Site icon Vistara News

Bigg Boss Kannada | ಇನ್ನು ಮುಂದೆ ವಾರಾಂತ್ಯದ ಎಪಿಸೋಡ್‌ಗಳು ರಾತ್ರಿ 9ಕ್ಕೆ ಪ್ರಸಾರ: ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9 (Bigg Boss Kannada) ದಿನೇದಿನೆ ವೀಕ್ಷಕರಿಗೆ ಕುತೂಹಲ ಹುಟ್ಟಿಸುತ್ತಿದೆ. ಒಂಟಿ ಮನೇಲಿ ದೊಡ್ಡ ದೊಡ್ಡ ಮಂದಿ ಉದ್ದುದ್ದ ಅಡ್ಡಡ್ಡ ಮಲಗಿ ಅದಾಗಲೇ ಹದಿನೈದು ದಿನಗಳು ಕಳೆದಿವೆ. ಇದೀಗ ಬಿಗ್‌ ಬಾಸ್‌ ವೀಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಬಿಗ್‌ಬಾಸ್ ವಾರಾಂತ್ಯದ ಎಪಿಸೋಡ್‌ಗಳು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಕೆಲವರಿಗೆ ಅರುಣ್‌ ಸಾಗರ್‌ ಇಷ್ಟವಾದರೆ ಇನ್ನು ಕೆಲವರಿಗೆ ವಿನೋದ್‌ ಗೊಬ್ಬರಗಾಲ. ಮತ್ತಷ್ಟು ಜನರಿಗೆ ಅನುಪಮಾ, ಬೇರೆಯವರಿಗೆ ಪ್ರಶಾಂತ್ ಸಂಬರಗಿ. ರೂಪೇಶ್ ರಾಜಣ್ಣ, ಸಾನಿಯಾ, ದೀಪಿಕಾ ದಾಸ್- ಹೀಗೆ ಒಬ್ಬೊಬ್ಬರಿಗೆ ಒಬ್ಬೊಬ್ಬರು ಇಷ್ಟವಾಗುತ್ತಿದ್ದಾರೆ. ಇವರೆಲ್ಲರೂ ಆಡುವ ಆಟವನ್ನು ನೋಡಿ ವಾರಕ್ಕೊಮ್ಮೆ ಮಾತಾಡಿಸಿ ತಿದ್ದಿ ತೀಡುವ ಕಿಚ್ಚ ಸುದೀಪ್ ಮಾತುಗಳನ್ನು ಕೇಳಲು ವೀಕ್ಷಕರೆಲ್ಲರೂ ಕಾಯುತ್ತಿರುತ್ತಾರೆ. ಹೀಗಾಗಿ ಈ ವಾರದಿಂದ “ವಾರದ ಕತೆ ಕಿಚ್ಚನ ಜೊತೆ” ಹಾಗೂ ”ಸೂಪರ್ ಸಂಡೆ ವಿತ್‌ ಸುದೀಪ” ಎಪಿಸೋಡ್‌ಗಳು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ವಾರದ ಪ್ರತಿ ದಿನ ಬಿಗ್‌ಬಾಸ್ ರಾತ್ರಿ 9.30ಕ್ಕೆ ಪ್ರಸಾರವಾದರೂ ವಾರಾಂತ್ಯದ ಎಪಿಸೋಡ್‌ಗಳು ಮಾತ್ರ ರಾತ್ರಿ 9 ಗಂಟೆಗೆ ವೀಕ್ಷಕರ ಮುಂದೆ ಬರಲಿವೆ.

ಇದನ್ನೂ ಓದಿ | Bigg Boss Kannada | ಕಾವ್ಯಶ್ರೀ ಮಚ್ಚೆಗೆ ಆರ್ಯವರ್ಧನ್‌ ಭವಿಷ್ಯ: ಕ್ಯಾಮೆರಾ ಸ್ವಲ್ಪ ತಿರುಗಣ್ಣ ಅಂದ್ರು ರಾಜಣ್ಣ!


ಈಗಾಗಲೇ ಮೊದಲ ಎರಡು ವಾರ ಐಶ್ವರ್ಯ ಪಿಸೆ ಹಾಗೂ ನವಾಜ್ ಬಿಗ್‌ಬಾಸ್‌ನಿಂದ ಹೊರನಡೆದಿದ್ದಾರೆ. ಈ ವಾರ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರಿಗೆ ಇದೆ.

ಇದನ್ನೂ ಓದಿ | Bigg Boss Kannada | ಈ ವಾರದ ಕ್ಯಾಪ್ಟನ್‌ ರೇಸ್‌ನಲ್ಲಿ ಈ ಮೂವರು ಸ್ಪರ್ಧಿಗಳು!

Exit mobile version