Site icon Vistara News

Bigg Boss Kannada | ರೂಪೇಶ್‌ ರಾಜಣ್ಣ -ದಿವ್ಯಾ ನಡುವಿನ ಭಿನ್ನಾಭಿಪ್ರಾಯಕ್ಕೆ ಕಿಚ್ಚ ಸುದೀಪ್‌ ನೀಡಿದ ಸ್ಪಷ್ಟನೆ ಏನು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada ) ಸ್ಪರ್ಧಿಗಳು 50 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ರೂಪೇಶ್‌ ರಾಜಣ್ಣ, ಅನುಪಮಾ ಗೌಡ, ದೀಪಿಕಾ ದಾಸ್‌, ದಿವ್ಯಾ ಉರುಡುಗ ಹಾಗೂ ಆರ್ಯವರ್ಧನ್‌, ಅಮೂಲ್ಯ , ಅರುಣ್‌ ಸಾಗರ್‌ ನಾಮಿನೇಟ್‌ ಆಗಿದ್ದರು. ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಸೇಫ್‌ ಆದ ಇಬ್ಬರು ಸ್ಪರ್ಧಿಗಳನ್ನು ಅನೌನ್ಸ್‌ ಮಾಡಿದ್ದಾರೆ. ಈ ವಾರ ದಿವ್ಯಾ ಉರುಡುಗ ಮತ್ತು ಅರುಣ್‌ ಸಾಗರ್‌ ಸೇಫ್‌ ಆಗಿದ್ದಾರೆ. ʻವಾರದ ಕಥೆ ಕಿಚ್ಚನ ಜೊತೆʼಯಲ್ಲಿ ಸುದೀಪ್‌ ಅವರು ರೂಪೇಶ್‌ ರಾಜಣ್ಣ ಮತ್ತು ದಿವ್ಯಾ ನಡುವೆ ಆದ ಮನಸ್ತಾಪಗಳ ಕುರಿತು ಚರ್ಚೆ ಮಾಡಿದ್ದಾರೆ.

ಫೇಕ್‌ ಮತ್ತು ರಿಯಲ್‌ ಟಾಸ್ಕ್‌ನಲ್ಲಿ ರೂಪೇಶ್‌ ರಾಜಣ್ಣ ಅವರ ಮಾತಿನ ಧಾಟಿಯ ಬಗ್ಗೆ ಸುದೀಪ್‌ ಪ್ರಶ್ನಿಸಿದ್ದಾರೆ. ಪ್ರತಿಕ್ರಿಯೆ ನೀಡಿದ ರೂಪೇಶ್‌ ರಾಜಣ್ಣ ʻʻದಿವ್ಯಾ ಅವರ ಮೇಲೆ ಹಾಡಿನ ವಿಚಾರವಾಗಿ ಅಸಮಾಧಾನ ಆಯ್ತು. ʻನಗುವ ನಯನ ಹಾಡನ್ನುʼ ನಾನು ಆಯ್ಕೆ ಮಾಡಿದ್ದೆ. ಇನ್ನೇನು ಹಾಡಬೇಕು ಎನ್ನುವಷ್ಟರಲ್ಲಿ ಸೀನ್‌ ಕ್ರಿಯೇಟ್‌ ಮಾಡಿದ್ದರು ದಿವ್ಯಾ. ಇನ್ನೊಂದು ಗ್ಲಾಸ್‌ ವಿಚಾರಕ್ಕೆ ನನಗೆ ಬೇಸರವಾಯ್ತು. ಗ್ಲಾಸ್‌ ಒಡೆದಿದಕ್ಕೆ ಶೌಚಾಲಯ ಕ್ಲೀನ್‌ ಮಾಡಿ ಎಂದು ದೀಪಿಕಾ ದಾಸ್‌ ಹೇಳುತ್ತಾರೆ. ಆಗ ದಿವ್ಯಾ ಅವರು ಬಂದು ನನಗೆ ಸಪೋರ್ಟ್‌ ಮಾಡುತ್ತಾರೆ. ನನಗೆ ಅನ್ನಿಸಿದ್ದು, ಇವರೇ ಏನೋ ಒಡೆದು ಹಾಕಿದ್ದಾರೆ. ತನ್ನ ಮೇಲೆ ಎಲ್ಲಿ ಶಿಕ್ಷೆ ಬರುತ್ತೋ ಎಂದು ಸಪೋರ್ಟ್‌ ಮಾಡಿದ್ದರು ಅಂದುಕೊಂಡೆ. ಈ ಎಲ್ಲ ಘಟನೆಗಳ ಮೇರೆಗೆ ಅವರಿಗೆ ಸಮಯ ಸಾಧಕಿ ಎಂದೆʼನಎಂದರು.

ಇದನ್ನೂ ಓದಿ | Bigg Boss Kannada | ಅಭಿಮಾನಿಗಳ ವೋಟ್ ಸೆಳೆಯಲು ಸ್ಕೆಚ್‌ ಹಾಕ್ತಿದ್ದಾರಾ ಆರ್ಯವರ್ಧನ್‌-ರೂಪೇಶ್‌ ಶೆಟ್ಟಿ!

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಿವ್ಯಾ ʻʻನಾನು ಎಲ್ಲಿಯೂ ಸಹ ಒಬ್ಬಳೇ ಹಾಡಿಲ್ಲ. ನನ್ನ ಹಾಡು ಎಂದು ಎಲ್ಲಿಯೂ ಹೇಳಿಲ್ಲ. ಗ್ಲಾಸ್‌ ವಿಚಾರ ಕೂಡ ಮೊನ್ನೆ ಅವರು ಹೇಳಿದ ಮೇಲೆ ಅಂದುಕೊಂಡೆ, ಹೀಗೂ ಇವರು ಯೋಚನೆ ಮಾಡಿದ್ದಾರೆ ಎಂದು. ಲೋಟ ಒಡೆದು ಬೇರೆಯವರ ಮೇಲೆ ಆಪಾದನೆ ಹೊರಿಸುವ ಮನಸ್ಥಿತಿ ನನಗಿಲ್ಲ. ತಪ್ಪಿದ್ದರೆ ನಾನು ಒಪ್ಪಿಕೊಳ್ಳುತ್ತೇನೆʼʼಎಂದರು.

ಸುದೀಪ್‌ ಅವರು ರೂಪೇಶ್‌ ರಾಜಣ್ಣ ಅವರಿಗೆ ಪ್ರತಿಕ್ರಿಯೆ ನೀಡಿ ʻʻದಿವ್ಯಾ ಅವರು ಎರಡು ವಾರಗಳ ಹಿಂದೆ ಪ್ರಶಾಂತ್‌ ಮತ್ತು ಸಾನ್ಯ ಅವರು ನಿಮಗೆ ಪ್ರ್ಯಾಂಕ್‌ ಮಾಡುವ ಸಂದರ್ಭದಲ್ಲಿ ನಿಮ್ಮ ಪರ ನಿಂತಿದ್ದರು. ಇಡೀ ಮನೆಯವರ ಜತೆ ನಿಮ್ಮ ಜಗಳ ಆಗಿದೆ. ವೇದಿಕೆ ಮೇಲೆ ನಿಂತು ಹಾಡು ಹಾಡುತ್ತೀರಿ. ʻನಗುವ ನಯನ ಮಧುರ ಮೌನʼ ಈ ಹಾಡಿನ ಸಾಹಿತ್ಯವನ್ನು ಇನ್ನೊಂದು ಸಲ ಪ್ರೀತಿಸಿ. ಅದರ ಅರ್ಥ ತಿಳಿದುಕೊಳ್ಳಿ. ಹಾಗೇ ಗ್ಲಾಸ್‌ ಒಡೆದು ಹಾಕಿದ್ದು ದಿವ್ಯಾ ಅಲ್ಲ ಅದು ರೂಪೇಶ್‌ ರಾಜಣ್ಣ. ಬಿಗ್‌ ಬಾಸ್‌ ಕ್ಯಾಮೆರಾ ಸುಳ್ಳು ಹೇಳುವುದಿಲ್ಲʼʼಎಂದು ಸುದೀಪ್‌ ಸ್ಪಷ್ಟನೆ ನೀಡಿದರು.

ಏನಿದು ಮುನಿಸು?
ಹಿಂದಿನ ಸಂಚಿಕೆಯಲ್ಲಿ ದಿವ್ಯಾ ಉರುಡುಗ ಹಾಗೂ ರೂಪೇಶ್ ರಾಜಣ್ಣ ಅವರು ಒಂದು ಹಾಡು ಹಾಡಿದ್ದರು. ಆ ಹಾಡಿನ ಸಾಹಿತ್ಯ ರಚಿಸಿದ್ದು, ಟ್ಯೂನ್ ಹಾಕಿದ್ದು ರೂಪೇಶ್ ರಾಜಣ್ಣ ಎಂದು ಹೇಳಿಕೊಂಡಿದ್ದರು. ʻʻಎಲ್ಲಿಯೂ ಕೂಡ ಇದನ್ನು ಬರೆದಿದ್ದು ನಾನು, ಟ್ಯೂನ್ ಹಾಕಿದ್ದು ನಾನು ಎಂದು ದಿವ್ಯಾ ಹೇಳಲಿಲ್ಲ, ತನ್ನ ಹಾಡು ಅಂತಲೇ ಬಿಂಬಿಸಿಕೊಂಡರುʼʼ ಎಂದು ರೂಪೇಶ್ ರಾಜಣ್ಣ ಅವರು ದಿವ್ಯಾ ಅವರಿಗೆ ಫೇಕ್ ಎಂಬ ಪಟ್ಟ ನೀಡಿದ್ದರು.

ಇದನ್ನೂ ಓದಿ | Bigg Boss Kannada | ಕಳಪೆ ಕೊಡುವ ವೇಳೆ ರೂಪೇಶ್‌ ರಾಜಣ್ಣಗೆ ದಿವ್ಯಾ ತಿರುಗೇಟು: ಹೇಗಿತ್ತುಆರ್ಯವರ್ಧನ್‌ ಏಕಪಾತ್ರಾಭಿನಯ?

Exit mobile version