರೂಪಕ್ಕಿಳಿದಿವೆ. ಈ ಮಧ್ಯೆ ಶನಿವಾರ (ಆ. ೧೩ ) ಕಿಚ್ಚು ಹಚ್ಚುವ ಕಿಚ್ಚನ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕ್ಯಾಮೆರಾ ಬಗ್ಗೆ ಕಿಚ್ಚ ಎಚ್ಚರಿಕೆಯ ಮಾತನ್ನಾಡಿದ್ದಾರೆ.

ವಾರದ ಕತೆ ಕಿಚ್ಚನ ಜತೆ ಮಾತುಕತೆ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೊದಲ್ಲಿ ಕಿಚ್ಚ ಸುದೀಪ್‌ ಸ್ಪರ್ಧಿಗಳ ಕುರಿತು ರಿಯಲ್‌ ಫೇಸ್‌ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಸುತ್ತಲೂ ಕ್ಯಾಮಾರಾಗಳಿದ್ದು, ನಿಮಗೆ ತಪ್ಪಿದ್ದಲ್ಲ ಎಂದೂ ಹೇಳಿದ್ದಾರೆ. ಈ ಮೂಲಕ ಸ್ವಲ್ಪ ಹುಷಾರು ಎಂಬ ಕಿವಿಮಾತನ್ನು ಹೇಳಿದ್ದಾರೆ.

ಕಣ್ಣ್ ಕಣ್ಣ ಸಲಿಗೆಯಲ್ಲಿ ಜಶ್ವಂತ್‌ ನಂದಿನಿ..!

ಈ ಬಾರಿ ಬಿಗ್‌ಬಾಸ್‌ ಶೋನಲ್ಲಿ ನಂದಿನಿ ಹಾಗೀ ಜಸ್ವಂತ್‌ ಒಂದೇ ಸ್ಪರ್ಧಿ ಎಂದು ಪರಿಗಣಿಸಿದ್ದಾರೆ. ಇನ್ನು ಟಾಸ್ಕ್‌ ನೀಡುವಾಗ ಕೂಡ ಇಬ್ಬರಿಗೂ ಸೇರಿ ಬಿಗ್‌ ಬಾಸ್‌ ನೀಡುತ್ತಾರೆ. ಇದರಲ್ಲಿ ಲಾಭ, ನಷ್ಟ ಎರಡನ್ನೂ ಒಳಗೊಂಡಿದೆ. ಒಂದೇ ಮನೆಯಲ್ಲಿ ಈ ಪ್ರೇಮ ಪಕ್ಷಿಗಳು ಇರುವುದು ಮನಸ್ತಾಪಕ್ಕೆ ಕಾರಣವಾಗುತ್ತಿದೆ.

ಟಾಮ್‌ಬಾಯ್‌ ತರ ಇದ್ದ ನಂದಿನಿ ಅನ್ನು ನಾಚಿಕೆಯ ಸ್ವಭಾವವುಳ್ಳವಳಂತೆ ಬದಲಾಯಿಸಿದ್ದು ಇದೇ ಜಶ್ವಂತ್‌ ಅಂತೆ. ಡ್ಯಾನ್ಸ್‌ ಫಿಟ್‌ನೆಸ್‌ ಇನ್‌ಸ್ಟ್ರಕ್ಟರ್‌ ಆಗಿರುವ ನಂದಿನಿ ಟೀಂಗೆ ಜಶ್ವಂತ್‌ ಎಂಟ್ರಿಯಾದ ಬಳಿಕ ಇಬ್ಬರೂ ಸೀರಿಯಸ್‌ ರಿಲೇಶನ್‌ಶಿಪ್‌ಗೆ ಹೋಗಿದ್ದಾರೆ ಎನ್ನಲಾಗಿದ್ದು, ಕೊನೆಗೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರಂತೆ.

ಆದರೆ ಬಿಗ್‌ಬಾಸ್‌ ಮನೆಯಲ್ಲಿ ನಂದಿನಿಯನ್ನು ಜಶ್ವಂತ್‌ ಕಡೆಗಾಣಿಸಿದ್ದಾರೆ. ಇದರ ಬಗ್ಗೆ ಸ್ವತಃ ನಂದಿನಿ ಮಾತನಾಡಿದ್ದು, ಇಲ್ಲಿಗೆ ಬಂದ ಮೇಲೆ ನನ್ನನ್ನು ಕಡೆಗಾಣಿಸುತ್ತೀಯಾ? ಮಾತನಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು. ಇದೀಗ ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಜಶ್ವಂತ್‌ ಹಾಗೂ ನಂದಿನಿ ಅವರ ಕಣ್ಣ ಕಣ್ಣ ಸಲಿಗೆ ಉಂಟಾಗಿದ್ದು, ಕಣ್ಣಿನ ಮಾತುಗಳು ಶುರುವಾಗಿದೆ.

Exit mobile version