Site icon Vistara News

Bigg Boss Kannada | ಡವ್‌ ರಾಣಿ ಕಿರಿಕ್‌; ಸ್ಫೂರ್ತಿ ಫುಲ್‌ ಗರಂ, ಗಳಗಳನೆ ಅತ್ತ ಸೋನು!

Bigg Boss Kannada

ಬೆಂಗಳೂರು: ಒಟಿಟಿ ಪ್ರದರ್ಶನಗೊಳ್ಳುತ್ತಿರುವ ಬಿಗ್‌ ಬಾಸ್‌ ಕನ್ನಡ (Bigg Boss Kannada) ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳ ಮಧ್ಯೆ ವಾರ್‌ ಶುರುವಾಗಿದೆ. ಸ್ಫೂರ್ತಿ ಗೌಡ ಹಾಗೂ ಸೋನು ಗೌಡ ಮಧ್ಯೆ ಮೊದಲನೇ ದಿನದಿಂದಲೇ ಇರಸುಮುರಸು ಪ್ರಾರಂಭವಾಗಿತ್ತು. ಅದೂ ಎರಡನೇ ದಿನವೂ ಮುಂದುವರಿದಿದ್ದು, “ಡವ್‌ ರಾಣಿ” ಎಂಬ ಪದ ರಾದ್ಧಾಂತವನ್ನೇ ಸೃಷ್ಟಿಸಿದೆ.

ಸ್ಫೂರ್ತಿ ಗೌಡ ಅವರ ಬಳಿ “ನಿನ್ನನ್ನು ನಾನು ಡವ್‌ ರಾಣಿ ಅಂತ ಕರೆಯುತ್ತೇನೆ” ಎಂದು ಸೋನು ಗೌಡ ಹೇಳಿದ್ದೇ ಗಲಾಟೆಗೆ ನಾಂದಿ ಹಾಡಿದೆ. ಈ ವಿಷಯಕ್ಕೆ ಸ್ಫೂರ್ತಿ ಗೌಡ ಬಹಳವೇ ಕಿರುಚಾಡಿದ್ದಾರೆ. ಇಬ್ಬರ ಮಧ್ಯೆ ಮಿನಿ ವಾರ್‌ ಆಗಿದೆ.

ಡವ್‌ ರಾಣಿ ಪದ ಯಾಕೆ ಬಳಕೆಯಾಯ್ತು?

ಕೆಲವು ವಿಚಾರಗಳು ಅರ್ಥವಾದರೂ ಆಗದೇ ಇರುವ ರೀತಿಯಲ್ಲಿ ಸ್ಫೂರ್ತಿ ಗೌಡ ಇರುತ್ತಾರೆ ಎಂದು ಹೇಳಿರುವ ಸೋನು ಗೌಡ, ಹಾಗಾಗಿ ನಿನ್ನನ್ನು ನಾನು ಡವ್‌ ರಾಣಿ ಅಂತ ಕರೆಯುತ್ತೇನೆ ಎಂದು ಕಾರಣ ಸಹಿತ ಹೇಳಿದ್ದಾರೆ. ಇದರಿಂದ ತೀವ್ರವಾಗಿ ಕೆರಳಿದ ಸ್ಫೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಕೇಶ್‌ ಕೂಡ ಮಧ್ಯೆ ಪ್ರವೇಶಿಸಿದ್ದು, ಇಬ್ಬರ ಮಧ್ಯೆ ಗಲಾಟೆ ಹೆಚ್ಚಲು ಮತ್ತಷ್ಟು ಕಾರಣವಾಗಿದೆ ಎಂಬ ಚರ್ಚೆಗಳೂ ಆಗಿವೆ.

ಇದನ್ನೂ ಓದಿ | Bigg Boss Kannada | ಲೋಕಿ ಹಾಗೂ ಆರ್ಯವರ್ಧನ್‌ ಮಾತಿನ ವಾರ್‌!

ಕಣ್ಣೀರಿಟ್ಟ ಸೋನು ಗೌಡ

ಈ ರಾದ್ಧಾಂತದ ಬಳಿಕ ಸಹ ಸ್ಪರ್ಧಿ ಅಕ್ಷತಾ ಮುಂದೆ ಮಾತನಾಡಿರುವ ಸೋನು ಗೌಡ ʻʻಎಲ್ಲರ ಜತೆ ಚೆನ್ನಾಗಿರೋದೆ ತಪ್ಪಾಯ್ತಾ?” ಎಂದು ಹೇಳಿಕೊಂಡು ಗಳಗಳನೆ ಅತ್ತಿದ್ದಾರೆ. ನಾನು ನಗಬೇಡ ಅಂದಿದ್ದು ನಿಜ. ನಾನು ಜೋಕ್‌ ಮಾಡುತ್ತಿದ್ದೆ. ಸ್ಫೂರ್ತಿ ನಗಬೇಡ ಎಂದು ಹೇಳಿದೆ. ನಾನು ಮಾತನಾಡುವಾಗ ಯಾಕೆ ನಗುತ್ತೀಯಾ ಎಂದು ಕೇಳಿದೆ. ನಾನು ಲೈಫ್‌ನಲ್ಲಿ ಯಾರ ಜತೆಗೂ ಜಗಳ ಆಡಲ್ಲʼʼ ಎಂದು ಈ ವೇಳೆ ಸೋನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ʻʻಯಾರಾದರೂ ನನ್ನ ಬಗ್ಗೆ ಮಾತನಾಡುವುದಾದರೆ ಮುಂದೆಯೇ ಮಾತನಾಡಲಿ, ನನ್ನ ಬಗ್ಗೆ ಹಿಂದೆ ಮಾತನಾಡಿದರೆ ಸಹಿಸಲಾಗುವುದಿಲ್ಲʼʼ ಎಂದು ಸಹ ಅಕ್ಷತಾ ಬಳಿ ಸೋನು ಬಗ್ಗೆ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಫೂರ್ತಿ, ʻʻನಾನು ಎಲ್ಲರ ಜತೆ ಖುಷಿ ಖುಷಿಯಾಗಿ ನಗುತ್ತಲೇ ಮಾತನಾಡುತ್ತಿದ್ದೇನೆ. ಹಳೇ ಟಾಪಿಕ್‌ ಇಟ್ಟುಕೊಂಡು ಸೋನು ಈಗ ಜಗಳಕ್ಕೆ ಬರುತ್ತಿದ್ದಾರೆ. ನಗುತ್ತಲೇ ಕೇಳುವುದರಲ್ಲಿ ತಪ್ಪೇನಿದೆ? ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಈ ಬಗ್ಗೆ ಸ್ಫೂರ್ತಿ ಬಳಿ ಮಾತನಾಡಿರುವ ರಾಕೇಶ್‌, ʻಸೋನು ಸ್ಥಾನದಲ್ಲಿ ನೋಡಿದಾಗ ಅವಳದ್ದೇ ಸರಿ ಇದ್ದು, ನಿನ್ನದೇ ತಪ್ಪು ಎಂದುʼʼ ಹೇಳಿದ್ದಾರೆ. ಆದರೆ, ಸ್ಫೂರ್ತಿ ಸುಮ್ಮನಾಗಿದ್ದಾರೆ. ಲೋಕೇಶ್‌ ಎಂಟ್ರಿ ಕೊಟ್ಟು ಇಬ್ಬರ ಜಗಳ ತಪ್ಪಿಸಿದ್ದಾರೆ.

ಸೋನು ಗೌಡ ಬಿಗ್‌ಬಾಸ್‌ ಕ್ಯಾಮೆರಾ ಮುಂದೆ ನಿಂತು, “ಇಲ್ಲಿ ಕೆಲವೊಬ್ಬರು ಮೆಚ್ಚಿಸಲು ಬಂದಿದ್ದಾರೆ. ಹಾಗೇ ವಯಸ್ಸಿನ ಆಧಾರದ ಮೇಲೆ ಮಾತನಾಡಿಸುತ್ತಾರೆʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಮಲತಂದೆ ಕುರಿತ ಕಹಿ ಸತ್ಯ ಬಿಚ್ಚಿಟ್ಟ ಸಾನ್ಯ ಅಯ್ಯರ್‌!

Exit mobile version