Site icon Vistara News

Bigg Boss Kannada | ಮೊದಲ ಕ್ಯಾಪ್ಟನ್‌ ಆಗಿ ಅರ್ಜುನ್‌ ರಮೇಶ್‌ ಆಯ್ಕೆ

Bigg Boss Kannada

ಬೆಂಗಳೂರು: ಬಿಗ್‌ಬಾಸ್ ಒಟಿಟಿಯ (Bigg Boss Kannada) ಮೊದಲ ಕ್ಯಾಪ್ಟನ್‌ ಆಗಿ ಕಿರುತೆರೆ ನಟ ಅರ್ಜುನ್‌ ರಮೇಶ್‌ ಆಯ್ಕೆಯಾಗಿದ್ದಾರೆ.

ಅರ್ಜುನ್‌ ರಮೇಶ್‌ ಅವರು ಬುಧವಾರ ನನ್ನ ಜೀವನ ಸಂಜಯ್‌ ದತ್‌ ಅವರನ್ನೇ ಹೋಲುತ್ತದೆ ಎಂದು ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಇದುವರೆಗೂ ಎಲ್ಲಿಯೂ ಹಂಚಿಕೊಳ್ಳದ ವಿಷಯಗಳನ್ನು ಹೇಳಿ ಎಲ್ಲ ಸ್ಪರ್ಧಿಗಳ ಗಮನ ಸೆಳೆದಿದ್ದರು. ಇದೀಗ ಅವರನ್ನು ಮನೆಯ ನಾಯಕನೆಂದು ಬಿಗ್‌ಬಾಸ್‌ ಘೋಷಿಸಿದ್ದಾರೆ.

ಸ್ಪರ್ಧಿಗಳ ಅಭಿಪ್ರಾಯ ಪಡೆದು ಈ ಆಯ್ಕೆ ಮಾಡಲಾಗಿದೆ. ಹದಿಮೂರನೇ ಕಂಟೆಸ್ಟ್‌ ಆಗಿ ಅವರು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ನಟ, ರಾಜಕಾರಣಿ ಎರಡೂ ಆಗಿರುವ ಅರ್ಜುನ್ ರಮೇಶ್ ಸದ್ಯ ಪುರಸಭಾ ಸದಸ್ಯರಾಗಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿಯೂ ಇದೇ ರೀತಿಯಾಗಿ ನಾಯಕತ್ವವನ್ನು ತೋರುತ್ತಿದ್ದಾರೆ. ಇವರ ತಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಇದನ್ನೂ ಓದಿ| Bigg Boss Kannada | ವೇಕ್‌ ಅಪ್‌ ಸಾಂಗ್‌ಗೆ ಸಖತ್‌ ಸ್ಟೆಪ್‌ ಹಾಕಿದ ಸ್ಪರ್ಧಿಗಳು: ಧ್ಯಾನಸ್ಥನಾದ ರಾಕೇಶ್‌!

Exit mobile version