Site icon Vistara News

Bigg Boss Kannada | ಇನ್ನೆರಡು ವಾರದಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ: ಪ್ರವೇಶಿಸಲಿದ್ದಾರಾ ಪ್ರವೀಣರು?

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಈಗಾಗಲೇ ಮನೆಯಿಂದ ಐಶ್ವರ್ಯ ಪಿಸ್ಸೆ, ದರ್ಶ್‌ ಚಂದ್ರಪ್ಪ, ನವಾಜ್‌ ಔಟ್‌ ಆಗಿದ್ದಾರೆ. ಈ ವಾರ ಯಾರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಬಗ್ಗೆ ಗಾಸಿಪ್‌ ಕೇಳಿ ಬಂದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಕಾರ್ಯಕ್ರಮದ ಆರನೇ ಅಥವಾ ಏಳನೇ ವಾರದಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಸ್ಪರ್ಧಿ ಎಂಟ್ರಿಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮತ್ತೆ ಪ್ರವೀಣರೇ ಎಂಟ್ರಿ ಕೊಡ್ತಾರಾ?
ಸೋನು ಗೌಡ ಬಿಗ್‌ ಬಾಸ್‌ ಒಟಿಟಿಯಲ್ಲಿ ಸ್ಪರ್ಧಿಸಿದ್ದರು. ರಾಕೇಶ್‌ ಹಾಗೂ ಸೋನು ಬಹಳ ಆತ್ಮೀಯರಾಗಿದ್ದರು. ಆದರೆ ಬಿಗ್ ಬಾಸ್‌ ಸೀಸನ್‌ 9ರಲ್ಲಿ ಅಮೂಲ್ಯ‌ ಗೌಡ ಜತೆ ರಾಕೇಶ್‌ ಅತ್ಯಂತ ಆಪ್ತತೆಯಿಂದಿದ್ದಾರೆ. ಹೀಗಾಗಿ ಬಿಗ್‌ ಬಾಸ್‌ ಮನೆಗೆ ಸೋನು ಗೌಡ ಎಂಟ್ರಿ ಕೊಡುತ್ತಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ.

ಒಟಿಟಿಯಲ್ಲಿ ರಾಕೇಶ್‌ ಜತೆ ಉಳಿದ ಸ್ಪರ್ಧಿಗಳು ಮಾತನಾಡುತ್ತಿದ್ದರೆ ಸೋನು ಗೌಡ ಪೊಸೆಸಿವ್‌ ಆಗುತ್ತಿದ್ದರು. ಹೀಗಾಗಿ ಈ ಮನೆಗೆ ಮತ್ತೆ ಸೋನು ಬಂದರೆ ಏನಾಗಬಹುದು ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.


ಮತ್ತೆ ಬರ್ತಾರಾ ಅರ್ಜುನ್‌ ರಮೇಶ್‌, ಲೋಕೇಶ್‌ ಕುಮಾರ್‌?
ಒಟಿಟಿ ಸೀಸನ್‌ನಲ್ಲಿ ಅರ್ಜುನ್‌ ರಮೇಶ್‌ ಅವರಿಗೆ ಕೈ ಪೆಟ್ಟಾಗಿತ್ತು. ಹೀಗಾಗಿ ಬಿಗ್‌ ಬಾಸ್‌ ಮನೆಯಿಂದ ಅರ್ಧಕ್ಕೆ ಮನೆಯಿಂದ ಹೊರ ನಡೆದಿದ್ದರು. ಹಾಗೆಯೇ ಲೋಕೇಶ್ ಕುಮಾರ್ ಅವರ ಕಾಲಿಗೆ ಪೆಟ್ಟಾಗಿತ್ತು. ಆರೋಗ್ಯದ ದೃಷ್ಟಿಯಿಂದ ಬಿಗ್ ಬಾಸ್ ಮನೆಯಿಂದ ಲೋಕೇಶ್ ಕುಮಾರ್ ಹೊರ ನಡೆದರು. ಇದೀಗ ಈ ಇಬ್ಬರು ಸ್ಪರ್ಧಿಗಳು ಮತ್ತೆ ವೈಲ್ಡ್‌ ಕಾರ್ಡ್‌ ಎಂಟ್ರಿಯಲ್ಲಿ ಬರುತ್ತಾರಾ ಎಂಬ ಮಾತುಗಳು ಕೇಳಿ ಬಂದಿವೆ.

ಪ್ರೋಮೊದಲ್ಲಿ ವೈಷ್ಣವಿ ಗೌಡ
ವೈಷ್ಣವಿ ಗೌಡ ಬಿಗ್‌ ಬಾಸ್‌ ಸೀಸನ್‌ 9ರ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದರು. “ಪ್ರವೀಣರುʼ ಆದ ಇವರು ಈ ಸೀಸನ್‌ ಅಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ಇತ್ತು. ಇದೀಗ ಮನೆಗೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಬರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.



Exit mobile version