ಬಿಗ್ ಬಾಸ್ ಸೀಸನ್ 10 (BBK Season 10) ಶುರುವಾಗಿ, ಮೂರನೇ ದಿನಕ್ಕೆ ಕಾಲಿಟ್ಟಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಆತ್ಮೀಯತೆ, ಜಗಳ, ಮುನಿಸು, ಚರ್ಚೆ ಎಲ್ಲವೂ ಶುರುವಾಗಿದೆ. ಇದರ ಜತೆಗೆ ಈ ಬಾರಿ ವಿಶೇಷ ಅಂದರೆ ʻʻಹ್ಯಾಪಿ ಬಿಗ್ ಬಾಸ್ʼʼ. ಇಷ್ಟೂ ವರ್ಷಗಳಲ್ಲಿ ಬಿಗ್ ಬಾಸ್ ಎಂದರೆ ಪ್ರೇಕ್ಷಕರಿಗೆ ತುಂಬ ಗಂಭೀರ ಎಂದು ಪರಿಗಣಿಸಿದ್ದರು. ಆದರೆ ಈ ಸೀಸನ್‌ನಲ್ಲಿ ಬಿಗ್ ಬಾಸ್ ಕೊಂಚ ಬದಲಾಗಿದ್ದಾರೆ. ಅಂದರೆ ಸಖತ್ ಜೋಕ್ ಹಾಗೂ ತಮ್ಮ ಹಾಸ್ಯದ ಮಾತುಗಳಿಂದ ಸ್ಪರ್ಧಿಗಳಿಗೆ ಜೋಶ್ ಕೊಡುತ್ತಿದ್ದಾರೆ.
ಶುರುವಾದಾಗಿನಿಂದಲೂ ಅಲ್ಲಲ್ಲಿ ಸ್ಪರ್ಧಿಗಳ ಜತೆ ಬಿಗ್ ಬಾಸ್ ಮಾತುಕತೆ ಮಾಡುತ್ತಾರೆ. ರೂಲ್ಸ್ ಜತೆಗೆ ಕಾಲೆಳೆಯುತ್ತಾರೆ. ತುಕಾಲಿ ಸಂತೋಷ್ ವಿಚಾರದಲ್ಲೂ ಹಾಗೇ ಆಯ್ತು. ಈ ಬಾರಿ ಬಿಗ್ ಬಾಸ್‌ನಲ್ಲಿ ಇಬ್ಬರು ಸಂತೋಷ್ ಇದ್ದ ಕಾರಣ , ಈ ಸಮಸ್ಯೆಯನ್ನು ಆರಾಮದಾಯಕವಾಗಿ ನಿಭಾಯಿಸಿಕೊಟ್ಟರು ಬಿಗ್ ಬಾಸ್.
ʻತುಕಾಲಿ ಸಂತೋಷ್ ಎಂದರೆ ಸರಿ ಬರುವುದಿಲ್ಲ,. ಹಾಗಾಗಿ ಇನ್ನೊಬ್ಬರನ್ನು ಸಂತೋಷ್ ಎಂದು ಕರೆಯೋಣ. ತುಕಾಲಿ ಸಂತೋಷ್ ಅವರನ್ನು, ತುಕಾಲಿ ʻಅವರೇʼ ಎಂದು ಕರೆಯೋಣʼ ಎಂದು ಬಿಗ್ ಬಾಸ್ ಹೇಳಿ ಸ್ಪರ್ಧಿಗಳನ್ನು ನಗೆಗಡಲಲ್ಲಿ ತೇಲಿಸಿದರು.
ಇದನ್ನೂ ಓದಿ: BBK Season 10: ಕಾರ್ತಿಕ್, ಸಂಗೀತಾ ಲವ್‌ಸ್ಟೋರಿ ಶುರುನಾ? ಬೆಸ್ಟ್ ಫ್ರೆಂಡ್ಸ್ ಅಂತಿದೆ ಜೋಡಿ!
ಕಳೆದ ಸಂಚಿಕೆಯಲ್ಲಿ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿಯೂ ಸಹ ಬಿಗ್ ಬಾಸ್ ಸ್ಪರ್ಧಿಗಳಿಗೆ ತುಂಬ ಜೋಶ್ ಬರುವಂತೆ ಮಾಡಿದರು. ಸ್ನೇಹಿತ್, ತುಕಾಲಿ ಸಂತೋಷ್ ಹಾಗೂ ನಮ್ರತಾ ಅವರಿಗೆ ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ನೀಡಿತ್ತು. ಇದರ ಅನುಸಾರ ಮೂರು ಗಡಿಯಾರದಂತಹ ಆಕೃತಿಯಲ್ಲಿರುವ ಹಿಡಿಕೆಯನ್ನು ಹಿಡಿದು ಸಂಭಾಳಿಸುತ್ತ ನಿಲ್ಲಬೇಕು. ಕೊನೆಯವೆರೆಗೆ ಯಾರು ನಿಲ್ಲೋತ್ತಾರೋ ಅವರು ಕ್ಯಾಪ್ಟನ್ ಆಗುತ್ತಾರೆ. ಈ ವೇಳೆ ಕೈ ನೋವಿನಿಂದ ನಮ್ರತಾ ಗೌಡ ಅಳಲು ಶುರು ಮಾಡಿದರು. ಆಗ ಬಿಗ್ ಬಾಸ್ ಹೇಳಿದ್ದೇನು ಗೊತ್ತಾ?
ನಮ್ರತಾಗೆ ಬಿಗ್ ಬಾಸ್ ಅಳುವುದನ್ನು ಕಂಡು ʻʻನಮ್ರತಾ ನಿಮ್ಮ ನಗು ಚೆನ್ನಾಗಿದೆʼʼಅಂದಾಕ್ಷಣ ನಮ್ರತಾ ಗೌಡ ಫಸ್ಟ್ ಹುಡುಗ ನನ್ನ ಜತೆ ಫ್ಲರ್ಟ್ ಮಾಡಿದ್ದು ಎಂದರು. ಅಷ್ಟೇ ಅಲ್ಲದೇ ನಮ್ರತಾ ಅವರು ʻʻಬಿಗ್ ಬಾಸ್ ಅವರ ಧ್ವನಿ ನನಗೆ ತುಂಬ ಇಷ್ಟ.ʼʼಎಂದರು. ಇದರ ಜತೆಗೆ ತುಕಾಲಿ ಸಂತೋಷ್ ಕೂಡ ಬಿಗ್ ಬಾಸ್ ಕಾಳೆಯುತ್ತಿದ್ದರು. ಅಷ್ಟೇ ಅಲ್ಲದೇ ಬಿಗ್ ಬಾಸ್ ತುಕಾಲಿ ಸಂತೋಷ್ ಅವರು ನಿಂತಿರುವ ಭಂಗಿಯ ಕುರಿತಾಗಿಯೂ ತಮಾಷೆ ಮಾಡಿದ್ದಾರೆ. ಒಟ್ಟಾರೆ ಕೊನೆಯ ಕ್ಯಾಪ್ಟನ್ಸಿ ಟಾಸ್ಕ್ ಆಗುವ ವೇಳೆ ಬಿಗ್ ಬಾಸ್ ಸ್ಪರ್ಧಿಗಳ ಜತೆ ಬೆರೆಯುವಂತಹ ದೃಶ್ಯ ಮಾತ್ರ ಪ್ರೇಕ್ಷಕರಲ್ಲಿ ನೆನಪುಳಿಯುವಂತಿತ್ತು.
ಇದನ್ನೂ ಓದಿ: BBK Season 10: ಕೆಲವು ಸಮರ್ಥರಿಗೆ ‘ನಾಲಾಯಕ್’ ಪಟ್ಟ; ಬಿಗ್ ಬಾಸ್ ಸೀಸನ್ 10ರ ಮೊದಲ ಕ್ಯಾಪ್ಟನ್ ಇವರು!
ಬಿಗ್ ಬಾಸ್ ಶುರುವಾಗುವ ಮುಂಚೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೊವನ್ನು ರಿಲೀಸ್ ಮಾಡಿ, ಇದು ಹ್ಯಾಪಿ ಬಿಗ್ ಬಾಸ್ ಎಂದು ಒತ್ತಿ ಒತ್ತಿ ಹೇಳಿಕೊಂಡಿತ್ತು. ಸಂಚಿಕೆ ಕಳೆದಂತೆ ಪ್ರೇಕ್ಷಕರಲ್ಲಿ ಅರಿವಾಗತೊಡಗಿದೆ.