Site icon Vistara News

Bigg Boss Kannada | ಮನೆಯಲ್ಲಿ ಯಾರಿಗೆ ಯಾವ ಸ್ಟಾರ್ ಪಟ್ಟ: ಪಿನ್‌ ಸ್ಟಾರ್‌ ಇವರೇ ನೋಡಿ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಐದನೇ ವಾರ ಕಿಚ್ಚ ಸುದೀಪ್‌ ಸ್ಪರ್ಧಿಗಳಿಗೆ ತಮಾಷೆ ಮಾಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸ್ಟಾರ್‌ ಪಟ್ಟ ಕೊಡುವುದಾದರೆ ಯಾರಿಗೆಲ್ಲ ಸ್ಟಾರ್‌ ಪಟ್ಟ ಕೊಡುತ್ತೀರಿ ಎಂದು ಸುದೀಪ್‌ ಸದ್ಯಸ್ಯರಲ್ಲಿ ಕೇಳಿದ್ದಾರೆ. ಪ್ರತಿ ಸ್ಪರ್ಧಿಗಳು ಈ ಬಗ್ಗೆ ಮಜವಾಗಿ ಉತ್ತರ ನೀಡಿದ್ದಾರೆ.

ಅರುಣ್‌ ಸಾಗರ್‌ ಮೊದಲಿಗೆ ಪ್ರಶಾಂತ್‌ ಸಂಬರಗಿ ಅವರಿಗೆ ʻಬೌಬೌ ಸ್ಟಾರ್‌ʼ ಎಂದು ಕರೆದರೆ, ಆರ್ಯವರ್ಧನ್‌ ಅವರಿಗೆ ನವಗ್ರಹ ಇಷ್ಟವಾದ ಕಾರಣ ʻನವ್‌ ಸ್ಟಾರ್‌ʼ ಕೊಡುತ್ತೇನೆ ಎಂದರು. ಸಾನ್ಯ ಅವರು ಕಾವ್ಯಶ್ರೀ ಅವರಿಗೆ ʻಮುಖಕ್ಕೆ ಹೊಡೆಯುವ ಸ್ಟಾರ್‌ʼ ಎಂದು ಹೇಳಿದ್ದು, ʻಮನೆಯಲ್ಲಿ ಹಿಂದೂ ಮುಂದೆ ನೋಡದೇ ಮುಖಕ್ಕೆ ಹೊಡೆದ ಹಾಗೆ ಮಾತನಾಡುತ್ತಾರೆ ಅದ ಕಾರಣ ಅವರಿಗೆ ಈ ಪಟ್ಟ ಕೊಡುತ್ತೇನೆʼ ಎಂದರು. ಸುದೀಪ್‌ ಅವರು ಈ ಬಗ್ಗೆ ʻಅನುಭವದ ಮಾತುʼ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ | Bigg Boss Kannada | ಕಿಚ್ಚ ಸ್ಟೈಲ್‌ಗೆ ಅಭಿಮಾನಿಗಳ ಮೆಚ್ಚುಗೆ, ಐದು ವಾರಗಳ ಅವರ ಗೆಟಪ್‌ ಇಲ್ಲಿದೆ ನೋಡಿ

ರೂಪೇಶ್‌ ರಾಜಣ್ಣ ಅವರಿಗೆ ʻಕಂಟಿನಿಟಿ ಸ್ಟಾರ್‌ʼ ಕೊಡಲು ಇಷ್ಟ ಪಡುತ್ತೇನೆ ಎಂದು ರೂಪೇಶ್‌ ಶೆಟ್ಟಿ ಹೇಳಿದರು. ರೂಪೇಶ್‌ ಶೆಟ್ಟಿ ಮಾತನಾಡಿ ʻʻಪ್ರತಿ ಬಾರಿ ಮನೆಯಲ್ಲಿ ಏನೇ ಜಗಳ ಆದರೂ ಕೂಡ, ಅಲ್ಲಿಗೆ ನಿಂತರೆ ಮತ್ತೆ ನೆನೆಸಿಕೊಂಡು ಜಗಳ ಶುರು ಮಾಡುತ್ತಾರೆ. ಎಲ್ಲಿ ಪ್ರಾರಂಭವಾಗಿದೆಯೋ ಅದನ್ನು ನೆನಪಲ್ಲಿ ಇಟ್ಟುಕೊಂಡು, ಅಲ್ಲಿಂದಲೇ ಶುರು ಮಾಡುತ್ತಾರೆʼʼ ಎಂದರು. ಇದನ್ನು ಕೇಳಿ ಸುದೀಪ್‌ ಅವರು ಜೋರಾಗಿ ನಕ್ಕರು.

ದೀಪಿಕಾ ದಾಸ್‌ ಅವರು ಪ್ರಶಾಂತ್‌ ಸಂಬರಗಿ ಅವರಿಗೆ ʻಪಿನ್‌ ಸ್ಟಾರ್‌ʼ ಕೊಡುತ್ತೇನೆ ಎಂದು ಹೇಳಿದರು. ʻಮನೆಯಲ್ಲಿ ಯಾರ ಮಧ್ಯೆ ಜಗಳವಾದರೂ ಮಧ್ಯೆ ಹೋಗಿ ಫಿಟ್ಟಿಂಗ್‌ ಇಡುವ ಕೆಲಸ ಮಾಡುತ್ತಾರೆʼ ಎಂದರು. ಪ್ರಶಾಂತ್‌ ಸಂಬರಗಿ ಅವರು ರೂಪೇಶ್‌ ರಾಜಣ್ಣ ಅವರಿಗೆ ʻಇರಿಟೇಟಿಂಗ್‌ʼ ಹಾಗೂ ʻರಿಪಿಟೇಟಿವ್‌ ಸ್ಟಾರ್‌ʼ ಕೊಡುತ್ತೇನೆ ಎಂದರು. ʻಮನೆಯಲ್ಲಿ ಹೇಳಿದ್ದನ್ನೇ ಹೇಳಿ ತಲೆ ತಿನ್ನುತ್ತಾರೆʼ ರೂಪೇಶ್‌ ರಾಜಣ್ಣ ಎಂದು ಕಾರಣ ಕೊಟ್ಟರು.

ಇದನ್ನೂ ಓದಿ | Bigg Boss Kannada | ಐದನೇ ಸ್ಪರ್ಧಿಯಾಗಿ ಮನೆಯಿಂದ ಹೊರ ನಡೆದ ನೇಹಾ ಗೌಡ!

Exit mobile version