ಬೆಂಗಳೂರು: ಸೋಷಿಯಲ್ ಮೀಡಿಯಾಗಳಲ್ಲಿ ಬಿಗ್ ಬಾಸ್ ಕನ್ನಡ (Bigg Boss Kannada) ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಆರಂಭವಾಗಲಿದೆ ಎನ್ನಲಾಗಿದೆ. ಈಗಾಗಲೇ ಅದಕ್ಕೆ ಬೇಕಾಗುವ ಸಿದ್ಧತೆಯನ್ನು ವಾಹಿನಿ ಮಾಡಿಕೊಳ್ಳುತ್ತಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಆದರೆ ಅದೇ ಸಮಯದಲ್ಲಿ ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಏಕದಿನ ವಿಶ್ವಕಪ್ (world cup 2023) ನಡೆಯಲಿದೆ. ಒಂದು ವೇಳೆ ಬಿಗ್ ಬಾಸ್ ಇದೇ ಸಮಯದಲ್ಲಿ ಶುರುವಾದರೆ ಇವೆರಡರ ದಿನಾಂಕ ಕ್ಲ್ಯಾಶ್ ಆಗುವುದಂತೂ ಪಕ್ಕಾ. ಇದಕ್ಕೂ ಮೀರಿ ಕಲರ್ಸ್ ಕನ್ನಡ ಅದೇ ಸಮಯಕ್ಕೆ ಬಿಗ್ ಬಾಸ್ ಪ್ರಸಾರ ಮಾಡಲಿದೆಯಾ ಎಂಬುದು ವೀಕ್ಷಕರಿಗೆ ಕುತೂಹಲ ಹೆಚ್ಚಾಗಿದೆ.
ಅಷ್ಟೇ ಅಲ್ಲದೇ ಈ ಬಾರಿ ವರ್ಲ್ಡ್ ಕಪ್ ಬೆಂಗಳೂರಿನಲ್ಲಿಯೂ ನಡೆಯಲಿದೆ. ಈ ಬಾರಿ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯುತ್ತಿದೆ. 46 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಆದರೆ ಭಾರತ-ಪಾಕಿಸ್ತಾನ ಪಂದ್ಯವನ್ನು ಮರು ನಿಗದಿಪಡಿಸುವ ಹೆಚ್ಚಿನ ಸಾಧ್ಯತೆಗಳಿವೆ. ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಎರಡೂ ತಂಡಗಳು ಅಕ್ಟೋಬರ್ 15 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿವೆ. ಹೀಗಿರುವಾಗ ಕಲರ್ಸ್ ಕನ್ನಡಕ್ಕೆ ಈ ಬಾರಿ ಸವಾಲ್ ಆಗಿದೆ.
ಮೂಲಗಳ ಪ್ರಕಾರ ಆಗಿದೆ ಪ್ರತಿ ಸಲವೂ ಬಿಗ್ ಬಾಸ್ ಮನೆ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುತ್ತಿತ್ತು. ಈ ಬಾರಿ ಮನೆಯನ್ನೇ ಶಿಫ್ಟ್ ಮಾಡಲಾಗಿದೆಯಂತೆ. ಬೆಂಗಳೂರಿನ ಕುಂಬಳಗೋಡು ಬಳಿ ಇರುವ ದೊಡ್ಡ ಆಲದಮರದ ಹತ್ತಿರ ಮನೆಯನ್ನು ನಿರ್ಮಾಣ ಮಾಡಲಾಗಿದೆಯಂತೆ ಎಂದು ವರದಿಯಾಗಿದೆ.
ಇದನ್ನೂ ಓದಿ: Bigg Boss Kannada: ಕನ್ನಡ ಬಿಗ್ ಬಾಸ್ ಯಾವಾಗ ಶುರು? ಈ ಬಾರಿ ತಂಡಕ್ಕಿದೆ ಹೊಸ ಸವಾಲ್!
ಸಿನಿಮಾಗಳಲ್ಲಿ ಬ್ಯುಸಿಯಾದ ಕಿಚ್ಚ
ಮೂಲಗಳ ಪ್ರಕಾರ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ಹೊರಗಡೆಯೇ ಹೆಚ್ಚು ಇರಲಿದೆ. ಹಾಗಾಗಿ ಬಿಗ್ ಬಾಸ್ ಗಾಗಿ ಸುದೀಪ್ ಡೇಟ್ಸ್ ಹೇಗೆ ಹೊಂದಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಯೇ ಶಿಫ್ಟ್ ಆಗಿದೆ ಎನ್ನುವ ಮಾಹಿತಿಯೂ ವರದಿ ಆಗಿದೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.