Site icon Vistara News

Bigg Boss Kannada | ಕಿಡಿ ಇಲ್ಲದೆ ಕಾಡು ಹತ್ತಿ ಉರಿಯೋದಿಲ್ಲ: ಸ್ಪರ್ಧಿಗಳಿಗೆ ಕಿಚ್ಚ ಕಿವಿಮಾತು!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಐದನೇ ವಾರ ಕಿಚ್ಚ ಸುದೀಪ್‌ ಸ್ಪರ್ಧಿಗಳಿಗೆ ತಮಾಷೆ ಮಾಡುವುದರ ಜತೆ ಮನೆಯಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ದೀಪಾವಳಿಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿತ್ತು. ‘ಉಡುಗೊರೆ ಮುಖ್ಯವೇ ಅಥವಾ ಕ್ಯಾಪ್ಟನ್ಸಿ ಪಾಯಿಂಟ್ಸ್‌ ಮುಖ್ಯವೇʼ ಎಂಬುದಾಗಿತ್ತು. ಈ ಕುರಿತಂತೆ ರೂಪೇಶ್‌ ರಾಜಣ್ಣ ಮತ್ತು ಪ್ರಶಾಂತ್‌ ನಡುವೆ ಜಗಳ ತಾರಕಕ್ಕೇರಿತ್ತು. ಅರುಣ್‌ ಸಾಗರ್‌ ಅವರ ʻದುರಾಸೆʼ ಎನ್ನುವ ಪದ ಮನೆಯನ್ನು ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿತ್ತು. ಈ ಕುರಿತು ಕಿಚ್ಚ ಸುದೀಪ್‌ ಮಾತನಾಡಿದ್ದಾರೆ.

ಕಿಚ್ಚ ಸುದೀಪ್‌ ಮಾತನಾಡಿ ʻʻದೀಪಾವಳಿ ಆದ ಮೇಲೆ ರಾತ್ರಿ 10 ಗಂಟೆ ನಂತರ ಪಟಾಕಿ ಹೊಡೆಯಬಾರದೆಂಬ ಕಾನೂನು ಇದೆ. ಆದರೆ ಮನೆಯಲ್ಲಿ ಬೆಳಗ್ಗೆ 5 ಗಂಟೆವರೆಗೂ ನಡೆದಿತ್ತು. ಅಂದರೆ ಮನೆಯಲ್ಲಿ ʻದುರಾಸೆʼ ಚರ್ಚೆಗೆ ಸಾನ್ಯ ಅವರು ಕಂಪ್ಲೀಟ್‌ ಆಗಿ ನಿಭಾಯಿಸಬೇಕಿತ್ತು. ಆದರೆ ನಿಮ್ಮ ಟೋನ್‌ ಇದಕ್ಕೆ ಬೇರೆ ರೀತಿ ತಿರುವು ತೆಗೆದುಕೊಂಡಿತು. ನೀವೆಲ್ಲರೂ ಕ್ಯಾಪ್ಟನ್‌ ಆಗಬೇಕಾದರೆ ತಮ್ಮ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಲು ಎಂದು ಆಗುತ್ತೀರೋ ಅಥವಾ ಕ್ಯಾಪ್ಟನ್‌ ನನ್ನ ಅಹಂ ಅಂತಲೋʼʼಎಂದು ಪ್ರಶ್ನಿಸಿದರು. ಮಾತು ಮುಂದುವರಿಸಿದ ಕಿಚ್ಚ ʻʻಮನೆಯಲ್ಲಿ ಕ್ಯಾಪ್ಟನ್‌ ಸಾನ್ಯ ಮಾಡಿರುವ ತಪ್ಪು ಇಡೀ ಮನೆಯನ್ನೇ ಉರಿಯುವಂತೆ ಮಾಡಿದೆ. ಈ ರೀತಿ ಆಗುವುದು ಸಹಜ, ಬಿಗ್‌ ಬಾಸ್‌ ನಿಮಗೆ ಕರೆದು ತಪ್ಪು ಎಲ್ಲಿ ಆಗಿದೆ ಎಂದು ಹೇಳಿದಾಗ ತಿಳಿದುಕೊಳ್ಳಬೇಕಿತ್ತು. ಇಷ್ಟೂ ಚರ್ಚೆಗಳು ಆಗಲು ಕಾರಣ ನಿಮ್ಮ ಟೋನ್‌ ʼʼಎಂದರು ಕಿಚ್ಚ.

ಇದನ್ನೂ ಓದಿ | Bigg Boss Kannada | ಅನುಪBigg Boss Kannadaಮಾ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌: ಈ ವಾರದ ‘ಕಳಪೆ’ ಸಾನ್ಯ, ‘ಅತ್ಯುತ್ತಮ’ ಯಾರು?

ಪ್ರಶಾಂತ್‌ ಸಂಬರಗಿ ಈ ಕುರಿತಂತೆ ಮಾತನಾಡಿ ʻʻಈ ವಿಷಯ ಇನ್ನೂ ತಾರರಕ್ಕೇ ಏರುತ್ತದೆ ಎಂಬ ಕಾರಣಕ್ಕೆ ಡೈವರ್ಟ್‌ ಮಾಡಲು ಎಂಟ್ರಿ ಕೊಡಬೇಕಾಯಿತುʼʼ ಎಂದು ಹೇಳಿದರು.

ಏನಿದು ದುರಾಸೆ ವಿಚಾರ?
ಬಿಗ್‌ ಬಾಸ್‌ ಉಡುಗೊರೆ ಮುಖ್ಯವೇ ಅಥವಾ ಕ್ಯಾಪ್ಟನ್ಸಿ ಪಾಯಿಂಟ್ಸ್‌ ಮುಖ್ಯವೇʼ ಎನ್ನುವ ಟಾಸ್ಕ್‌ನಲ್ಲಿ ಮನೆಯಲ್ಲಿ ಕೆಲವರು ಎರಡೂ ಮುಖ್ಯ ಎಂಬಂತೆ ಟಾಸ್ಕ್‌ ನಿಭಾಯಿಸುತ್ತಿದ್ದರು. ಆದರೆ ಅರುಣ್‌ ಸಾಗರ್‌ ಈ ಬಗ್ಗೆ ʻʻಕ್ಯಾಪ್ಟನ್ಸಿ ಟಾಸ್ಕ್‌ ಕೂಡ ಬೇಕು, ಉಡುಗೊರೆ ಬೇಕು ಎನ್ನುವುದು ದುರಾಸೆʼʼ ಎಂದು ಹೇಳಿದ್ದರು. ಈ ಕುರಿತು ರೂಪೇಶ್‌ ರಾಜಣ್ಣ ಅವರು ಅರುಣ್‌ ಸಾಗರ್‌ ಅವರಿಗೆ ʻʻಈ ರೀತಿ ಪದ ಬಳಸಬೇಡಿʼʼ ಎಂದಿದ್ದರು. ರೂಪೇಶ್‌ ರಾಜಣ್ಣ ಅವರಿಗೂ ನೇಹಾ ಅವರು ಸಾಥ್‌ ನೀಡಿದದ್ದರು. ರೂಪೇಶ್‌ ರಾಜಣ್ಣ ಅವರು ಅರುಣ್‌ ಸಾಗರ್‌ ಅವರಿಗೆ ಸಮಾಧಾನದಿಂದಲೇ ʻʻನೀವು ದುರಾಸೆ ಎಂದು ಪದ ಬಳಸಬೇಡಿ. ಇಲ್ಲಿ ಯಾರೂ ದರಾಸೆಯಿಂದ ಆಡುತ್ತಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ಕ್ಯಾಪ್ಟನ್‌ ಜತೆ ಚರ್ಚಿಸಿʼʼಎಂದಿದ್ದರು.

ಅರುಣ್‌ ಸಾಗರ್‌ ಮತ್ತು ರೂಪೇಶ್‌ ರಾಜಣ್ಣ ಅವರ ಮಾತುಕತೆ ತಾರಕಕ್ಕೆ ಏರುತ್ತಲೇ ಹೋಗಿತ್ತು. ರೂಪೇಶ್‌ ರಾಜಣ್ಣ ಅವರು ಅರುಣ್‌ ಸಾಗರ್‌ ಮಾತಿಗೆ ಖಂಡಿಸಿದರೆ, ಅರುಣ್‌ ಸಾಗರ್‌ ಅವರು ಕೇಳಲು ತಯಾರು ಇರಲಿಲ್ಲ. ನೇಹಾ ಗೌಡ ಕೂಡ ಅರುಣ್‌ ಸಾಗರ್‌ ಅವರಿಗೆ ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಇಷ್ಟಾದ ಮೇಲೆ ಪ್ರಶಾಂತ್‌ ಸಂಬರಗಿ ಚರ್ಚೆಗೆ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ | Bigg Boss Kannada | ಕಿಚ್ಚನಿಂದ ಬಂತು ಒಂದಿಷ್ಟು ಸಂದೇಶ, ಸಂತೋಷ: ಹಿಂದಿನ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?

Exit mobile version