ಬೆಂಗಳೂರು : ಬಿಗ್ ಬಾಸ್ ಸೀಸನ್ 9ರ (Bigg Boss Kannada) ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಕ್ಯಾಪ್ಟನ್ಸಿ ಟಾಸ್ಕ್ ಗೋಲ್ಡ್ ಮೈನ್ ಕುರಿತು ಮಾತನಾಡಿದ್ದಾರೆ. ತಪ್ಪು ಸರಿಗಳ ಬಗ್ಗೆ ಚರ್ಚೆಗಳನ್ನು ಮಾಡಿದ್ದಾರೆ. ದರ್ಶ್‌ಗೆ ಆಟದ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಕಿಚ್ಚ ಮಾತನಾಡಿ ʻʻಟಾಸ್ಕ್ ವಿಚಾರದಲ್ಲಿ ಆರು ಜನ ಮಾತ್ರ ಗೋಲ್ಡ್ ಮೈನ್ ಒಳಗೆ ಹೋಗಬೇಕಿತ್ತು. ಆದರೆ, 7 ಜನ ಒಳಗೆ ಹೋದರು. ಆರ್ಯವರ್ಧನ್ 7 ಜನರ ಲೆಕ್ಕ ಬರೆದುಕೊಂಡಿದ್ದೀರಿ..‘ಬಿಗ್ ಬಾಸ್’ ಲೆಟರ್ ಕಳುಹಿಸುವವರೆಗೂ ನಿಮಗೆ ಗೊತ್ತಾಗಲಿಲ್ವಾ? ಇಲ್ಲ ಎಡವಟ್ಟಾಯ್ತಾ? ಅಸಲಿಗೆ ನಡೆದಿದ್ದೇನು? ಲೆಕ್ಕ ಬರೆಯುವಾಗ ಗೊತ್ತಾಗಲಿಲ್ವಾ? ಅದೂ ನಂಬರ್ಸ್ ಬಗ್ಗೆ ನಾವು ನಿಮ್ಮ ಬಳಿ ಮಾತನಾಡುತ್ತಿದ್ದೀವಾ? ಎಂದು ಕೇಳಿದರು. ಆರ್ಯವರ್ಧನ್ ಪ್ರತಿಕ್ರಿಯೆ ನೀಡಿ ʻʻಟಾರ್ಚ್ ತಂದುಕೊಡಿ ಅಂದಾಗ ಯಾರೂ ತಂದುಕೊಡಲಿಲ್ಲ. 6 ಜನ ಒಳಗೆ ಹೋಗಬೇಕು ಅಂತ ಹೇಳಿದ್ದರು. 6 ಜನರ ಲೆಕ್ಕ ಮಾತ್ರ ಬರೆಯಿರಿ ಅಂತ ಹೇಳಲಿಲ್ಲ. ಚಿನ್ನ ತಂದವರ ತೂಕ ಬರೆದುಕೊಂಡೆʼʼ.ಎಂದರು.
ಇದನ್ನೂ ಓದಿ | Bigg Boss Kannada | ಇಲ್ಲಿ ಬರೀ ನಾವು ಸೇತುವೆ ಅಷ್ಟೆ: ಅಲ್ಲಿ ಇಲ್ಲದೆ ಇರುವ ಉದ್ದೇಶ ಹೊರಗೆ ಕಾಣಿಸುವುದು ಬೇಡ ಎಂದ ಕಿಚ್ಚ!
ಕಿಚ್ಚ ಸುದೀಪ್ ಮಾತನಾಡಿ ʻʻತಪ್ಪಾಗುವುದರಲ್ಲಿ ತಪ್ಪಿಲ್ಲ. ಅದಾದ ಮೇಲೆ ಬಿಗ್ ಬಾಸ್ ಮತ್ತೊಂದು ಲೆಟರ್ ಕಳುಹಿಸುತ್ತಾರೆ. ದಂಡ ಕಟ್ಟಬೇಕು ಎಂದು. ಕ್ಯಾಪ್ಟನ್ ಆಗಿ ನೀವು ವಸೂಲಿ ಮಾಡಬೇಕಿತ್ತು. ಆ ಪವರ್ ಇತ್ತು ನಿಮಗೆ. ಅದು ಮರೆತು ಕಾಲಿಗೆ ಬೀಳ್ತೀನಿ ಕೊಟ್ಟುಬಿಡು ಅಂತ ಹೇಳಿದ್ದೀರಿ. ಇದು ಸ್ಟ್ರಾಟಜಿ ಅಂತಲೇ ಕಾಣುತ್ತೆʼʼಎಂದರು.
ಆರ್ಯವರ್ಧನ್ ಗುರೂಜಿ ಮಾತನಾಡಿ ʻʻಎಲ್ಲರೂ ವಾದ ಮಾಡುತ್ತಾರೆ. ಬೇಗ ಬಗೆಹರಿಯಲ್ಲ ಅಂತ ಕಾಲಿಗೆ ಬೀಳುತ್ತೇನೆ ಕೊಡು ಎಂದು ಕೇಳಿದೆʼʼಎಂದರು. ಕಿಚ್ಚ ಸುದೀಪ್ ಮಾತನಾಡಿ ʻʻಕೊಡಬೇಕಾಗಿರೋದು ದಂಡʼʼಎಂದರು.
ದರ್ಶ್ ನಂತರ ಮಾತನಾಡಿ ʻನಾನು ಮೊದಲು ವಾದ ಮಾಡಿದೆ. ಆಮೇಲೆ ಒಂದೈದು ನಿಮಿಷ ಟೈಮ್ ಕೊಡಿ ಎಂದು ಕೇಳಿದೆ. ಎಲ್ಲರೂ ಮುಗಿಬಿದ್ದಾಗ. ಗುರೂಜಿ ಹಾಗೆ ಕೇಳಿದಾಗ., ಕೊಟ್ಟುಬಿಟ್ಟೆ. 5 ನಿಮಿಷ ಟೈಮ್ ಕೊಟ್ಟಿದ್ದರೆ, ನಾನೇ ಎಲ್ಲವನ್ನೂ ಕೊಟ್ಟುಬಿಡುತ್ತಿದ್ದೆ. ಕಾಲಿಗೆ ಬೀಳುತ್ತೇನೆ ಎಂದು ಹೇಳಿದ್ದಕ್ಕೆ ಕೊಟ್ಟೆ ಅಂತಲ್ಲ. ಕಾಲ ಒಟ್ಟಿಗೆ ಕೂಡಿ ಬಂತು. ನನ್ನದೂ ತಪ್ಪಿತ್ತುʼʼಎಂದರು.
ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಯಾರು ಬಂಗಾರ, ಯಾರು ಕಾಗೆ ಬಂಗಾರ: ಈ ಮೂವರು ಸೇಫ್!