Site icon Vistara News

Bigg Boss Kannada | ಸೇಫ್‌ ಆದ ಸ್ಪರ್ಧಿಗಳು ಯಾರು? ಆಟದ ಕುರಿತು ಕಿಚ್ಚ ನೀಡಿದ ಕ್ಲಾರಿಟಿ ಏನು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಆಟದ ಕುರಿತು ಕ್ಲಾರಿಟಿ ನೀಡಿದ್ದಾರೆ. ಈ ವಾರ ಸಾನ್ಯ, ರೂಪೇಶ್‌ ರಾಜಣ್ಣ, ಆರ್ಯವರ್ಧನ್‌ ಗುರೂಜಿ ಮತ್ತು ದಿವ್ಯಾ ಉರುಡುಗ ನಾಮಿನೇಟ್‌ ಆಗಿದ್ದಾರೆ. ಕ್ಯಾಪ್ಟನ್‌ ಅನುಪಮಾ ಅವರು ರೂಪೇಶ್‌ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು.

ಸದ್ಯಕ್ಕೆ ರೂಪೇಶ್‌ ಶೆಟ್ಟಿ ಮತ್ತು ದಿವ್ಯಾ ಉರುಡುಗ ಈ ವಾರ ಸೇಫ್‌ ಆಗಿದ್ದಾರೆ. ಮನೆಯಿಂದ ಯಾರು ಹೊರಗೆ ಹೋಗಲಿದ್ದಾರೆ ಎಂಬುದು ಭಾನುವಾರ ತಿಳಿಯಲಿದೆ. ಈ ವಾರ ಪ್ರಶಾಂತ್‌ ಸಂಬರಗಿ ಅವರು ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ ವೇಳೆ ಬಝರ್‌ ವಿಚಾರಕ್ಕೆ ಮನೆಯ ಕ್ಯಾಪ್ಟನ್‌ ಅನುಪಮಾ ಮತ್ತು ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ಸಂಬರಗಿ ನಡುವೆ ವಾದಗಳು ನಡೆದಿದ್ದವು. ಈ ಹಿಂದೆ ಬಝರ್‌ ವಿಚಾರವಾಗಿ ಪ್ರಶಾಂತ್‌ ಸಂಬರಗಿ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ವಾರ್‌ ಆಗಿತ್ತು. ಈ ಕುರಿತು ಅನುಪಮಾ ಮೇಲೆಯೂ ರೂಪೇಶ್‌ ರಾಜಣ್ಣ ಕಿಡಿಕಾರಿದ್ದರು. ಈ ವಿಚಾರವಾಗಿ ಕಿಚ್ಚ ಸುದೀಪ್‌ ಅವರು ಸ್ಪಷ್ಟನೆ ನೀಡಿದ್ದು, ಪ್ರಶಾಂತ್‌ ಸಂಬರಗಿ ಅವರೇ ಮೊದಲು ಬಝರ್‌ ಒತ್ತಿರುವುದಾಗಿ ಹೇಳಿದ್ದಾರೆ. ಬಳಿಕ ರೂಪೇಶ್‌ ರಾಜಣ್ಣ ಅವರು ಅನುಪಮಾ ಮತ್ತು ಪ್ರಶಾಂತ್‌ ಸಂಬರಗಿ ಅವರಲ್ಲಿ ಕ್ಷಮೆ ಕೇಳಿದರು.

ಇದನ್ನೂ ಓದಿ |Bigg Boss Kannada | ಸಾನ್ಯ ಹಾಡಿನಲ್ಲಿ ಅಪಸ್ವರ: ನಡೆದಿದ್ದೇನು?

ಆಗಿದ್ದೇನು?
ಟಾಸ್ಕ್‌ ಆಗುವಾಗ ಆರಂಭದಿಂದಲೂ ರೂಪೇಶ್‌ ರಾಜಣ್ಣ ಅವರು ಅನುಪಮಾ ಅವರು ಫೇವರ್‌ ಗೇಮ್‌ ಆಡುತ್ತಿದ್ದಾರೆ ಎಂದು ಹೋರಾಟಕ್ಕೆ ಇಳಿದಿದ್ದರು. ಅರುಣ್‌ ಸಾಗರ್‌ ಆಟದಲ್ಲಿಯೂ ಧ್ವನಿ ಎತ್ತಿದ್ದಾಗ, ಅನುಪಮಾ ಮತ್ತು ರೂಪೇಶ್‌ ರಾಜಣ್ಣ ಮಧ್ಯೆ ಗಲಾಟೆ ತಾರಕಕ್ಕೇರಿತ್ತು. ರೂಪೇಶ್‌ ರಾಜಣ್ಣ ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದರು. ಮೊದಲು ಬಝರ್ ಮುಟ್ಟಿದ್ದು ನಾನೇ ಪ್ರಶಾಂತ್‌ ಸಂಬರಗಿ ಅಲ್ಲ ಎಂದು ರೂಪೇಶ್‌ ರಾಜಣ್ಣ ವಾದ ಮಾಡಿದ್ದರು.

ಸಂಬರಗಿ ಅವರ ಬೆನ್ನಿಗೆ ನಿಂತು ಅವರಿಗೆ ಕ್ಯಾಪ್ಟನ್ ಅನುಪಮಾ ಗೌಡ ಸಪೋರ್ಟ್ ಮಾಡಿದ್ದು ರೂಪೇಶ್ ರಾಜಣ್ಣಗೆ ಕೋಪ ತರಿಸಿತ್ತು. ಹಾಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆದಿತ್ತು. ಈ ರೀತಿಯಾದರೆ ನಾನು ಮನೆಯಲ್ಲಿ ಇರಲಾರೆ ಎಂದು ಬ್ಯಾಗ್ ಸಮೇತ ಹೊರಟು ನಿಂತಿದ್ದರು. ಅನುಪಮಾ ಗೌಡ ಮಾತ್ರ ನಾನೇನೂ ತಪ್ಪು ಮಾಡಿಲ್ಲ, ಸುಮ್ಮನೆ ರೂಪೇಶ್ ರಾಜಣ್ಣ ಕೂಗಾಡಿದ್ದರು ಎಂದು ಮನೆಮಂದಿ ಮುಂದೆ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ | Bigg Boss Kannada | ಈ ವಾರದ ಮನೆಯ ಕ್ಯಾಪ್ಟನ್‌ ಪ್ರಶಾಂತ್‌ ಸಂಬರಗಿ: ಉತ್ತಮ ರೂಪೇಶ್‌ ರಾಜಣ್ಣ, ಕಳಪೆ ಯಾರು?

Exit mobile version