ಬೆಂಗಳೂರು: ಬಿಗ್ ಬಾಸ್ ಸೀಸನ್ 9 (Bigg Boss Kannada) ಶುರುವಾಗಿ ಒಂದು ವಾರ ಕಳೆದಿದೆ. 18 ಸ್ಪರ್ಧಿಗಳಲ್ಲಿ 12 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ವಾರ “ವಾರದ ಕಥೆ ಕಿಚ್ಚನ ಜತೆ” ವೀಕೆಂಡ್ ಪಂಚಾಯಿತಿಯಲ್ಲಿ ಎಲಿಮಿನೇಟ್ ಯಾರು ಆಗುತ್ತಾರೆ ಎಂಬುದು ತಿಳಿಯಲಿದೆ.
18 ಸ್ಪರ್ಧಿಗಳಲ್ಲಿ ಆರ್ಯವರ್ಧನ್ ಗುರೂಜಿ, ದರ್ಶ್ ಚಂದ್ರಪ್ಪ, ದಿವ್ಯಾ ಉರುಡುಗ, ಐಶ್ವರ್ಯ ಪಿಸೆ, ಪ್ರಶಾಂತ್ ಸಂಬರಗಿ, ವಿನೋದ್ ಗೊಬ್ಬರಗಾಲ, ಅರುಣ್ ಸಾಗರ್, ನವಾಜ್, ಸಾನ್ಯ, ಮಯೂರಿ, ರೂಪೇಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಗೌಡ ನಾಮಿನೇಟ್ ಆಗಿದ್ದರು. ನೂರು ದಿನಗಳ ಕಾಲ ನಡೆಯಲಿರುವ ಬಿಗ್ ಬಾಸ್ ಶೋನಲ್ಲಿ ವಾರಕ್ಕೆ ಒಬ್ಬ ಸದಸ್ಯ ಎಲಿಮಿನೇಟ್ ಆಗುತ್ತಾರೆ. ಇದರಲ್ಲಿ ಮೊದಲ ವಾರದಲ್ಲೇ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ.
ಇದನ್ನೂ ಓದಿ | Bigg Boss kannada | ಬಿಗ್ ಬಾಸ್ ಆರನೇ ದಿನದ ಇಂಟ್ರೆಸ್ಟಿಂಗ್ ಕಥೆಗಳು!
ಮೊದಲ ವಾರದಲ್ಲೇ ಕ್ಯಾಪ್ಟನ್‌ಶಿಪ್‌ಗಾಗಿ ಸ್ಪರ್ಧಿಗಳು ಹರಸಾಹಸ ಪಟ್ಟಿದ್ದರು. ಹಾಗೇ ಹಲವು ಟಾಸ್ಕ್‌ಗಳನ್ನು ನಿಭಾಯಿಸಿದ್ದರು. ಸೀಸನ್ 9ರ ಮೊದಲ ಕ್ಯಾಪ್ಟನ್ ಆಗಿ ವಿನೋದ್ ಗೊಬ್ಬರಗಾಲ ಆಯ್ಕೆಯಾಗಿದ್ದಾರೆ. ಅರುಣ್ ಸಾಗರ್ ಮೊದಲನೇ ವಾರ ಉತ್ತಮ ಪ್ರದರ್ಶನಕಾರನಾಗಿ ಹೊರಹೊಮ್ಮಿದ್ದಾರೆ. ರೂಪೇಶ್ ರಾಜಣ್ಣ ಕಳಪೆ ಪ್ರದರ್ಶನ ತೋರಿದ್ದಾರೆ.
ಇದನ್ನೂ ಓದಿ | Bigg Boss Kannada | ಪ್ರಾಸದಿಂದ ಮಾತು ಮಾತಿನ ಚಕಮಕಿ : ವಿನೋದ್-ಕಾವ್ಯಶ್ರೀ ನಡುವೆ ವಾರ್!