Site icon Vistara News

Bigg Boss Kannada | ಅಪ್ಪು ನೆನೆದು ಹಾಡು ಹಾಡಿದ ಸ್ಪರ್ಧಿಗಳು: ಅರುಣ್‌ ಸಾಗರ್‌ ಪೇಂಟಿಂಗ್‌ ಅರ್ಥ ಏನು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) 32ನೇ ದಿನ ಸ್ಪರ್ಧಿಗಳು ದೀಪಾವಳಿಯನ್ನು ಮನರಂಜನಾ ಕಾರ್ಯಕ್ರಮದ ಮೂಲಕ ಆಚರಿಸಿದರು. ತಯಾರಿ ಕೂಡ ಅಷ್ಟೇ ಜೋರಾಗಿದ್ದು, ರೂಪೇಶ್‌ ಶೆಟ್ಟಿ ನಿರೂಪಣೆ ಮತ್ತು ಅರುಣ್‌ ಸಾಗರ್‌ ಅವರ ಪೇಟಿಂಗ್‌ ಸಖತ್‌ ಹೈಲೈಟ್‌ ಆಗಿತ್ತು.

ರೂಪೇಶ್‌ ಶೆಟ್ಟಿ ಅವರು ಅರುಣ್‌ ಸಾಗರ್‌ ಅವರು ಬಿಡಿಸಿದಂತಹ ಪೇಂಟಿಂಗ್‌ ಕುರಿತು ವಿವರಣೆ ಕೇಳಿದರು. ಅರುಣ್‌ ಸಾಗರ್‌ ಮಾತನಾಡಿ ʻʻಈ ಚಿತ್ರದಲ್ಲಿ ನಾವು ಬಿಗ್‌ ಬಾಸ್‌ ಎನ್ನುವ ಗರ್ಭದಲ್ಲಿ ಇದ್ದೇವೆ. ಅದು ನಮ್ಮನ್ನು ಕಣ್ಣಾಗಿ ನೋಡಿಕೊಳ್ಳುತ್ತಾ ಸರಿ ದಾರಿಗೆ ಕರೆದುಕೊಂಡು ಹೋಗುತ್ತದೆ. ನಮ್ಮ ಕಣ್ಣು ತೆರೆಸುವ ಬೆಳಕು ಈ ಬಿಗ್‌ ಬಾಸ್‌. ಜತೆಗೆ ನಮ್ಮಲ್ಲಿರುವಂತಹ ಯಾವುದೇ ಟ್ಯಾಲೆಂಟ್‌, ಒಳ್ಳೆಯತನವನ್ನು ಜಗತ್ತಿಗೆ ತೋರಿಸುವಂತಹ ಕಣ್ಣು. ದೇವರ ಕಣ್ಣು ಎನ್ನಬಹುದು. ಇಲ್ಲಿರುವುದು ಪ್ರತಿಯೊಬ್ಬರ ಭಾವಗಳು. ಒಬ್ಬರಲ್ಲಿಯೇ 18 ಭಾವಗಳೂ ಇರಬಹುದು. ಆ ತರಹ ಬದುಕುವ ಕ್ಯಾನೆಪ್ಟ್‌ʼʼ ಎಂದರು.

ಇದನ್ನೂ ಓದಿ | Bigg Boss Kannada | ಮನೆಯ ಕನ್‌ಫ್ಯೂಷನ್‌ಗಳಿಗೆ ರೂಪೇಶ್‌ ರಾಜಣ್ಣ ಕಿವಿ ಕಾರಣ ಎಂದ ಪ್ರಶಾಂತ್‌!

ಪ್ರತಿ ಸ್ಪರ್ಧಿಗಳು ಕಲರ್‌ ಹಸ್ತದ ಮೂಲಕ ಪೇಂಟಿಂಗ್‌ ಬೋರ್ಡ್‌ಗೆ ಕೈ ಇಟ್ಟು ಇನ್ನಷ್ಟು ಮೆರುಗುಗೊಳಿಸಿದರು. ಕೊನೆಯಲ್ಲಿ ಪುನೀತ್‌ ರಾಜಕುಮಾರ್‌ ಅವರನ್ನು ನೆನೆದು ಸ್ಪರ್ಧಿಗಳು ʻಬಾನದಾರಿಯಲ್ಲಿ ಸೂರ್ಯ ಜಾರಿ ಹೋದʼ ಹಾಡು ಹಾಡಿದರು.

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಮೂರು ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಅನುಪಮಾ ಗೌಡ, ಅಮೂಲ್ಯ ಮತ್ತು ವಿನೋದ್‌ ಗೊಬ್ಬರಗಾಲ ಸೆಲೆಕ್ಟ್‌ ಆಗಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಯಾರು ಮನೆಯ ಕ್ಯಾಪ್ಟನ್‌ ಆಗಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ಪ್ರ್ಯಾಂಕ್‌ ಮಾಸ್ಟರ್‌ ರಾಕೇಶ್‌ ಅಡಿಗ ರ್‍ಯಾಪ್‌ ಹಾಡಿನ ಹೂರಣ: ವೈರಲ್‌ ಆಯ್ತು ವಿಡಿಯೊ!

Exit mobile version