Site icon Vistara News

Bigg Boss Kannada | ಮೊದಲ ಕ್ಯಾಪ್ಟನ್‌ ಆಗಿ ವಿನೋದ್‌ ಗೊಬ್ಬರಗಾಲ ಆಯ್ಕೆ! ಕ್ಯಾಪ್ಟನ್ಸಿ ಪವರ್ ಬಗ್ಗೆ ಸಂಬರಗಿ ಕ್ಲಾಸ್!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಕ್ಯಾಪ್ಟನ್‌ಶಿಪ್‌ಗಾಗಿ ಸ್ಪರ್ಧಿಗಳು ಹರಸಾಹಸ ಪಟ್ಟಿದ್ದಾರೆ. ಹಾಗೇ ಹಲವು ಟಾಸ್ಕ್‌ಗಳನ್ನು ನಿಭಾಯಿಸಿದ್ದಾರೆ. ಇದೀಗ ಸೀಸನ್‌ 9 ರ ಮೊದಲ ಕ್ಯಾಪ್ಟನ್‌ ಆಗಿ ವಿನೋದ್‌ ಗೊಬ್ಬರಗಾಲ ಆಯ್ಕೆಯಾಗಿದ್ದಾರೆ. ಬಿಗ್‌ ಬಾಸ್‌ ಕ್ಯಾಪ್ಟ್‌ನ್‌ಶಿಪ್‌ಗಾಗಿ ಅಮೂಲ್ಯ ಜೋಡಿ ಹಾಗೂ ದಿವ್ಯಾ ಉರುಡುಗ ಜೋಡಿಗೆ, ಇಬ್ಬರೂ ಒಟ್ಟಾಗಿ ಯಾರು ಕ್ಯಾಪ್ಟನ್‌ಶಿಪ್‌ ತೆಗೆದುಕೊಳ್ಳಬೇಕು? ಎಂಬ ನಿರ್ಧಾರವನ್ನು ಮಾಡಿ ಎಂಬ ಟಾಸ್ಕನ್ನು ಬಿಗ್‌ಬಾಸ್‌ ನೀಡಿದ್ದರು. ದೀಪಿಕಾ ದಾಸ್‌ ಜೋಡಿ ದಿವ್ಯಾ ಉರುಡುಗನಿಗೆ ಟಾಸ್ಕ್‌ ಆಡಲು ಚಾನ್ಸ್‌ ಕೊಟ್ಟರು. ಅದರಂತೆ ದಿವ್ಯಾ ಉರುಡುಗ ಮತ್ತು ವಿನೋದ್‌ ನಡುವೆ ಕ್ಯಾಪ್ಟೆನ್ಸಿ ಟಾಸ್ಕ್‌ ನಡೆಯಿತು.

ಬಾಲ್‌ ಹಿಡಿದು ಕಟ್ಟಿಗೆ ಮೇಲೆ ನಡೆದು ಬುಟ್ಟಿಗೆ ಹಾಕುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು . ಮೊದಲ ರೌಂಡ್‌ನಲ್ಲಿ ವಿನೋದ್‌ ಮತ್ತು ಐಶ್ವರ್ಯ ಪಿಸೆ ಆಡಿದರು. ಆದರೆ ವಿನೋದ್‌ ಗೆದ್ದರು. ಎರಡನೇ ಸುತ್ತಿನಲ್ಲಿ ಪ್ರಶಾಂತ್‌ ಸಂಬರಗಿ ಮತ್ತು ದಿವ್ಯಾ ಉರುಡುಗ ಆಟದಲ್ಲಿ ದಿವ್ಯಾ ಉರುಡುಗ ವಿಜೇತರಾದರು. ಫೈನಲ್‌ನಲ್ಲಿ ವಿನೋದ್‌ ಮತ್ತು ದಿವ್ಯಾ ನಡುವೆ ವಿನೋದ್ ವಿಜೇತರಾಗಿ ಹೊರಹೊಮ್ಮಿದರು. ಆ ಮೂಲಕ ಈ ವಾರದ ಕ್ಯಾಪ್ಟನ್‌ ಆದರು ವಿನೋದ್‌ ಗೊಬ್ಬರಗಾಲ.

ಇದನ್ನೂ ಓದಿ | Bigg Boss Kannada | ಮೊದಲ ವಾರ ಉತ್ತಮ ಪ್ರದರ್ಶನಕಾರ ಅರುಣ್‌ ಸಾಗರ್‌ : ಕಳಪೆ ಆದವರು?


ಕ್ಯಾಪ್ಟೆನ್ಸಿ ಪವರ್ ಬಗ್ಗೆ ಸಂಬರಗಿ ಕ್ಲಾಸ್!
ಪ್ರಶಾಂತ್‌ ಸಂಬರಗಿ ಕ್ಯಾಪ್ಟನ್‌ಶಿಪ್‌ ವಿಚಾರವಾಗಿ ದೀಪಿಕಾ ದಾಸ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪ್ರಶಾಂತ್‌ ಸಂಬರಗಿ ಮಾತನಾಡಿ ʻʻಬಂದಿರುವ ಭಾಗ್ಯಲಕ್ಷ್ಮೀಯನ್ನು ಒದೆದಿದ್ದೀಯಾ. ಕ್ಯಾಪ್ಟನ್‌ಶಿಪ್‌ ಬೆಲೆ ಗೊತ್ತಿದೆಯಾ ನಿನಗೆ?. ಹಿಂದಿನ ಬಿಗ್‌ ಬಾಸ್‌ ಸೀಸನ್‌ನಲ್ಲಿ ನಿನಗೆ ಅವಕಾಶ ಸಿಕಿಲ್ಲ. ಈ ಬಾರಿ ಬಿಟ್ಟು ಕೊಡಬಾರದಿತ್ತುʼʼ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ದೀಪಿಕಾ ದಾಸ್‌ ʻʻನನಗೆ ನೀವು ಕೊಟ್ಟ ಅವಕಾಶಕ್ಕೆ ನಾನು ಗೌರವವಿಸುತ್ತೇನೆ ʼʼಎಂದರು. ಅದಕ್ಕೆ ಪ್ರಶಾಂತ್‌ ಮಾತನಾಡಿ ʻʻಅವಕಾಶ ಬಿಟ್ಟಾಕು. ನನ್ನನ್ನು ತಲೆಯಲ್ಲಿ ಇಟ್ಟುಕೊಂಡು ಆಡಬೇಡ. ನಿನ್ನ ಸ್ವಂತಕ್ಕೆ ಆಡುʼʼ ಎಂದು ಖಡಕ್‌ ವಾರ್ನಿಂಗ್‌ ನೀಡಿದರು. ಮಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ಕಳಪೆ ಪ್ರದರ್ಶನ ಜಗಳ

Exit mobile version