Site icon Vistara News

Bigg Boss Kannada | ಆರ್ಯವರ್ಧನ್‌, ಉದಯ್‌ ಜಟಾಪಟಿ: ಬೀಸೋ ದೊಣ್ಣೆಯಿಂದ ಯಾರು ಪಾರು?

Bigg Boss Kannada

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್‌ ಬಾಸ್‌ ಕನ್ನಡ (Bigg Boss Kannada) ಈಗ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಸ್ಪರ್ಧಿಗಳಿಗೆ “ಬಿಗ್‌ ಬಾಸ್‌ʼ ಟಾಸ್ಕ್‌ ನೀಡುತ್ತಿದ್ದಾರೆ. ಇವತ್ತಿನ ಸಂಚಿಕೆಯೆಲ್ಲಿ ತಿರುಗುವ ಕಂಬಿಯಿಂದ ಪಾರಾಗುವ ಆಟ ಇದೆ. ಈಗಾಗಲೇ ಆಟದ ಪ್ರೋಮೊ ಬಿಗ್‌ಬಾಸ್‌ ರಿವೀಲ್‌ ಮಾಡಿದೆ.

ಎರಡು ತಂಡಗಳಿಂದ ತಲಾ ಒಬ್ಬ ಸದಸ್ಯ ಸ್ಟೂಲ್‌ ಮೇಲೆ ನಿಂತು ತಿರುಗುವ ಕಂಬಿಯಿಂದ ಪಾರಾಗಬೇಕು. ಇದೀಗ ಆರ್ಯವರ್ಧನ್‌ ಹಾಗೂ ಉದಯ್‌ ಸೂರ್ಯ ಮಧ್ಯೆ ಸ್ಪರ್ಧೆ ನಡೆದಿದೆ. ಸ್ಪರ್ಧಿಗಳು ಸ್ಟೂಲ್‌ ಮೇಲೆ ನಿಂತಾಗ ಉಳಿದ ಸದಸ್ಯರು ನೀರು, ತಲೆದಿಂಬು ಇತ್ಯಾದಿ ವಸ್ತುಗಳನ್ನು ಎಸೆಯುತ್ತಾರೆ. ಆಟ ಆಡಲು ನಿಂತವರು ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ.

ಇದನ್ನೂ ಓದಿ | Bigg Boss Kannada | ಬಿಗ್‌ಬಾಸ್‌ ಕನ್ನಡ ಒಟಿಟಿ 2ನೇ ಸ್ಪರ್ಧಿಯಾಗಿ ಟಿಕ್‌ಟಾಕ್‌ ಖ್ಯಾತಿಯ ಸೋನು ಗೌಡ ಎಂಟ್ರಿ

ಈ ಆಟದಲ್ಲಿ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಶುರುವಾಗುತ್ತದೆ. ಒಬ್ಬರನೊಬ್ಬರು ತಳ್ಳಿಕೊಂಡು ತಪ್ಪಿಸಿಕೊಳ್ಳಬೇಕಾಗುತ್ತದೆ. ಆರ್ಯವರ್ಧನ್‌ ಹಾಗೂ ಉದಯ್‌ ಸೂರ್ಯ ಮಧ್ಯೆ ಈ ಸಂದರ್ಭದಲ್ಲಿ ಜಗಳ ನಡೆದಿದೆ. ಆಟ ಆಡುವಾಗ ಉದಯ್‌ಗೆ ಗಾಯವೂ ಆಗಿದೆ. ಇಂದಿನ ಸಂಚಿಕೆಯಲ್ಲಿ ಬೀಸೋ ದೊಣ್ಣೆ ಆಟ ಪ್ರಸಾರವಾಗಲಿದೆ.

ಇದನ್ನೂ ಓದಿ | Bigg Boss Kannada | ದೊಡ್ಡ ಮನೆಯಲ್ಲಿ ನಂದಿನೀನಾ ಜಸ್ವಂತ್‌ Ignore ಮಾಡಿದ್ದೇಕೆ?

Exit mobile version