ಬೆಂಗಳೂರು: ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada ) ಕ್ಯಾಪ್ಟನ್ಸಿ ಟಾಸ್ಕ್ ಕುರಿತು ಮನೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ವಿನೋದ್ ಗೊಬ್ಬರಗಾಲ ಎರಡು ಟಾಸ್ಕ್‌ನಲ್ಲಿ ವಿಜೇತರಾದ ಕಾರಣ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆದರು. ಉಳಿದ ಸ್ಪರ್ಧಿಗಳು ಚರ್ಚೆ ಮಾಡಿ ಹೇಳಬೇಕಿತ್ತು. ಆ ಸಮಯದಲ್ಲಿ ರೂಪೇಶ್ ರಾಜಣ್ಣ ಅವರು ಟಾಸ್ಕ್ ಆಡುವ ಮುಖಾಂತರ ಆಯ್ಕೆ ಮಾಡಬೇಕು ಎಂದು ಧ್ವನಿ ಎತ್ತಿದ್ದರು. ಉಳಿದ ಸ್ಪರ್ಧಿಗಳು ವೋಟಿಂಗ್ ಮೂಲಕ ಆಯ್ಕೆ ಮಾಡಬೇಕೆಂದು ಹೇಳಿದರು. ರೂಪೇಶ್ ರಾಜಣ್ಣ ಇದಕ್ಕೆ ಒಪ್ಪಲ್ಲಿಲ್ಲ.
ರೂಪೇಶ್ ರಾಜಣ್ಣ ಅವರಿಗೆ ಮನೆಯ ಸದಸ್ಯರು ಎಷ್ಟೇ ತಿಳಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ರೂಪೇಶ್ ರಾಜಣ್ಣ ಚರ್ಚೆ ಮಾಡುವಾಗ ಮಾತನಾಡಿ ʻʻವೋಟಿಂಗ್ ಮಾಡಿದರೆ, ತಮಗೆ ಇಷ್ಟದ ಸ್ಪರ್ಧಿಗಳಿಗೆ ವೋಟ್ ಹಾಕುತ್ತಾರೆ. ಒಬ್ಬರ ಜತೆ ನಾವೆಲ್ಲೋ ಮನಸ್ತಾಪವಿದ್ದಾಗ, ಆತ ಅವರಿಗಾಗುವರಿಗೆ ವೋಟ್ ನೀಡಬಹುದು.ಇದಕ್ಕೆ ನನಗೆ ಒಪ್ಪಿಗೆ ಇಲ್ಲʼʼಎಂದು ವಾದ ಮಾಡಿದರು.
ಇದನ್ನೂ ಓದಿ | Bigg Boss Kannada | ದೀಪಾವಳಿ ಸಂಭ್ರಮಕ್ಕೆ ಸ್ಪರ್ಧಿಗಳಿಂದ ಹಾಡು, ಡಾನ್ಸ್, ಮಸ್ತ್ ಮನರಂಜನೆ!
ಇದನ್ನೂ ಓದಿ | Bigg Boss Kannada | ದೀಪಾವಳಿ ಸಂಭ್ರಮಕ್ಕೆ ಸ್ಪರ್ಧಿಗಳಿಂದ ಹಾಡು, ಡಾನ್ಸ್, ಮಸ್ತ್ ಮನರಂಜನೆ!
ಉಳಿದ ಸ್ಪರ್ಧಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻಟಾಸ್ಕ್ ನೀಡಿದರೆ, ಕೆಲವೊಮ್ಮೆ ಸ್ಪರ್ಧಿಗಳಿಗೆ ಆಡಲು ಕಷ್ಟ ಆಗುತ್ತದೆ. ಟಾಸ್ಕ್ ಆಡಲೇ ಬೇಕಂತಾಗಿದ್ದರೆ ಬಿಗ್ ಬಾಸ್ ನೀಡುತ್ತಿದ್ದರು. ಆದರೆ ಬಿಗ್ ಬಾಸ್ ಚರ್ಚಿಸಿ ಹೇಳಿ ಎಂದಿದ್ದಾರೆʼʼ ಎಂದರು. ಕೊನೆಯಲ್ಲಿ ರೂಪೇಶ್ ರಾಜಣ್ಣ ಅವರನ್ನು ಅನುಪಮಾ ಒಪ್ಪಿಸಿದರು. ಅನುಪಮಾ ಮತ್ತು ಅಮೂಲ್ಯ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆಯಾದರು.
ಚೀಟಿ ಅಂಟಿಸುವ ಟಾಸ್ಕ್ ಬಿಗ್ ಬಾಸ್ ನೀಡಿದ್ದು, 30ನಿಮಿಷದಲ್ಲಿ ಅತಿ ಹೆಚ್ಚು ಚೀಟಿಯನ್ನು ಯಾರು ಅಂಟಿಸುತ್ತಾರೋ ಆತ ಕ್ಯಾಪ್ಟನ್ ಆಗುತ್ತಾನೆ. ಬಿಗ್ ಬಾಸ್ ಪ್ರೋಮೊ ಆಟದ ಪ್ರೋಮೊ ಹಂಚಿಕೊಂಡಿದ್ದು, ಸಂಚಿಕೆಯಲ್ಲಿ ಯಾರು ವಿಜೇತರಾಗುತ್ತಾರೆ ಎಂಬುದು ನೋಡಬೇಕಿದೆ.
ಇದನ್ನೂ ಓದಿ | Bigg Boss Kannada | ಅಪ್ಪು ನೆನೆದು ಹಾಡು ಹಾಡಿದ ಸ್ಪರ್ಧಿಗಳು: ಅರುಣ್ ಸಾಗರ್ ಪೇಂಟಿಂಗ್ ಅರ್ಥ ಏನು?