Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಿಂದ ಹೊರನಡೆದ ವಿನೋದ್‌ ಗೊಬ್ಬರಗಾಲ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಈ ವಾರ ಮನೆಯಿಂದ ವಿನೋದ್‌ ಗೊಬ್ಬರಗಾಲ (Vindo Gobbargal) ಹೊರ ನಡೆದಿದ್ದಾರೆ. 9ನೇ ಸೀಸನ್‌ನ ಮೊದಲ ವಾರದ ಕ್ಯಾಪ್ಟನ್ ಆಗಿದ್ದ ವಿನೋದ್, ಎರಡು ಸಲ ಕಿಚ್ಚನ ಚಪ್ಪಾಳೆ ಕೂಡ ಗಿಟ್ಟಿಸಿಕೊಂಡಿದ್ದಾರೆ. ಆಟದಲ್ಲಿ ಯಾರಿಗಿಂತ ಕಡಿಮೆ ಇಲ್ಲ ಅಷ್ಟು ಇದ್ದ ಮೇಲೆ ಯಾಕೆ ಎಲಿಮಿನೇಟ್ ಆದರು ಎಂದು ನೆಟ್ಟಿಗರು ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ವಿನೋದ್ ಗೊಬ್ಬರಗಾಲ ಅವರನ್ನು ಟಾಪ್ 3ರಲ್ಲಿ ನೋಡಲು ನಿರೀಕ್ಷಿಸಿದ್ದ ವೀಕ್ಷಕರಂತೂ ಇನ್ನೂ ಮುಂದೆ ಬಿಗ್ ಬಾಸ್ ಕಾರ್ಯಕ್ರಮವೇ ನೋಡುವುದಿಲ್ಲ ಎಂದು ಟ್ವೀಟ್‌ ಮಾಡುತ್ತಿದ್ದಾರೆ. ವಿನೋದ್‌ ಗೊಬ್ಬರಗಾಲ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತದ ಮೂಲಕ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋನಲ್ಲಿ ಹಾಸ್ಯಕಲಾವಿದ ವಿನೋದ್ ಗೊಬ್ಬರಗಾಲ ಸ್ಪರ್ಧಿಸಿದ್ದರು.

ಇದನ್ನೂ ಓದಿ | Bigg Boss Kannada | ಈ ವಾರ ಮನೆಯ ಕ್ಯಾಪ್ಟನ್‌ ರಾಕೇಶ್‌ ಅಡಿಗ: ತಂದೆ ಮಾತಿಗೆ ಮನೆಮಂದಿ ಫಿದಾ!

ಕಿಚ್ಚ ಸುದೀಪ್‌ ಅವರಿಂದ ಕ್ಲಾಸ್‌!
ಎರಡು ಬಾರಿ ಕಿಚ್ಚ ಸುದೀಪ್‌ ಅವರ ಬಳಿ ಚಪ್ಪಾಳೆ ಪಡೆದುಕೊಂಡ ವಿನೋದ್‌ ಗೊಬ್ಬರಗಾಲ ಅವರು ಟಾಸ್ಕ್‌ ವಿಚಾರವಾಗಿ ಸುದೀಪ್‌ ಅವರಿಂದ ವೀಕೆಂಡ್‌ ಪಂಚಾಯಿತಿಯಲ್ಲಿ ಪಾಠ ಹೇಳಿಸಿಕೊಂಡಿದ್ದಾರೆ. ʻʻಟಾಸ್ಕ್​ನ ಅನುಸಾರ ನೀರಿನಲ್ಲಿ ಮರದ ಪಂಜರ ಒಂದನ್ನು ಇಡಲಾಗಿತ್ತು. ಅದಕ್ಕೆ 12 ನಟ್​ಗಳನ್ನು ಜೋಡಿಸಲಾಗಿತ್ತು. ಅದನ್ನು ಆಟ ಆಡುವ ಸ್ಪರ್ಧಿಗಳು ಬರಿಗೈನಲ್ಲಿ ಬಿಚ್ಚಬೇಕಿತ್ತು. ಆದರೆ ಆರ್ಯವರ್ಧನ್​ ಬಟ್ಟೆ​​ ಸಹಾಯದಿಂದ ನಟ್ ಬಿಚ್ಚಿದ್ದರುʼʼ ಇದು ಬಿಗ್​ ಬಾಸ್​ ಮನೆಯ ಇತರೆ ಸ್ಪರ್ಧಿಗಳ ಕೆಂಗೆಣ್ಣಿಗೆ ಗುರಿಯಾಗಿತ್ತು. ಏಕೆಂದರೆ ಮನೆಗೆ ಬರಬೇಕಿದ್ದ ಸೌಕರ್ಯವನ್ನು ಕಳೆದುಕೊಳ್ಳಬೇಕಾಯಿತು.

ತಮ್ಮ ತಪ್ಪನ್ನು ಮುಚ್ಚಿಟ್ಟು ಆರ್ಯವರ್ಧನ್ ಗುರೂಜಿ ಅವರ ಮೇಲೆ ಹಾಕಿದ್ರು ವಿನೋದ್‌
ಇದೇ ಆಟದಲ್ಲಿ ಆರ್ಯವರ್ಧನ್ ಗುರೂಜಿಗೆ ಜತೆ ಆಡಿದವರು ವಿನೋದ್​ ಗೊಬ್ಬರಗಾಲ. ಇವರಿಗೆ ಆಟದ ನಿಮಯ ಚೆನ್ನಾಗಿ ಗೊತ್ತಿದ್ದರೂ ಆರ್ಯವರ್ಧನ್ ಗುರೂಜಿ ಮಾಡಿದ ತಪ್ಪನ್ನೇ ಇವರು ಮಾಡುತ್ತಾರೆ. ಆದರೆ ತಮ್ಮ ತಪ್ಪನ್ನು ಮುಚ್ಚಿಟ್ಟು ಆರ್ಯವರ್ಧನ್ ಗುರೂಜಿ ಅವರ ಮೇಲೆ ಹಾಕುತ್ತಾರೆ. ಇದೇ ವಿಚಾರವಾಗಿ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಚರ್ಚೆ ಆಗಿದೆ.

ಆ ಎರಡು ತಪ್ಪು ಯಾವುದು?
ಕಿಚ್ಚ ಸುದೀಪ್​ ಅವರು ಈ ಟಾಸ್ಕ್​ನ ಕುರಿತಾಗಿ ವಿನೋದ್​ ಗೊಬ್ಬರಗಾಲ ಅವರನ್ನು ಪ್ರಶ್ನಿಸಿದ್ದಾರೆ. ʻʻನೀವು ಕೂಡ ಪ್ಯಾಂಟ್ ಬಳಸಿ ನಟ್ ಬಿಚ್ಚಿವುದಕ್ಕೆ ಪ್ರಯತ್ನಿಸಿದ್ದೀರಾ ಇಲ್ವಾ ಎಂದು ಪ್ರಶ್ನಿಸಿದರು. ಇದಕ್ಕೆ ವಿನೋದ್ ಅವರು ಟ್ರೈ ಮಾಡಿದೆ ಎಂದು ಉತ್ತರಿಸಿದ್ದಾರೆ. ಬಳಿಕ ಸುದೀಪ್ ನಿಮ್ಮಿಂದ ಎರಡು ತಪ್ಪುಗಳಾಗಿವೆ. ಒಂದು ಟಾಸ್ಕ್​​ನ ಸರಿಯಾಗಿ ಕೇಳಿಸಿಕೊಳ್ಳದೇ ಅದನ್ನ ತಪ್ಪಾಗಿ ಮಾಡಿರುವುದು. ಇನ್ನೊಂದು ಮಾಡಿರುವ ತಪ್ಪನ್ನು ಬೇರೆಯವರ ಮೇಲೆ ಹಾಕುವುದುʼʼ ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಈಗಾಗಲೆ ಮನೆಯಿಂದ ಐಶ್ವರ್ಯ ಪಿಸ್ಸೆ, ಸೈಕ್ ನವಾಜ್, ದರ್ಶ್‌ ಚಂದ್ರಪ್ಪ, ಮಯೂರಿ, ನೇಹಾ ಮತ್ತು ಸಾನ್ಯಾ ಐಯ್ಯರ್‌ ಹೊರ ಬಂದಿದ್ದಾರೆ.

ಇದನ್ನೂ ಓದಿ | Bigg Boss Kannada | ಹೇಗಿತ್ತು ಮನೆಯಲ್ಲಿ ರೂಪೇಶ್‌ ರಾಜಣ್ಣರ ನಳಪಾಕ?

Exit mobile version