Site icon Vistara News

Bigg Boss OTT 3: ಬಿಗ್​ ಬಾಸ್​ ಒಟಿಟಿ ಪ್ರಸಾರಕ್ಕೆ ಮುಹೂರ್ತ ಫಿಕ್ಸ್​: ಹೊಸ ನಿರೂಪಕನಾಗಿ ಅನಿಲ್​ ಕಪೂರ್​ ಎಂಟ್ರಿ!

Bigg Boss OTT 3 Know when and where to stream the show

ಬೆಂಗಳೂರು: ಹಿಂದೆ ʻಬಿಗ್ ಬಾಸ್ OTTʼ ಹೊಸ ಸೀಸನ್‌ ಮತ್ತೆ ಬರುತ್ತಿದೆ. ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಆರಂಭ ಆಗಲಿದೆ. ಹಿಂದಿಯ ‘ಬಿಗ್​ ಬಾಸ್​ ಒಟಿಟಿ 3 (Bigg Boss OTT 3) ಕಾರ್ಯಕ್ರಮವನ್ನು ಈ ಬಾರಿ ಅನಿಲ್​ ಕಪೂರ್​ (Anil Kapoor) ನಡೆಸಿಕೊಡಲಿದ್ದಾರೆ. ಸಲ್ಮಾನ್‌ ಖಾನ್‌ ಈ ಬಾರಿ ಒಟಿಟಿ ಸೀಸನ್‌ನಿಂದ ಹಿಂದೆ ಸರಿದಿದ್ದಾರೆ. ಜೂನ್​ 21ರಂದು ಈ ಕಾರ್ಯಕ್ರಮದ ಪ್ರಸಾರ ಆರಂಭ ಆಗಲಿದೆ.

ಬಿಗ್ ಬಾಸ್ OTT ಯ ಹೊಸ ಸೀಸನ್‌ಗೆ ಹೊಸ ಹೋಸ್ಟ್ʼʼಎಂದು ಪ್ರೋಮೊ ಹಂಚಿಕೊಂಡಿದೆ ಜಿಯೋ ಸಿನಿಮಾ. ಆರಂಭದಲ್ಲಿ ಒಟಿಟಿ ಸೀಸನನ್ನು ಕರಣ್ ಜೋಹರ್ ಹೋಸ್ಟ್ ಮಾಡಿದರು, ನಂತರ ಎರಡನೇ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಮಾಡಿದರು. ಮೇಗೆ ಒಟಿಟಿ ಪ್ರೀಮಿಯರ್‌ ಆಗಲಿದೆ ಎನ್ನಲಾಗಿತ್ತು. ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ಅನಿಲ್​ ಕಪೂರ್​ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿದೆ. ಹಾಗಾಗಿ ಇದು ಪಕ್ಕಾ ಅನಿಲ್​ ಕಪೂರ್​ ಎಂಬುದು ಖಚಿತವಾಗಿದೆ.

ಮೂರನೇ ಸೀಸನ್​ನಲ್ಲಿ ಸಲ್ಮಾನ್​ ಖಾನ್​ ಅವರು ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಕಂದರ್​’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.. ಅನಿಲ್ ಕಪೂರ್ ಅವರ ಹೋಸ್ಟಿಂಗ್ ಜತೆಗೆ ಈ ಬಾರಿ ಜನಪ್ರಿಯ ತಾರೆಗಳಾದ ಶಿವಂಗಿ ಜೋಶಿ ಮತ್ತು ಶಫಕ್ ನಾಜ್ ಕೂಡ ಇರಲಿದ್ದಾರೆ ಎನ್ನಲಾಗಿದೆ.  ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. 

ಇದನ್ನೂ ಓದಿ: Bigg Boss OTT 3: ಶುರುವಾಗಲಿದೆ ಬಿಗ್​ ಬಾಸ್​ ಒಟಿಟಿ 3: ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್!

ದಿವ್ಯಾ ಅಗರ್ವಾಲ್ ಬಿಗ್ ಬಾಸ್ OTT ಮೊದಲ ಸೀಸನ್ ಗೆದ್ದಿದ್ದರು. ಎರಡನೇ ಸೀಸನ್‌ನಲ್ಲಿ, ಎಲ್ವಿಶ್ ಯಾದವ್ ಇತಿಹಾಸವನ್ನು ಬರೆದರು. ದಲ್ಜಿತ್ ಕೌರ್, ಶೆಹಜಾದಾ ಧಾಮಿ, ಪ್ರತೀಕ್ಷಾ ಹೊನ್ಮುಖೆ ಮತ್ತು ಅರ್ಹಾನ್ ಬೆಹ್ಲ್ ಅವರಂತಹ ಸೆಲೆಬ್ರಿಟಿಗಳು ‘ಬಿಗ್ ಬಾಸ್ OTT 3’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.ಈ ಬಾರಿ ಒಟಿಟಿ ಸೀಸನ್‌ಗೆ ಸೋಷಿಯಲ್ ಮೀಡಿಯಾ ಸ್ಟಾರ್ ಜಾಸ್ಮಿನ್ ಕೌರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ʻಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ʼ ಎಂದು ಹೇಳುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆದವರು ಜಾಸ್ಮಿನ್ ಕೌರ್.

ಸಲ್ಮಾನ್ ಖಾನ್ ‘ಬಿಗ್ ಬಾಸ್ OTT 2’ ಅನ್ನು ಆಯೋಜಿಸಿದ್ದರು. ಇದರಲ್ಲಿ ಎಲ್ವಿಶ್ ಯಾದವ್ ವಿಜೇತರಾಗಿ ಹೊರಹೊಮ್ಮಿದ್ದರು. ಅಭಿಷೇಕ್ ಮಲ್ಹಾನ್ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಮನೀಶಾ ರಾಣಿ ಎರಡನೇ ರನ್ನರ್ ಅಪ್ ಆಗಿದ್ದರು. ಎಲ್ವಿಶ್ ಯಾದವ್ ಗೆಲುವಿನ ನಂತರ ಹಲವು ವಿವಾದಗಳನ್ನು ಎದುರಿಸಿದ್ದರು. ವಿಶೇಷವಾಗಿ ಹಾವಿನ ವಿಷದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದರು, ಜಾಮೀನಿನ ಬಳಿಕ ಎಲ್ವಿಶ್ ಯಾದವ್ ಅವರನ್ನು ಬಿಡುಗಡೆ ಮಾಡಿದ್ದರು.

Exit mobile version