Site icon Vistara News

Bigg Boss Kannada |‌ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆದವರು ಯಾರು? ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದವರು ಇವರೇ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada ) ಏಳನೇ ವಾರ ಕ್ಯಾಪ್ಟನ್ಸಿ ಟಾಸ್ಕ್‌ ಮುಕ್ತಾಯಗೊಂಡಿದೆ. ಈ ವಾರ ಅನುಪಮಾ ಗೌಡ, ಕಾವ್ಯಶ್ರೀ ಗೌಡ ಮತ್ತು ಅಮೂಲ್ಯ ಅವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಟಾಸ್ಕ್‌ ಅನುಸಾರ ರೂಪೇಶ್‌ ರಾಜಣ್ಣ ಮತ್ತು ಆರ್ಯವರ್ಧನ್‌ ಗುರೂಜಿ ಅವರು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್‌ ಆಗಿದ್ದಾರೆ.

ಯಾರು ರಿಯಲ್, ಯಾರು ಫೇಕ್ ಎಂಬ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದಾರೆ. ʻವಿಜಯಪತಾಕೆʼ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದು, ಆಡುವ ಸದಸ್ಯರು ತಮಗೆ ಮೀಸಲಿರುವ ಬಣ್ಣದ ಬಾವುಟಗಳನ್ನು ಕೊಳವೆಯಲ್ಲಿ ಸಿಕ್ಕಿಸಬೇಕು. ಕೊಳವೆಯಲ್ಲಿ ಸಿಕ್ಕಿಸಿ ಎದುರಾಳಿಯಿಂದ ಕಾಪಾಡಿಕೊಳ್ಳಲು 20 ನಿಮಿಷ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಅನುಪಮಾ ವಿಜೇತರಾಗಿದ್ದಾರೆ. ಅನುಪಮಾ ಅವರು ತೀರ್ಪುಗಾರರಾಗಿದ್ದು, ಪ್ರಶಾಂತ್‌ ಸಂಬರಗಿ, ಅರುಣ್‌ ಸಾಗರ್‌, ರೂಪೇಶ್‌ ರಾಜಣ್ಣ, ವಿನೋದ್‌ ಗೊಬ್ಬರಗಾಲ, ರೂಪೇಶ್‌ ಶೆಟ್ಟಿ ,ಮತ್ತು ಆರ್ಯವರ್ಧನ್‌ ಅವರನ್ನು ಫೇಕ್‌ ಎಂದು ಆಯ್ಕೆ ಮಾಡಿದರು. ಎರಡೂ ತಂಡಗಳ ಚರ್ಚೆಯ ಮೇರೆಗೆ ರೂಪೇಶ್‌ ರಾಜಣ್ಣ ಮತ್ತು ಆರ್ಯವರ್ಧನ್‌ ನಾಮಿನೇಟ್‌ ಆದರು.

ಇದನ್ನೂ ಓದಿ | Bigg Boss Kannada | ಅರುಣ್‌ ಸಾಗರ್‌ ಬಗ್ಗೆ ಅಸಮಾಧಾನ ಹೊರ ಹಾಕಿದ ರೂಪೇಶ್‌ ಶೆಟ್ಟಿ!

ನನ್ನ ದಾರಿ ನನ್ನದು ಟಾಸ್ಕ್‌!
ಎರಡನೇ ಹಂತದಲ್ಲಿ ಬಿಗ್‌ ಬಾಸ್‌ ʻʻನನ್ನ ದಾರಿ ನನ್ನದುʼʼಎನ್ನುವ ಟಾಸ್ಕ್‌ ನೀಡಿದ್ದರು. ಇದರ ಅನುಸಾರ ಗಾರ್ಡನ್‌ ಏರಿಯಾದಲ್ಲಿ ನೆಲದ ಮೇಲೆ ಹಲವು ಹಲಗೆಗಳನ್ನು ಜೋಡಿಸಿ ದೊಡ್ಡ ಷಡ್ಭುಜ ಆಕಾರವನ್ನು ನಿರ್ಮಿಸಲಾಗಿದೆ. ಆ ಹಲಗೆಗಳ ಮೇಲು ಬದಿಯಲ್ಲಿ ಹಳದಿ ಹಾಗೂ ಇನ್ನೊಂದು ಬದಿಯಲ್ಲಿ ನೇರಳೆ ಇದೆ. ಆಡುವ ಸದಸ್ಯರು ಒಬ್ಬರಾದ ಮೇಲೆ ಒಬ್ಬರಂತೆ ತಾವು ನಿಂತ ಹಲಗೆಗೆ ತಾಗಿರುವ ಯಾವುದಾದರೂ ಒಂದು ಹಲಗೆಯನ್ನು ನೇರಳೆ ಭಾಗ ಮೇಲ್ಮುಖವಾಗಿರುವಂತೆ ತಿರುಗಿಸಿ ನಿಲ್ಲುತ್ತ ಸಾಗಬೇಕು. ಒಮ್ಮೆ ನಿಂತ ಹಲಗೆಯ ಮೇಲೆ ಕಾಲಿಡುವಂತಿಲ್ಲ. ಯಾವುದೇ ಹಳದಿ ಬಣ್ಣದ ಹಲಗೆಗಳು ಇಲ್ಲವಾದಲ್ಲಿ ಆ ಸದಸ್ಯ ಔಟ್‌ ಆಗುತ್ತಾನೆ. ಈ ಟಾಸ್ಕ್‌ನಲ್ಲಿ ಅರುಣ್‌ ಸಾಗರ್‌ ಅವರು ವಿಜೇತರಾದರು. ತೀರ್ಪುಗಾರರಾದ ಅರುಣ್‌ ಸಾಗರ್‌ ಅವರು ಆರ್ಯವರ್ಧನ್‌, ರೂಪೇಶ್‌ ಶೆಟ್ಟಿ, ರೂಪೇಶ್‌ ರಾಜಣ್ಣ, ಪ್ರಶಾಂತ್‌ ಸಂಬರಗಿ, ಅಮೂಲ್ಯ ಮತ್ತು ರಾಕೇಶ್‌ ಅವರನ್ನು ಫೇಕ್‌ ಎಂದು ಆಯ್ಕೆ ಮಾಡಿದರು.

ದೀಪಿಕಾ ದಾಸ್‌, ಅನುಪಮಾ ಗೌಡ, ವಿನೋದ್‌ ಗೊಬ್ಬರಗಾಲ, ಕಾವ್ಯಶ್ರೀ ಮತ್ತು ದಿವ್ಯಾ ಉರುಡುಗ ಅವರನ್ನು ರಿಯಲ್‌ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಆರ್ಯವರ್ಧನ್‌ ಬಗ್ಗೆ ಮಾತನಾಡುವಾಗ ಅಪ್ಪನನ್ನು ನೆನೆದು ಅರುಣ್‌ ಸಾಗರ್‌ ಅವರು ಕಣ್ಣೀರು ಹಾಕಿದರು.

ರಿಂಗಾ ರಿಂಗಾ ರೇ ಟಾಸ್ಕ್‌!
ಮೂರನೇ ಹಂತದಲ್ಲಿ ʻರಿಂಗಾ ರಿಂಗಾ ರೇʼ ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಇದರ ಅನುಸಾರ ಸದಸ್ಯರು ಆರಂಭಿಕ ಸ್ಥಾನದಲ್ಲಿ ನಿಂತು ಒಂದೊಂದು ಮರದ ರಿಂಗ್‌ ಅನ್ನು ಕೈಯಲ್ಲಿ ಹಿಡಿದುಕೊಂಡು ಅದರೊಳಗೆ ಒಂದು ಚೆಂಡನ್ನು ಇಡಬೇಕು. ರಿಂಗನ್ನು ಅಲ್ಲಾಡಿಸುತ್ತಾ ಅದರೊಳಗೆ ಇರುವ ಚೆಂಡನ್ನು ಸುತ್ತುವಂತೆ ಮಾಡಬೇಕು. ಅಂತಿಮ ಸ್ಥಾನದಲ್ಲಿ ಇರುವ ಪೆಡಸ್ಟ್ರಲ್‌ ಮೇಲೆ ಚೆಂಡನ್ನು ಇಡಬೇಕು. ಈ ಸುತ್ತಿನಲ್ಲಿ ಅಮೂಲ್ಯ ಅವರು ವಿಜೇತರಾದರು. ತೀರ್ಪುಗಾರರದ ಅಮೂಲ್ಯ ಅವರು ಕಾವ್ಯಶ್ರೀ, ದಿವ್ಯಾ ಉರುಡುಗ, ರಾಕೇಶ್‌ ಅಡಿಗ, ಅನುಪಮಾ ಗೌಡ ಮತ್ತು ದೀಪಿಕಾ ದಾಸ್‌ ಅವರನ್ನು ರಿಯಲ್‌ ಎಂದು ಆಯ್ಕೆ ಮಾಡಿದರು. ವಿನೋದ್‌ ಗೊಬ್ಬರಗಾಲ, ಆರ್ಯವರ್ಧನ್‌, ಅರುಣ್‌ ಸಾಗರ್‌, ಪ್ರಶಾಂತ್‌ ಸಂಬರಗಿ ಮತ್ತು ರೂಪೇಶ್‌ ಶೆಟ್ಟಿ ಫೇಕ್‌ ಎಂದು ಘೋಷಿಸಿದರು. ಈ ಹಂತದಲ್ಲಿ ರೂಪೇಶ್‌ ರಾಜಣ್ಣ ಮತ್ತು ಆರ್ಯವರ್ಧನ್‌ ನೇರವಾಗಿ ನಾಮಿನೇಟ್‌ ಆದರು.

ಪಿರಾಮಿಡ್‌ ಪರಾಕ್ರಮಿ ಟಾಸ್ಕ್‌!
ಈ ವಾರದ ಸರಣಿ ಟಾಸ್ಕ್‌ಗಳಲ್ಲಿ ಕೊನೆಯ ಟಾಸ್ಕ್‌ ʻʻಪಿರಾಮಿಡ್‌ ಪರಾಕ್ರಮಿʼʼಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದು. ತಮ್ಮ ಪಾಲಿನ ಎಲ್ಲಾ ಥರ್ಮಾಕೋಲ್‌ ತುಂಡುಗಳನ್ನು ಬಳಸಿ ಒಂದು ಪಿರಾಮಿಡ್‌ ಕಟ್ಟಬೇಕು. ಒಂದು ಪೂರ್ಣವಾಗಿ ಪಿರಾಮಿಡ್‌ ಕಟ್ಟುವ ಸದಸ್ಯ ವಿಜೇತರಾಗುತ್ತಾರೆ. ಈ ಟಾಸ್ಕ್‌ನಲ್ಲಿ ಆರ್ಯವರ್ಧನ್‌ ವಿನ್‌ ಆದರು. ತೀರ್ಪುಗಾರರಾದ ಆರ್ಯವರ್ಧನ್‌ ಅವರು ಅರುಣ್‌ ಸಾಗರ್‌, ವಿನೋದ್‌ ಗೊಬ್ಬರಗಾಲ, ಕಾವ್ಯಶ್ರೀ, ದೀಪಿಕಾ ದಾಸ್‌ , ಅಮೂಲ್ಯ ಮತ್ತು ದಿವ್ಯಾ ಅವರನ್ನು ಫೇಕ್‌ ಎಂದು ಘೋಷಿಸಿದರು. ಎರಡೂ ತಂಡಗಳ ಚರ್ಚೆಯಲ್ಲಿ ದಿವ್ಯಾ ಉರುಡುಗ ಮತ್ತು ಅರುಣ್‌ ಸಾಗರ್‌ ನಾಮಿನೇಟ್‌ ಆದರು.

ಇದನ್ನೂ ಓದಿ | Bigg Boss Kannada | ರಿಯಲ್‌-ಫೇಕ್‌ ವಾರ್: ಯಾವ ಪಟ್ಟ ಯಾರಿಗೆ?

ಅರುಣ್‌ ಸಾಗರ್‌ ಅವರು ಕಳೆದ ಸಂಚಿಕೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಆರೋಗ್ಯದ ಸಮಸ್ಯೆ ಇದ್ದ ಕಾರಣ ಜೈಲು ವಾಸ ಅನುಭವಿಸಿರಲಿಲ್ಲ. ಈ ಬಾರಿ ಬಿಗ್‌ ಬಾಸ್‌ ಅರುಣ್‌ ಸಾಗರ್‌ ಅವರನ್ನು ಜೈಲಿಗೆ ಕಳುಹಿಸಲು ಆದೇಶ ನೀಡಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಎಂಟನೇ ವಾರದ ಕ್ಯಾಪ್ಟನ್‌ ಯಾರಾಗುತ್ತಾರೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ | Bigg Boss Kannada | ತಲೆ ಸುತ್ತು ಬರಿಸೋ ಗಿರಗಿರ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಮಜಾ: ನಾಮಿನೇಟ್‌ ಆದವರು ಯಾರು?

Exit mobile version