Site icon Vistara News

Bigg Boss Kannada | ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೂಪರ್‌ ಪವರ್‌ ಆಗಿ ಆಡಿದ ವಿನೋದ ಗೊಬ್ಬರಗಾಲ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada) 40ನೇ ದಿನ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನೋದ್‌ ಗೊಬ್ಬರಗಾಲ ಉತ್ತಮವಾಗಿ ಆಡಿದ್ದಾರೆ. ಆರೋಗ್ಯ ಸಮಸ್ಯೆ ಇದ್ದ ಕಾರಣ ವಿನೋದ್‌ ಅವರು ಮೊದಲ ಎರಡು ದಿನ ಟಾಸ್ಕ್‌ನಲ್ಲಿ ಭಾಗಿಯಾಗಿರಲಿಲ್ಲ.

ಮನೆಯಲ್ಲಿ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ ನಡೆಯುತ್ತಿದೆ. ಈ ಟಾಸ್ಕ್‌ ಅನುಸಾರ ಪ್ರತಿ ಬಾರಿ ಬಿಗ್‌ ಬಾಸ್‌ ಅಲರ್ಟ್‌ ಸೌಂಡ್‌ ಕೊಟ್ಟಾಗ, ಸದಸ್ಯರು ಬಝರ್‌ ಒತ್ತಬೇಕು. ಯಾರು ಮೊದಲು ಬಝರ್‌ ಒತ್ತುತ್ತಾರೋ ಅವರು ತನ್ನ ಪ್ರತಿ ಸ್ಪರ್ಧಿಗಳನ್ನು ಆರಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ. ಟಾಸ್ಕ್‌ನಲ್ಲಿ ಗೆದ್ದ ಸದಸ್ಯ ವಿಶೇಷ ಪವರ್‌ ಪಡೆಯುತ್ತಾನೆ. ಅತಿ ಹೆಚ್ಚು ಬಾರಿ ಬಝರ್‌ ಒತ್ತುವ ಸದಸ್ಯ ಮುಂದಿನ ಬಾರಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ.

ಮೊದಲಿಗೆ ರೂಪೇಶ್‌ ರಾಜಣ್ಣ ಬಝರ್‌ ಒತ್ತಿದ್ದು, ದೀಪಿಕಾ ದಾಸ್‌ ಅವರನ್ನು ಪ್ರತಿ ಸ್ಪರ್ಧಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಬಿಗ್‌ ಬಾಸ್‌ ʻರಾಟೆ ಮೂಟೆʼ ಎನ್ನುವ ಟಾಸ್ಕ್‌ ನೀಡಿದ್ದು, ಇದರ ಅನುಸಾರ ಆಡುವ ಸದಸ್ಯರು ತಾವು ಆರಿಸಿಕೊಂಡ ಟವರಿನೊಳಗೆ ರಾಟೆಯ ಸಹಾಯದಿಂದ ಇಳಿ ಬಿಟ್ಟಿರುವ ಭಾರದ ಚೀಲದಿಂದ, ಅದಕ್ಕೆ ಕಟ್ಟಿರುವ ಹಗ್ಗವನ್ನು ಬಳಸಿ, ರಭಸದಿಂದ ಕೆಳಗಿ ಬಿಟ್ಟು ಮೂರು ಹಂತದಲ್ಲಿ ಇರುವ ಹಲಗೆಯನ್ನು ಬೀಳಿಸಬೇಕು. ರೂಪೇಶ್‌ ರಾಜಣ್ಣ ಈ ಟಾಸ್ಕ್‌ನಲ್ಲಿ ವಿಜೇತರಾದರು. ʻʻಲೆಕ್ಕಕ್ಕುಂಟು ಆಟಕ್ಕಿಲ್ಲʼʼ ಎನ್ನುವ ಸೂಪರ್‌ ಪವರ್‌ ರೂಪೇಶ್‌ ರಾಜಣ್ಣ ಪಡೆದರು. ಇದರ ಅನುಸಾರ ರೂಪೇಶ್‌ ರಾಜಣ್ಣ ಆಯ್ಕೆ ಮಾಡಿರುವ ಸದಸ್ಯ ವಾರವಿಡಿ ಬಝರ್‌ ಒತ್ತುವ ಹಾಗಿಲ್ಲ.

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಕನ್ನಡಮ್ಮನ ಹಬ್ಬದ ದಿನ ಹೆತ್ತಮ್ಮನ ನೆನಪು!

ಈ ನಿಯಮದಂತೆ ರೂಪೇಶ್‌ ರಾಜಣ್ಣ ಅವರು ರೂಪೇಶ್‌ ಶೆಟ್ಟಿಯನ್ನು ಆಯ್ಕೆ ಮಾಡಿದರು. ಅದಕ್ಕೆ ಕಾರಣವನ್ನೂ ಕೊಟ್ಟರು. ʻʻಈಗಾಗಲೇ ರೂಪೇಶ್‌ ಶೆಟ್ಟಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗಿದ್ದಾರೆ. ಮೂರು ಬಝರ್‌ ಗೆದ್ದಿದ್ದಾರೆ,ʼʼಎಂದು ಹೇಳಿದರು. ರೂಪೇಶ್‌ ರಾಜಣ್ಣ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ಅನುಪಮಾ ಮತ್ತು ಅಮೂಲ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.

ಎರಡನೇ ಬಾರಿ ರಾಕೇಶ್‌ ಅಡಿಗ ಬಝರ್‌ ಒತ್ತಿದ್ದು, ಪ್ರತಿ ಸ್ಪರ್ಧಿಯಾಗಿ ವಿನೋದ್‌ ಅವರನ್ನು ಆಯ್ಕೆ ಮಾಡಿಕೊಂಡರು. ʻಪಿಲ್ಲೋ ಫೈಟ್‌ʼ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದು, ಇದರ ಅನುಸಾರ ಆಡುವ ಸದಸ್ಯರು ಗೆರೆಯ ಒಳಗಡೆ ನಿಂತು ಒಬ್ಬರ ಮೇಲೊಬ್ಬರು ದಿಂಬಿನ ಸಹಾಯದಿಂದ ಗೆರೆಯ ಹೊರಗಡೆ ತಳ್ಳಬೇಕು. ಈ ಆಟದಲ್ಲಿ ವಿನೋದ್‌ ಗೊಬ್ಬರಗಾಲ ವಿಜೇತರಾದರು. ʻಶಾಪ ವಿಮೋಚನೆʼ ಎಂಬ ಸೂಪರ್‌ ಪವರ್‌ ಅನ್ನು ಪಡೆದರು. ಈ ಪವರ್‌ ಅನುಸಾರ ಮುಂದಿನ ವಾರ ಒಬ್ಬ ಸ್ಪರ್ಧಿಯನ್ನು ನಾಮಿನೇಷನ್‌ನಿಂದ ಪಾರು ಮಾಡಬಹುದು. ಅಂತೆಯೇ ಅವರು ಕಾವ್ಯಶ್ರೀ ಹೆಸರನ್ನು ಹೇಳಿದ್ದು, ಮುಂದಿನ ವಾರದ ನಾಮಿನೇಷನ್‌ನಿಂದ ಪಾರಾಗಿದ್ದಾರೆ.

ಮೂರನೇ ಬಾರಿ ವಿನೋದ್‌ ಗೊಬ್ಬರಗಾಲ ವಿಜೇತರಾಗಿದ್ದು, ಅಮೂಲ್ಯ ಅವರನ್ನು ಎದುರಾಳಿಯಾಗಿ ಸ್ವೀಕರಿಸಿದರು. ʻಸುತ್ತಿಗೆಗಾಗಿ ಹೋರಾಟʼ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿತ್ತು. ಇದರ ಅನುಸಾರ ಆಡುವ ಸದಸ್ಯರು ತಾವು ಆಯ್ಕೆ ಮಾಡಿಕೊಂಡ ಪೆಟ್ಟಿಗೆಯ ಸ್ಕ್ರೂ ಬಿಚ್ಚಿ ಪೆಟ್ಟಿಗೆಯನ್ನು ತೆರೆದು ಅದರಲ್ಲಿರುವ ಸುತ್ತಿಗೆಯಿಂದ ಜಾಗಟೆ ಬಾರಿಸಬೇಕು.ಇದರಲ್ಲಿ ವಿನೋದ್‌ ಗೊಬ್ಬರಗಾಲ ವಿಜೇತರಾದರು.

ನಾಲ್ಕನೇ ಬಾರಿ ದಿವ್ಯಾ ಉರುಡುಗ ಬಝರ್‌ ಒತ್ತಿದ್ದು, ವಿನೋದ್‌ ಗೊಬ್ಬರಗಾಲ ಅವರನ್ನು ಪ್ರತಿ ಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡರು. ಬಿಗ್‌ ಬಾಸ್‌ ʻಪುಗ್ಗ ಮುಗ್ಗʼ ಎನ್ನುವ ಟಾಸ್ಕ್‌ ನೀಡಿದ್ದು, ಇದರ ಅನುಸಾರ ಬಲೂನ್‌ಗಳನ್ನು ಅದರ ಮೇಲೆ ಕುಳಿತು ಒಡೆಯಬೇಕಿತ್ತು. ಇದರಲ್ಲಿಯೂ ವಿನೋದ್‌ ಗೊಬ್ಬರಗಾಲ ವಿಜೇತರಾಗಿದ್ದು, ʻನಿದ್ರಾ ಭಾಗ್ಯʼ ಸೂಪರ್‌ ಪವರ್‌ ಅನ್ನು ಪಡೆದರು.

ಇದನ್ನೂ ಓದಿ | Bigg Boss Kannada | ಪ್ರಶಾಂತ್‌ ಸಂಬರಗಿ ವಿರುದ್ಧ ಕನ್ನಡಪರ ಸಂಘಟನೆ ಹೋರಾಟಗಾರರಿಂದ ಪ್ರತಿಭಟನೆ

Exit mobile version