Site icon Vistara News

Bigg Boss Kannada | ಬುಟ್ಟಿ ಕೆಳಗಿರೋ ಬಣ್ಣದ ಕಣ್ಣು ಯಾರ ಪಾಲಾಯ್ತು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) 51ನೇ ದಿನ ತಂಡಗಳ ರಚನೆ ಆಗಿದೆ. ಬಿಗ್‌ ಬಾಸ್‌ ತಂಡಗಳ ರಚನೆಗೆ ವಿಶೇಷ ಟಾಸ್ಕ್‌ ನೀಡಿದ್ದಾರೆ. ಎರಡು ತಂಡಗಳಲ್ಲಿ ಅಮೂಲ್ಯ ಒಂದು ತಂಡಕ್ಕೆ ಕ್ಯಾಪ್ಟನ್‌ ಆದರೆ ಇನ್ನೊಂದು ತಂಡಕ್ಕೆ ಅರುಣ್‌ ಸಾಗರ್‌ ಕ್ಯಾಪ್ಟನ್‌ ಆಗಿದ್ದಾರೆ.

ಟಾಸ್ಕ್‌ ಅನುಸಾರ, ಮನೆಯ ಸದಸ್ಯರು ಒಬ್ಬೊಬ್ಬರಾಗಿ ಗಾರ್ಡನ್‌ ಏರಿಯಾಗೆ ಬಂದು ಒಂದು ಬುಟ್ಟಿಯನ್ನು ಆರಿಸಬೇಕು. ಅದರೊಳಗೆ ಕೆಂಪು ಮತ್ತು ನೀಲಿ ಬಣ್ಣದ ಆಕೃತಿಗಳಿವೆ. ಯಾವ ಬಣ್ಣ ಇದೆ ಎಂಬುದು ನೋಡಬೇಕು. ನಂತರ ಅದೇ ಬಣ್ಣದ ಆಕೃತಿ ಯಾವ ಬುಟ್ಟಿ ಅಲ್ಲಿ ಇದೆ ಎಂಬುದು ಊಹಿಸಿ ಅದನ್ನು ತೆರೆಯಬೇಕು. ಒಂದೇ ಬಣ್ಣದ ಆಕೃತಿ ಸಿಕ್ಕಿದರೆ ಆ ಬಣ್ಣದ ತಂಡಕ್ಕೆ ಸದಸ್ಯ ಆಯ್ಕೆಯಾಗುತ್ತಾನೆ. ಒಂದು ವೇಳೆ ಬುಟ್ಟಿಯೊಳಗೆ ಬೇರೆ ಬೇರೆ ಬಣ್ಣದ ಆಕೃತಿ ಸಿಕ್ಕರೆ ಆ ಸದಸ್ಯ ಮತ್ತೆ ಬಣ್ಣ ಸಿಗುವವರೆಗೂ ಚಟುವಟಿಕೆ ಮುಂದುವರಿಸಬೇಕು.

ಇದನ್ನೂ ಓದಿ | Bigg Boss Kannada | 50 ಸಂಚಿಕೆ ಪೂರೈಸಿದ ಬಿಗ್‌ ಬಾಸ್‌: ಇಲ್ಲಿವೆ ಫೋಟೊಗಳು!

ಕೆಂಪು ಬಣ್ಣದ ತಂಡಕ್ಕೆ ಆರ್ಯವರ್ಧನ್‌, ಕಾವ್ಯಶ್ರೀ, ಪ್ರಶಾಂತ್‌ ಸಂಬರಗಿ, ಅನುಪಮಾ, ರಾಕೇಶ್‌ ಅಡಿಗ ಮತ್ತು ಅಮೂಲ್ಯ ಆಯ್ಕೆ ಆಗಿದ್ದಾರೆ. ಈ ತಂಡಕ್ಕೆ ಅಮೂಲ್ಯ ಕ್ಯಾಪ್ಟನ್‌ ಆದರು. ನೀಲಿ ಬಣ್ಣದ ತಂಡಕ್ಕೆ ಅರುಣ್‌ ಸಾಗರ್‌, ರೂಪೇಶ್‌ ರಾಜಣ್ಣ, ರೂಪೇಶ್‌ ಶೆಟ್ಟಿ, ವಿನೋದ್‌ ಗೊಬ್ಬರಗಾಲ, ದಿವ್ಯಾ ಉರುಡುಗ ಮತ್ತು ದೀಪಿಕಾ ದಾಸ್‌ ಆಯ್ಕೆಯಾಗಿದ್ದಾರೆ. ಅರುಣ್‌ ಸಾಗರ್‌ ಕ್ಯಾಪ್ಟನ್‌ ಆದರು.

ಇದನ್ನೂ ಓದಿ | Bigg Boss Kannada | ಈ ವಾರ ನಾಮಿನೇಟ್‌ ಆದ ಸ್ಪರ್ಧಿಗಳು ಯಾರು?


Exit mobile version